OTT ಗೆ ಕಾಲಿಟ್ಟ ‘ಮ್ಯಾಂಗೋ ಪಚ್ಚ’ – ಸ್ಟ್ರೀಮಿಂಗ್ ಎಲ್ಲಿ?

ಮೈಸೂರಿನ ಕ್ರೈಂ ಜಗತ್ತಿನ ಹಿನ್ನೆಲೆಯ ಕಥಾಹಂದರದ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದ ‘ಮ್ಯಾಂಗೋ ಪಚ್ಚಾ’ ಸಿನಿಮಾ ಇದೀಗ OTT ಗೆ ಎಂಟ್ರಿ ಕೊಟ್ಟಿದೆ. ಕಿಚ್ಚ ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜೀವ್ ನಾಯಕನಾಗಿ ಅಭಿನಯಿಸಿರುವ ಈ ಚೊಚ್ಚಲ ಸಿನಿಮಾ ಇಂದಿನಿಂದ ಜಿಯೋಹಾಟ್ಸ್ಟಾರ್ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ.
ಒಟಿಟಿಗೆ ಕಾಲಿಟ್ಟ ಮ್ಯಾಂಗೋ ಪಚ್ಚ
ಚಿತ್ರದಲ್ಲಿ ಸಂಚಿತ್ ಸಂಜೀವ್ ಅವರು ಪ್ರಶಾಂತ್ ಅಲಿಯಾಸ್ ‘ಪಚ್ಚ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾನ್ಯ ಜೀವನ ನಡೆಸುವ ಯುವಕನೊಬ್ಬ ಅನಿರೀಕ್ಷಿತ ಪರಿಸ್ಥಿತಿಗಳಿಂದಾಗಿ ಅಪರಾಧ ಜಗತ್ತಿನತ್ತ ಹೆಜ್ಜೆ ಇಟ್ಟು, ನಂತರ ತನ್ನದೇ ಆದ ಪ್ರಭಾವವನ್ನು ಬೆಳೆಸಿಕೊಳ್ಳುವ ಪಯಣವೇ ಚಿತ್ರದ ಪ್ರಮುಖ ಕಥಾಹಂದರ.
READ THIS : OTT ಗೆ ಬರೋಕೆ ರೆಡಿ ಆಯ್ತು ದಳಪತಿ ಅಭಿನಯದ ಜನನಾಯಗನ್ ಸಿನಿಮಾ

2001ರಿಂದ 2011ರ ಮೈಸೂರಿನ ಕ್ರೈಂ ಹಿನ್ನೆಲೆ
ನಿರ್ದೇಶಕ ವಿವೇಕ್ ಅವರು 2001ರಿಂದ 2011ರ ಅವಧಿಯ ಮೈಸೂರಿನ ಹಿನ್ನೆಲೆಯನ್ನು ಕಥೆಗೆ ಬಳಸಿಕೊಂಡಿದ್ದಾರೆ.
ಕುಟುಂಬ, ಪ್ರೀತಿ, ಸ್ಥಳೀಯ ರಾಜಕೀಯ, ಅಪರಾಧ ಜಗತ್ತು ಹಾಗೂ ಗ್ಯಾಂಗ್ಗಳ ನಡುವಿನ ಸಂಘರ್ಷಗಳ ನಡುವೆ ಪಚ್ಚನ ಬದುಕು ಹೇಗೆ ಬದಲಾಗುತ್ತದೆ ಎಂಬುದನ್ನು ಸಿನಿಮಾ ತೆರೆದಿಡುತ್ತದೆ.
ಮೈಸೂರಿನ ಸಾಮಾನ್ಯ ಯುವಕನಾಗಿ ಆರಂಭವಾಗುವ ಪಚ್ಚನ ಬದುಕು, ಕ್ರಮೇಣ ಕ್ರೈಂ ಜಗತ್ತಿನಲ್ಲಿ ತನ್ನದೇ ಛಾಪು ಮೂಡಿಸುವ ಹಂತಕ್ಕೆ ತಲುಪುವ ರೀತಿಯನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ.

ಯಾರು ಯಾವ ಪಾತ್ರದಲ್ಲಿ?
ಸಂಚಿತ್ ಸಂಜೀವ್ – ಪ್ರಶಾಂತ್ ಅಲಿಯಾಸ್ ‘ಪಚ್ಚ’ ಮೈಸೂರಿನ ಸಾಮಾನ್ಯ ಯುವಕನಿಂದ ಕ್ರೈಂ ಜಗತ್ತಿನಲ್ಲಿ ತನ್ನದೇ ಛಾಪು ಮೂಡಿಸುವ ವ್ಯಕ್ತಿಯಾಗಿ ಬದಲಾಗುವ ಕೇಂದ್ರ ಪಾತ್ರ. ಮಯೂರ್ ಪಟೇಲ್, ಹಂಸಾ, ಉಗ್ರಂ ಮಂಜು, ಹರಿಣಿ ಶ್ರೀಕಾಂತ್, ಜೈ ಗೋಪಿನಾಥ್ ಸೇರಿದಂತೆ ಪ್ರಮುಖ ತಾರಾಗಣ ಚಿತ್ರದಲ್ಲಿ ಕಾಣಿಸಿಕೊಂಡಿದೆ.
OTT ಗೆ ಕಾಲಿಟ್ಟ ಮ್ಯಾಂಗೋ ಪಚ್ಚ – 5 ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯ
ಇನ್ನು ಥಿಯೇಟರ್ನಲ್ಲಿ ‘ಮ್ಯಾಂಗೋ ಪಚ್ಚಾ’ ಸಿನಿಮಾವನ್ನು ಮಿಸ್ ಮಾಡಿಕೊಂಡಿದ್ದ ಪ್ರೇಕ್ಷಕರಿಗೆ ಇದೀಗ ಮನೆಯಲ್ಲೇ ಪಚ್ಚನ ಮಾಸ್ ಜರ್ನಿ ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿದೆ.
ಸಿನಿಮಾ ಕನ್ನಡದ ಜೊತೆಗೆ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲೂ ಜಿಯೋಹಾಟ್ಸ್ಟಾರ್ನಲ್ಲಿ ವೀಕ್ಷಣೆಗೆ ಲಭ್ಯವಿದೆ.

MUST WATCH : ಕಾರ್ಮಿಕರ ಆರೋಗ್ಯ ಕಾಪಾಡಲು ಸಂಚಾರಿ ಆರೋಗ್ಯ ಘಟಕ – ಕಾರ್ಮಿಕರು ಇರುವಲ್ಲೇ ಸೇವೆ




