ಫುಟ್ಬಾಲ್ ದಿಗ್ಗಜ Lionel Messi ಗೆ ಪಿತೃ ವಿಯೋಗ

ಅರ್ಜೆಂಟೀನಾದ ದಿಗ್ಗಜ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅವರ ತಂದೆ ಜಾರ್ಜ್ ಮೆಸ್ಸಿ ನಿಧನರಾಗಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು.ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜಾರ್ಜ್ ಮೆಸ್ಸಿ ಅವರು ಅರ್ಜೆಂಟೀನಾದ ರೊಸಾರಿಯೊದಲ್ಲಿ ಕೊನೆಯುಸಿರೆಳೆದಿದ್ದಾರೆ. ಮೆಸ್ಸಿಯ ಬಾಲ್ಯದ ಕ್ಲಬ್ ನೆವೆಲ್ಸ್ ಓಲ್ಡ್ ಬಾಯ್ಸ್ ಕೂಡ ಈ ವಿಚಾರವನ್ನು ದೃಢಪಡಿಸಿದೆ.
ಕೊನೆಯ ತಿಂಗಳುಗಳನ್ನು ಮಕ್ಕಳ ಜೊತೆಗೆ ಕಳೆದಿದ್ದರು
ಜಾರ್ಜ್ ಮೆಸ್ಸಿ ಅವರು ತಮ್ಮ ಜೀವನದ ಕೊನೆಯ ಕೆಲವು ತಿಂಗಳುಗಳನ್ನು ರೊಸಾರಿಯೊದಲ್ಲಿರುವ ವೈದ್ಯಕೀಯ ಕೇಂದ್ರ ಹಾಗೂ ತಮ್ಮ ನಿವಾಸದಲ್ಲಿ ಕಳೆದಿದ್ದರು. ಪತ್ನಿ ಸೆಲಿಯಾ ಮತ್ತು ಮಕ್ಕಳಾದ ರೊಡ್ರಿಗೋ, ಮಟಿಯಾಸ್ ಹಾಗೂ ಮರಿಯಾ ಸೋಲ್ ಅವರೊಂದಿಗೆ ಅವರು ಕೊನೆಯ ದಿನಗಳನ್ನು ಕಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಇದನ್ನು ಓದಿ : ವಂಟಾರದಲ್ಲಿ ಕಳೆದುಹೋದ ಲಿಯೋನಲ್ ಮೆಸ್ಸಿ

Lionel Messi ತನ್ನ ತಂದೆಯೊಂದಿಗೆ ಸಮಯ ಕಳೆದಿದ್ದರು
ಫಿಫಾ ವಿಶ್ವಕಪ್ ಬಳಿಕ ಲಿಯೋನೆಲ್ ಮೆಸ್ಸಿ ತಮ್ಮ ತಂದೆಯೊಂದಿಗೆ ಸಮಯ ಕಳೆದಿದ್ದರು. ಬಳಿಕ ತಮ್ಮ ಕ್ಲಬ್ ಇಂಟರ್ ಮಿಯಾಮಿಗೆ ಮರಳಿದ್ದರು. ಸುಮಾರು ಒಂದು ವಾರದ ಹಿಂದೆ ಅವರು ಮತ್ತೆ ತಂಡವನ್ನು ಸೇರಿಕೊಂಡಿದ್ದರು.
ಜಾರ್ಜ್ ತಮ್ಮ ವೃತ್ತಿಜೀವನದುದ್ದಕ್ಕೂ ಮಗ ಲಿಯೋನೆಲ್ ಅವರೊಂದಿಗೆ ನಿಕಟವಾಗಿ ಜೊತೆಗಿದ್ದರು. ಪುತ್ರನಿಗೆ ಬೆಂಬಲದ ನಿರ್ಣಾಯಕ ಆಧಾರಸ್ತಂಭವಾಗಿದ್ದರು. ಹಲವಾರು ವರ್ಷಗಳ ಕಾಲ ಅವರ ಪ್ರತಿನಿಧಿಯಾಗಿ ಗುರುತಿಸಿಕೊಂಡಿದ್ದರು.

ಇದನ್ನು ನೋಡಿ : ಸಂಪುಟ ವಿಸ್ತರಣೆ ಸದ್ಯದಲ್ಲೇ ಫೈನಲ್ – CM DKS ಕೊಟ್ರು ಭರ್ಜರಿ ಭರವಸೆ




