
ಪ್ರೀತಿಸಿ ಮದುವೆಯಾದವಳ ಬಾಳಲ್ಲಿ ದುರಂತ ಅಂತ್ಯ.! – ಗಂಡನ ಮನೆಯವರ ಕಿರುಕುಳಕ್ಕೆ ಬೇಸತ್ತು ಮಹಿಳೆ SUICIDE
ಇತ್ತೀಚಿನ ದಿನಗಳಲ್ಲಿ ಲವ್ ಮ್ಯಾರೇಜ್ಗಳು ಹೆಚ್ಚಾಗ್ತಿದ್ರೆ, ಮತ್ತೊಂದೆಡೆ ಮದುವೆ ಆದ ಕೆಲವೇ ತಿಂಗಳುಗಳಲ್ಲಿ ಮದುವೆಗಳು ಮುರಿದು ಬೀಳ್ತಾ ಇದೆ. ಇನ್ನು ಕೆಲವರ ಸಂಸಾರದಲ್ಲಿ ಗಲಾಟೆಗಳು ಹೆಚ್ಚಾಗಿ, ಕೊಲೆ ಆತ್ಮಹತ್ಯೆಗಳಂತಹ ಪ್ರಕರಣಗಳು ಕೂಡ ಬೆಳಕಿಗೆ ಬರ್ತಾ ಇವೆ. ಪ್ರೀತಿ ಮಾಡುವಾಗ ಇರದ ಜಾತಿ ವಿಚಾರ ಮದುವೆಯಾದ ಮೇಲೆ ಯಾಕೆ ಬರುತ್ತೋ ಗೊತ್ತಿಲ್ಲ. ಆದ್ರೆ ಇದೀಗ ಪ್ರೀತಿಸಿ ಮದುವೆ ಆಗಿದ್ದ ಮಹಿಳೆಯೊಬ್ಬಳು ಗಂಡನ ಮನೆಯವರ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಬೈರಾಪೂರ ಗ್ರಾಮದಲ್ಲಿ ನಡೆದಿದೆ.
ಗಂಡನ ಮನೆಯವರಿಂದ ನಿರಂತರ ಕಿರುಕುಳ
ಸುನಿತಾ ಎಂಬಾಕೆ ಆತ್ಮಹತ್ಯೆಗೆ ಶರಣಾಗಿರುವ ಮಹಿಳೆ. ಇನ್ನು ಸುನಿತಾ ಬೈರಾಪೂರ ಗ್ರಾಮದ ರಾಮಪ್ಪ ಎಂಬಾತನನ್ನ ಪ್ರೀತಿಸಿ ವಿವಾಹವಾಗಿದ್ರು.
ಇಬ್ಬರಿಗೂ ಇದು ಎರಡನೇ ವಿವಾಹವಾಗಿತ್ತು. ಮದುವೆಯಾದ ಹೊಸದ್ರಲ್ಲಿ ಇಬ್ಬರು ಚೆನ್ನಾಗಿದ್ರು. ಆದ್ರೆ ಬಳಿಕ ಪತಿಯ ಮನೆಯವರಿಂದ ಸುನಿತಾಗೆ ನಿರಂತರವಾಗಿ ಕಿರುಕುಳ ನೀಡಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ.
READ THIS : ಯುವಕನ ಕಿಡ್ನಾಪ್ ಮಾಡಿ ಕೊಲೆ – ಮೃತದೇಹ ರೈಲ್ವೆ ಟ್ರ್ಯಾಕ್ ಬಳಿ ಎಸೆದು ಪರಾರಿ!

ಪ್ರೀತಿಸಿ ಮದುವೆಯಾದವಳ ಬಾಳಲ್ಲಿ ದುರಂತ ಅಂತ್ಯ!
ಇನ್ನು ರಾಮಪ್ಪ ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದು, ಸುನಿತಾ ಲಂಬಾಣಿ ಸಮುದಾಯಕ್ಕೆ ಸೇರಿದವ್ರು. ಇದೇ ವಿಚಾರವಾಗಿ ಪತಿಯ ಮನೆಯವರು ಸುನಿತಾಗೆ ಕಿರುಕುಳ ನೀಡುತ್ತಿದ್ರಂತೆ. ಇನ್ನು ಇದ್ರಿಂದ ಎರಡನೇ ಮಗನಿಗೆ ವಧು ಸಿಗುತ್ತಿಲ್ಲ ಎಂದು ಹೇಳಿ ಸುನಿತಾಗೆ ಮಾನಸಿಕವಾಗಿ ಕಿರುಕುಳ ನೀಡಲಾಗುತ್ತಿತ್ತು. ಹೀಗಾಗಿ ಅತ್ತೆ, ಮಾವ, ಪತಿ ಹಾಗೂ ಮೈದುನ ಸೇರಿದಂತೆ ಪತಿಯ ಮನೆಯವರ ಕಿರುಕುಳದಿಂದ ಬೇಸತ್ತು ನಮ್ಮ ಮಗಳು SUICIDE ಮಾಡಿಕೊಂಡಿದ್ದಾಳೆ ಕುಟುಂಬಸ್ಥರು ಆರೋಪಿಸಿದ್ದಾರೆ.
SUICIDE – 6 ಜನರ ವಿರುದ್ಧ ಕೇಸ್!
ಸದ್ಯ ಘಟನೆ ಸಂಬಂಧ ಸವಣೂರು ಪೊಲೀಸ್ ಠಾಣೆಯಲ್ಲಿ ಒಟ್ಟು ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆದ್ರೆ ಅದೇನೆ ಆಗಲಿ ಪ್ರೀತಿಸಿ ಮದುವೆಯಾಗಿದ್ದ ಸುನಿತಾ ದುರಂತ ಅಂತ್ಯ ಕಂಡಿದ್ದು, ತನಿಖೆಯ ಬಳಿಕವೇ ಸಾವಿನ ಹಿಂದಿನ ನಿಖರ ಕಾರಣ ಬಹಿರಂಗವಾಗಬೇಕಿದೆ.

MUST WATCH : ತಿಪಟೂರಲ್ಲಿ ಹೆಚ್ಚಾಯ್ತು ಚಿರತೆ ಕಾಟ – ಚಿರತೆ ಓಡಾಟಕ್ಕೆ ಬೆಚ್ಚಿಬಿದ್ದ ಗ್ರಾಮ



