
Bigg Boss : ತಾಂಡವ್ Emergency Exit – ಅನಿರೀಕ್ಷಿತ ನಿರ್ಗಮನಕ್ಕೆ ಇಡೀ ಮನೆ ಕಣ್ಣೀರು
ಬಿಗ್ಬಾಸ್ ಮನೆಯ ಆಟದಲ್ಲಿ ಯಾವಾಗ ಯಾವ ತಿರುವು ಸಿಗುತ್ತೆ ಅಂತ ಊಹಿಸೋಕೂ ಸಾಧ್ಯವಿಲ್ಲ. ಅದರಂತೆ ಈ ವಾರವೂ ಬಿಗ್ಬಾಸ್ ಮನೆಯಲ್ಲಿ ಅನಿರೀಕ್ಷಿತ ಘಟನೆಯೊಂದು ನಡೆದಿದೆ. ಎಮರ್ಜೆನ್ಸಿ ಎಕ್ಸಿಟ್ ಮೂಲಕ ತಾಂಡವ್ ರಾಮ್ ಮನೆಯಿಂದ ಹೊರಬಂದಿದ್ದಾರೆ.
ತಾಂಡವ್ Emergency Exit
ವಾರದ ಆರಂಭದಲ್ಲೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ‘ಎಮರ್ಜೆನ್ಸಿ ಎಕ್ಸಿಟ್’ ಎಂಬ ಬಿಗ್ ಟ್ವಿಸ್ಟ್ ನೀಡಿದ್ದರು. ಇದರಿಂದ ತಮ್ಮನ್ನು ತಾವು ಸೇಫ್ ಮಾಡಿಕೊಳ್ಳಲು ನಾಲ್ವರು ಸ್ಪರ್ಧಿಗಳು ಟಾಸ್ಕ್ನಲ್ಲಿ ಭಾಗವಹಿಸಿದ್ದರು. ಈ ವೇಳೆ ತಮ್ಮ ವೋಟ್ಗಳನ್ನು ಹೆಚ್ಚಿಸಿಕೊಳ್ಳಲು ಸ್ಪರ್ಧಿಗಳು ಇತರರಿಂದ ಮತಗಳನ್ನು ಪಡೆಯಬೇಕಾಗಿತ್ತು.
ಆದರೆ ಮತಗಳ ಲೆಕ್ಕಾಚಾರ ಕೊನೆಯ ಹಂತದಲ್ಲಿ ಸಂಪೂರ್ಣ ಬದಲಾಗಿದೆ. ಧನುಷ್ ಅವರು ತಾಂಡವ್ ಅವರ ಶೇ.50ರಷ್ಟು ವೋಟ್ಗಳನ್ನು ಪಡೆದುಕೊಂಡಿದ್ದು, ತಾಂಡವ್ ಅವರಿಗೆ ಅನಿರೀಕ್ಷಿತವಾಗಿ ಎಮರ್ಜೆನ್ಸಿ ಎಕ್ಸಿಟ್ ಎದುರಾಗಿದೆ.

‘ನನ್ನ ಜೀವನದ ಮರೆಯಲಾಗದ ರಿಗ್ರೆಟ್’ ಎಂದ ಧನುಷ್
ತನ್ನ ನಿರ್ಧಾರದಿಂದ ತಾಂಡವ್ ಮನೆಯಿಂದ ಹೊರಹೋಗುವಂತಾಯಿತು ಎಂಬ ಬೇಸರ ಧನುಷ್ ಅವರನ್ನು ಕಾಡಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಧನುಷ್ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. “ಇದು ನನ್ನ ಲೈಫ್ನಲ್ಲೇ ಮರೆಯೋಕೆ ಆಗದ ರಿಗ್ರೆಟ್” ಎಂದು ಧನುಷ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಆದರೆ ತಾಂಡವ್ ಮಾತ್ರ ಧನುಷ್ ಅವರನ್ನು ತಬ್ಬಿಕೊಂಡು ಸಮಾಧಾನಪಡಿಸಿದ್ದಾರೆ. ಯಾವುದೇ ಬೇಸರವನ್ನು ತೋರಿಸದೆ ಧನುಷ್ಗೆ ಧೈರ್ಯ ತುಂಬಿದ ತಾಂಡವ್ ನಡೆ ಮನೆಯವರ ಮನಮುಟ್ಟಿದೆ.
READ THIS : ಮಿಡ್ ವೀಕ್ ಎಲಿಮಿನೇಷನ್ನಲ್ಲಿ ದೊಡ್ಮನೆಯಿಂದ ಹೊರಹೋಗಿದ್ಯಾರು?

ಇಡೀ ಮನೆ ಕಣ್ಣೀರು!
ತಾಂಡವ್ ತಮ್ಮ ಲಗೇಜ್ ಪ್ಯಾಕ್ ಮಾಡಿಕೊಂಡು ಎಮರ್ಜೆನ್ಸಿ ಎಕ್ಸಿಟ್ಗೆ ಸಿದ್ಧರಾಗುತ್ತಿದ್ದಂತೆ ಬಿಗ್ಬಾಸ್ ಮನೆಯ ವಾತಾವರಣ ಭಾವುಕವಾಯಿತು. ತಮ್ಮ ನೆಚ್ಚಿನ ಸ್ಪರ್ಧಿಯನ್ನು ಬೀಳ್ಕೊಡಲು ಮನೆಯ ಬಹುತೇಕ ಸದಸ್ಯರು ಕಣ್ಣೀರಿಟ್ಟಿದ್ದಾರೆ.
“ನಾನು ಇಷ್ಟು ಬೇಗ ಹೊರಗಡೆ ಹೋಗ್ತೀನಿ ಅಂತ ಅಂದುಕೊಂಡಿರಲಿಲ್ಲ” ಎಂದು ತಾಂಡವ್ ತಮ್ಮ ಬೇಸರ ಹಂಚಿಕೊಂಡಿದ್ದಾರೆ. ಬಳಿಕ ಎಲ್ಲ ಸ್ಪರ್ಧಿಗಳಿಗೂ ನಗುಮುಖದಿಂದಲೇ ವಿದಾಯ ಹೇಳಿದ ಅವರು, “ಎಲ್ಲರೂ ಚೆನ್ನಾಗಿ ಆಡಿ, ಗೆದ್ದು ಬನ್ನಿ. ಹೊರಗಡೆ ಕಾಯ್ತಿರ್ತೀನಿ” ಎಂದು ದೊಡ್ಮನೆಯಿಂದ ತಾಂಡವ್ ರಾಮ್ ಹೊರಹೋಗಿದ್ದಾರೆ.

MUST WATCH : ರೈತರ ಪರಿಹಾರ ಶೇವಿಂಗ್ ಕಟ್ಟಿಂಗ್ ಗೂ ಆಗಲ್ಲಾ – DK ಸರ್ಕಾರದ ವಿರುದ್ದ MT ಕೃಷ್ಣಪ್ಪ ವಾಗ್ದಾಳಿ




