ಸಂಗೀತ ನಿರ್ದೇಶಕ Guru Kiran ಗೆ ಮಾತೃ ವಿಯೋಗ; ಭಾವುಕ ಪೋಸ್ಟ್ ವೈರಲ್

ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ಗುರು ಕಿರಣ್ ಅವರ ತಾಯಿ ಶ್ರೀಮತಿ ಎ. ರತ್ನಕಾಂತಿ ಶೆಟ್ಟಿ ಅವರು ನಿನ್ನೆ ನಿಧನರಾಗಿದ್ದಾರೆ.
ತಾಯಿಯ ಅಗಲಿಕೆಯಿಂದ ದುಃಖಿತರಾಗಿರುವ ಗುರು ಕಿರಣ್ ಅವರು ಸೋಶಿಯಲ್ ಮಿಡಿಯಾದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
ನಮ್ಮ ಕುಟುಂಬದ ಹೃದಯ
“ತುಂಬಿದ ಹೃದಯದಿಂದ ನಮ್ಮ ಪ್ರೀತಿಯ ತಾಯಿ ಶ್ರೀಮತಿ ಎ. ರತ್ನಕಾಂತಿ ಶೆಟ್ಟಿ ಅವರ ನಿಧನದ ಹೃದಯವಿದ್ರಾವಕ ಸುದ್ದಿಯನ್ನ ಹಂಚಿಕೊಳ್ಳುತ್ತಿದ್ದೇನೆ. ಅವರು ನಮ್ಮ ಕುಟುಂಬದ ಹೃದಯವಾಗಿದ್ದರು, ನಮ್ಮ ಶಕ್ತಿ, ಪ್ರೀತಿ ಮತ್ತು ಬೆಚ್ಚಗಿನ ಆಸರೆಯಾಗಿದ್ದರು. ಅವರ ಬೇಷರತ್ ಪ್ರೀತಿ, ಶಾಂತ ಉಪಸ್ಥಿತಿ ಮತ್ತು ಅಗಾಧ ತ್ಯಾಗಗಳು ಇಂದು ನಾವು ಏನಾಗಿದ್ದೇವೋ ಅದನ್ನ ರೂಪಿಸಿವೆ” ಎಂದು ಗುರು ಕಿರಣ್ ಬರೆದುಕೊಂಡಿದ್ದಾರೆ.
ಇದನ್ನು ಓದಿ : ಅರ್ಜೆಂಟೀನಾ ದಿಗ್ಗಜ ಫುಟ್ಬಾಲರ್ ಲಿಯೋನೆಲ್ ಮೆಸ್ಸಿ ತಂದೆ ನಿಧನ

ಬಾಲ್ಯದಿಂದಲೇ ಸಂಗೀತದತ್ತ ಒಲವು
ಗುರು ಕಿರಣ್ ಅವರು ಮೂಲತಃ ಮಂಗಳೂರಿನವರು. ಬಾಲ್ಯದಿಂದಲೇ ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಅವರು, ಮಂಗಳೂರಿನ ವಿವಿಧ ಆರ್ಕೆಸ್ಟ್ರಾ ಹಾಗೂ ಕಲಾತಂಡಗಳಲ್ಲಿ ಗಾಯಕರಾಗಿ ಮತ್ತು ಕೀಬೋರ್ಡ್ ವಾದಕರಾಗಿ ತಮ್ಮ ಸಂಗೀತ ಪಯಣ ಆರಂಭಿಸಿದರು.
ಬಳಿಕ ಸಂಗೀತ ನಿರ್ದೇಶಕ ವಿ. ಮನೋಹರ್ ಅವರ ಬಳಿ ಸಹಾಯಕರಾಗಿ ಕೆಲಸ ಮಾಡಿದರು.
ಸಂಗೀತ ನಿರ್ದೇಶಕರಾಗುವ ಮುನ್ನ ಗುರು ಕಿರಣ್ ಅವರಿಗೆ ನಟನಾಗುವ ಆಸೆಯೂ ಇತ್ತು. ಅವರು ‘ರಂಗೋಲಿ’, ‘ಗಂಡುಗಲಿ’ ಹಾಗೂ ತುಳು ಚಿತ್ರ ‘ಬದ್ಕೊಂಜಿ ಕಬಿತೆ’ಯಲ್ಲಿ ನಟಿಸಿದ್ದರು.
‘ಎ’ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಎಂಟ್ರಿ
ನಂತರ ‘ಎ’ ಚಿತ್ರದ ಮೂಲಕ ಗುರು ಕಿರಣ್ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ಆ ಬಳಿಕ ‘ಉಪೇಂದ್ರ’, ‘ಚಿತ್ರ’, ‘ಅಪ್ಪು’, ‘ಆಪ್ತಮಿತ್ರ’, ‘ಜೋಗಿ’, ‘ಅರಮನೆ’, ‘ರಾಮ್’ ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ.

ಹಲವು ಫಿಲ್ಮ್ಫೇರ್ ಪ್ರಶಸ್ತಿಗಳನ್ನು ಪಡೆದುಕೊಂಡಿರು Guru Kiran
ತಮ್ಮ ಸಂಗೀತ ಸಾಧನೆಗಾಗಿ ಅತ್ಯುತ್ತಮ ಸಂಗೀತ ನಿರ್ದೇಶಕ ವಿಭಾಗದಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವು ಫಿಲ್ಮ್ಫೇರ್ ಪ್ರಶಸ್ತಿಗಳನ್ನು ಗುರು ಕಿರಣ್ ಪಡೆದಿದ್ದಾರೆ. ಕನ್ನಡ ಚಿತ್ರರಂಗಕ್ಕೆ ನೀಡಿದ ಗಮನಾರ್ಹ ಕೊಡುಗೆಯನ್ನು ಪರಿಗಣಿಸಿ ಬೆಂಗಳೂರು ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಇದನ್ನು ನೋಡಿ : ಇಷ್ಟು ದಿನ ಸುಮ್ಮನಿದ್ದ ಸಿಎಂ ಡಿಕೆಶಿ ಪಾದಯಾತ್ರೆ ಬೆನ್ನಲ್ಲೇ ಪ್ರೆಸ್ಮೀಟ್ ಮಾಡವ್ರೇ




