
ಆಸ್ತಿ ವಿವಾದಕ್ಕೆ ತಾಯಿ-ಮಗನ ಬರ್ಬರ MURDER – ಕಲ್ಲಿನಿಂದ ಜಜ್ಜಿ ಕೊಂದ ದುರುಳರು!
ಆಸ್ತಿ ಕಲಹದ ಹಿನ್ನೆಲೆಯಲ್ಲಿ ತಾಯಿ ಮತ್ತು ಮಗನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ, ಬಳಿಕ ಕಲ್ಲಿನಿಂದ ಹಲ್ಲೆ ಮಾಡಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕುಸನೂರು ಗ್ರಾಮದಲ್ಲಿ ನಡೆದಿದೆ. ಮೃತರನ್ನು ಪ್ರೇಮಕ್ಕ ಬಡಿಗೇರ (55) ಹಾಗೂ ಅವರ ಪುತ್ರ ಅವಿನಾಶ್ ಬಡಿಗೇರ (38) ಎಂದು ಗುರುತಿಸಲಾಗಿದೆ. ತಿರಕಯ್ಯ ಹೊಸಮಠ ಹಾಗೂ ಬಸವರಾಜ ಹೊಸಮಠ ಈ ಕೃತ್ಯವೆಸಗಿದ ಆರೋಪಿಯಾಗಿದ್ದಾನೆ.
ಕೋರ್ಟ್ ಆದೇಶದ ಬಳಿಕ ಮತ್ತೆ ಭುಗಿಲೆದ್ದ ಆಸ್ತಿ ವಿವಾದ
ಮಾಹಿತಿಯ ಪ್ರಕಾರ, ಕೆಲವು ವರ್ಷಗಳ ಹಿಂದೆ ಪ್ರೇಮಕ್ಕ ಅವರ ಕುಟುಂಬ ಆರೋಪಿಗಳಿಂದ ಮನೆ ಹಾಗೂ ಜಾಗವನ್ನು ಖರೀದಿಸಿತ್ತು. ಹಣ ಪಾವತಿಸಿದ್ದರೂ ಆಸ್ತಿ ಹಾಗೂ ಮನೆಯನ್ನು ತಮ್ಮ ಹೆಸರಿಗೆ ಅಧಿಕೃತವಾಗಿ ವರ್ಗಾವಣೆ ಮಾಡದೆ ಆರೋಪಿಗಳು ಸತಾಯಿಸುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರೇಮಕ್ಕ ಅವರು ನ್ಯಾಯಾಲಯದ ಮೊರೆ ಹೋಗಿದ್ರು. ಕಾನೂನು ಹೋರಾಟದ ಬಳಿಕ ಇತ್ತೀಚೆಗೆ ನ್ಯಾಯಾಲಯದ ಆದೇಶದಂತೆ ಮನೆ ಅವರ ಸುಪರ್ದಿಗೆ ಬಂದಿತ್ತು ಎನ್ನಲಾಗಿದೆ.
READ THIS : ಹಣಕ್ಕಾಗಿ ಮಹಿಳೆಯ Murder – ಲಾಸ್ಟ್ ಕಾಲ್ನಿಂದ ಸಿಕ್ಕಿಬಿದ್ದ ಆರೋಪಿ!

ಇದ್ರಿಂದ ಆಸ್ತಿ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿದ್ದ ಆರೋಪಿಗಳು, ಇದೇ ವಿಚಾರವಾಗಿ ತಾಯಿ-ಮಗನೊಂದಿಗೆ ದ್ವೇಷ ಬೆಳೆಸಿಕೊಂಡಿದ್ದರು ಎನ್ನಲಾಗಿದೆ.
ಮಾರಕಾಸ್ತ್ರಗಳಿಂದ ದಾಳಿ
ಬುಧವಾರ ಪ್ರೇಮಕ್ಕ ಹಾಗೂ ಅವಿನಾಶ್ ಅವರ ಮೇಲೆ ಆರೋಪಿಗಳು ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದು, ಬಳಿಕ ತಲೆ ಮೇಲೆ ಕಲ್ಲು ಎತ್ತಿಹಾಕಿ ಇಬ್ಬರನ್ನೂ ಹತ್ಯೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಆಡೂರು ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

MUST WATCH : ತಾಕತ್ತಿದ್ದರೇ ಕೇಸರಿ ಬಂಟಿಂಗ್ಸ್ ಮುಟ್ಟಿ – ತೊಡೆತಟ್ಟಿ ಸುರೇಶ್ ಗೌಡ ಸವಾಲ್



