ಎದುರು ಮನೆಯವನಿಂದ ಲೈಂಗಿಕ ಕಿರುಕುಳ ಆರೋಪ – ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ Suicide ಗೆ ಶರಣಾದ್ಳಾ.?

ಇನ್ನು ಬಾಳಿ ಬದುಕಬೇಕಿದ್ದ 20 ವರ್ಷದ ನರ್ಸಿಂಗ್ ಓದುತ್ತಿದ್ದ ವಿದ್ಯಾರ್ಥಿನಿಯೋರ್ವಳು, ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ರಾಮತೀರ್ಥ ಹೊಸಕೊಪ್ಪ ಗ್ರಾಮದಲ್ಲಿ ನಡೆದಿದೆ. ಅನುಪಮಾ ಎಂಬ ಯುವತಿ ಆಗಸ್ಟ್ 11ರಂದು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದೀಗ ಪ್ರಕರಣಕ್ಕೆ ಆಡಿಯೋ ಸಂಭಾಷಣೆಯೊಂದು ಹೊಸ ತಿರುವು ನೀಡಿದೆ.

ಎದುರು ಮನೆಯವನಿಂದ ಲೈಂಗಿಕ ಕಿರುಕುಳ ಆರೋಪ
ಅನುಪಮಾಗೆ ಎದುರುಮನೆಯ ಅಕ್ಷಯ್ ಮಾಂಗ್ಲೆನವರ್ ಎಂಬಾತ ಕಿರುಕುಳ ನೀಡುತ್ತಿದ್ದ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ಬಂದು ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡುತ್ತಿದ್ದ. ಅಲ್ದೇ ಅಶ್ಲೀಲ ಫೋಟೋ–ವಿಡಿಯೋಗಳನ್ನು ತೋರಿಸಿ ಮಾನಸಿಕವಾಗಿ ಹಿಂಸಿಸುತ್ತಿದ್ದ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
READ THIS : ತಾಯಿಯ ಕಣ್ಣೆದುರೇ ಯುವತಿ ಕಾವೇರಿ ನದಿಗೆ ಹಾರಿ Suicide.!

ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾದ್ಳಾ.?
ಇನ್ನು ಈ ಕಿರುಕುಳದ ಬಗ್ಗೆ ಅನುಪಮಾ ತನ್ನ ಅಕ್ಕನ ಬಳಿ ಹೇಳಿಕೊಂಡಿದ್ದಳಂತೆ. ಅಲ್ಲದೇ ಸಾವಿಗೂ ಮುನ್ನ ನಡೆದ ಅಕ್ಕ–ತಂಗಿಯ ಸಂಭಾಷಣೆಯ ಆಡಿಯೋ ಸಿಕ್ಕಿದ್ದು, ಆಡಿಯೋದಲ್ಲಿ ಅನುಪಮಾ ತನ್ನ ಮೇಲಾದ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದಾಳೆ. ಜೊತೆಗೆ ಅನುಪಮಾ ದರ್ಶನ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದ್ದು, ಈ ವಿಚಾರಕ್ಕೆ ಮನೆಯವರ ವಿರೋಧವೂ ಇತ್ತು ಎಂದು ತಿಳಿದುಬಂದಿದೆ. ಮತ್ತೊಂದೆಡೆ ಎದುರುಮನೆಯ ವ್ಯಕ್ತಿಯಿಂದ ಕಿರುಕುಳದ ಆರೋಪ ಕೇಳಿಬಂದಿರುವುದು ಪ್ರಕರಣವನ್ನು ಮತ್ತಷ್ಟು ಗಂಭೀರಗೊಳಿಸಿದೆ.
Suicide – ತನಿಖೆಯಿಂದಷ್ಟೇ ಸತ್ಯ ಹೊರಬರಬೇಕಿದೆ
ಇನ್ನು ಮಗಳ ಸಾವಿಗೆ ಅಕ್ಷಯ್ ಕಾರಣ ಎಂದು ಆರೋಪಿಸಿರುವ ಕುಟುಂಬಸ್ಥರು, ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ. ಸದ್ಯ ಘಟನೆ ಸಂಬಂಧ ಹಾನಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದು, ಪೊಲೀಸರ ತನಿಖೆಯಿಂದಷ್ಟೇ ಪ್ರಕರಣದ ಸಂಪೂರ್ಣ ಸತ್ಯ ಹೊರಬರಬೇಕಿದೆ.

MUST WATCH : ಕರೆಂಟ್ ಕಳ್ಳ ಅಂತೆ ಕರೆಂಟ್ ಕಳ್ಳ – DK ವಿರುದ್ದ HDK ಹಿಗ್ಗಾಮುಗ್ಗಾ ವಾಗ್ದಾಳಿ




