5 ಬಾರಿ ಚಾಂಪಿಯನ್ ಬ್ರೆಜಿಲ್ಗೆ ಆಘಾತಕಾರಿ ಸೋಲು – ಫುಟ್ಬಾಲ್ ವೃತ್ತಿ ಜೀವನಕ್ಕೆ ಗುಡ್ಬೈ

ಐದು ಬಾರಿ ವಿಶ್ವಕಪ್ ಚಾಂಪಿಯನ್ ಬ್ರೆಜಿಲ್ ತಂಡಕ್ಕೆ 2026ರ ಫಿಫಾ ವಿಶ್ವಕಪ್ನಲ್ಲಿ ಭಾರೀ ಆಘಾತ ಎದುರಾಗಿದೆ. ಪ್ರೀ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನಾರ್ವೆ ವಿರುದ್ಧ 2-1 ಗೋಲುಗಳ ಅಂತರದಿಂದ ಸೋತ ಬ್ರೆಜಿಲ್ ಟೂರ್ನಿಯಿಂದ ಹೊರಬಿದ್ದಿದೆ. ಇದರ ಬೆನ್ನಲ್ಲೇ ಬ್ರೆಜಿಲ್ನ ಸ್ಟಾರ್ ಫುಟ್ಬಾಲ್ ಆಟಗಾರ ನೇಮರ್ (Neymar) ತಮ್ಮ 16 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ವಿದಾಯ ಘೋಷಿಸಿದ್ದಾರೆ.

ಬ್ರೆಜಿಲ್ಗೆ ಭಾರೀ ಆಘಾತ
ಮೆಟ್ಲೈಫ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ನಾರ್ವೆಯ ಯುವ ಸ್ಟ್ರೈಕರ್ ಎರ್ಲಿಂಗ್ ಹಾಲೆಂಡ್ ಎರಡು ಗೋಲುಗಳನ್ನು ಬಾರಿಸಿ ಬ್ರೆಜಿಲ್ಗೆ ಆಘಾತ ನೀಡಿದರು.
ನಾರ್ವೆ ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ಫಿಫಾ ವಿಶ್ವಕಪ್ ಕ್ವಾರ್ಟರ್ ಫೈನಲ್ ಪ್ರವೇಶಿಸಿ ಹೊಸ ಇತಿಹಾಸ ನಿರ್ಮಿಸಿದೆ. ಮತ್ತೊಂದೆಡೆ, 1990ರ ಬಳಿಕ ಮೊದಲ ಬಾರಿಗೆ ಬ್ರೆಜಿಲ್ ತಂಡ ವಿಶ್ವಕಪ್ನಲ್ಲಿ ಇಷ್ಟು ಬೇಗ ಹೊರಬಿದ್ದಿದೆ.
ಇದನ್ನು ಓದಿ : ವಿಶ್ವಕಪ್ನಲ್ಲಿ ಮಿರೋಸ್ಲಾವ್ ಕ್ಲೋಸ್ ದಾಖಲೆ ಸರಿಗಟ್ಟಿದ ಫುಟ್ಬಾಲ್ ಲೆಜೆಂಡ್

ನೇಮರ್ ಕಣ್ಣೀರ ವಿದಾಯ
ಪಂದ್ಯದ ಸೋಲಿನ ಬಳಿಕ ಭಾವುಕರಾದ ನೇಮರ್ ಕಣ್ಣೀರಿಡುತ್ತಲೇ ಅಂತಾರಾಷ್ಟ್ರೀಯ ಫುಟ್ಬಾಲ್ಗೆ ವಿದಾಯ ಹೇಳಿದರು. “ನಾನು ಸಾಕಷ್ಟು ಪ್ರಯತ್ನಿಸಿದ್ದೇನೆ. ಆದರೆ ಈಗ ಎಲ್ಲವೂ ಮುಗಿದಿದೆ. ನಾನು ಎಲ್ಲಿಂದ ಆರಂಭಿಸಿದ್ದೆನೋ ಅಲ್ಲಿಯೇ ನನ್ನ ಪಯಣ ಮುಗಿಯುತ್ತಿದೆ” ಎಂದು ಕಣ್ಣೀರಿಡುತ್ತಲೇ ಹೇಳಿದರು.
ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರೂ ಪಂದ್ಯದ ಅಂತಿಮ ಕ್ಷಣದಲ್ಲಿ ನೇಮರ್ ಬ್ರೆಜಿಲ್ ಪರ ಏಕೈಕ ಗೋಲು ಗಳಿಸಿದರು.
ಈ ಗೋಲು ಪಂದ್ಯದ ದ್ವಿತಿಯಾರ್ಧದ ಇಂಜುರಿ ಟೈಮ್ನಲ್ಲಿ (90+ 10ನೇ ನಿಮಿಷ) ದಾಖಲಾಯಿತು.

ದೇಶದ ಸಾರ್ವಕಾಲಿಕ ಶ್ರೇಷ್ಠ ಗೋಲು ಸ್ಕೋರರ್ – Neymar
ಈ ಗೋಲಿನೊಂದಿಗೆ ನೇಮರ್ ಬ್ರೆಜಿಲ್ ಪರ 130 ಪಂದ್ಯಗಳಲ್ಲಿ 80 ಗೋಲು ಹಾಗೂ 59 ಅಸಿಸ್ಟ್ಗಳನ್ನು ದಾಖಲಿಸಿ, ದಿಗ್ಗಜ ಪೆಲೆ ಅವರ ದಾಖಲೆಯನ್ನು ಹಿಂದಿಕ್ಕಿ ಬ್ರೆಜಿಲ್ನ ಸಾರ್ವಕಾಲಿಕ ಅಗ್ರ ಗೋಲು ಸ್ಕೋರರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಆದರೆ ಈ ಐತಿಹಾಸಿಕ ಸಾಧನೆಯ ದಿನವೇ ಸೋಲು ಮತ್ತು ವಿದಾಯದ ನೋವಿನ ದಿನವಾಗಿಯೂ ಉಳಿಯಿತು.

ಇದನ್ನು ನೋಡಿ : ಮೃತ ಭುವನ ಮನೆಗೆ ಡಿಸಿಎಂ ಪರಮೇಶ್ವರ್ ವಿಸಿಟ್- ಕುಟುಂಬಸ್ಥರಿಗೆ ಧೈರ್ಯ ತುಂಬಿದ ಪರಂ



