‘ಜನ ನಾಯಗನ್’ OTT ರಿಲೀಸ್ ದಿನಾಂಕ ಘೋಷಣೆ; ವಿಜಯ್ ಕೊನೆಯ ಸಿನಿಮಾ ವೀಕ್ಷಣೆಗೆ ದಿನಾಂಕ ನಿಗದಿ

ತಮಿಳು ಚಿತ್ರರಂಗದ ನಟ ಹಾಗೂ ರಾಜಕಾರಣಿ ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಜನ ನಾಯಗನ್’ ಇದೀಗ ಒಟಿಟಿ ಬಿಡುಗಡೆಗೆ ಸಜ್ಜಾಗಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಕೆಲವೇ ವಾರಗಳ ಬಳಿಕ ಸಿನಿಮಾ ಡಿಜಿಟಲ್ ವೇದಿಕೆಗೆ ಆಗಮಿಸುತ್ತಿದ್ದು, ವಿಜಯ್ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.
ವಿಜಯ್ ಅವರ ಕೊನೆಯ ಸಿನಿಮಾ ಇದಾಗಿದ್ದು, ‘ಜನ ನಾಯಗನ್’ OTT ಬಿಡುಗಡೆಯನ್ನು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಆಗಸ್ಟ್ 21ರಿಂದ ಜೀ5ನಲ್ಲಿ ಸ್ಟ್ರೀಮಿಂಗ್
‘ಜನ ನಾಯಗನ್’ ಸಿನಿಮಾ ಆಗಸ್ಟ್ 21ರಿಂದ ಜೀ5 ಒಟಿಟಿ ವೇದಿಕೆಯಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈ ಕುರಿತು ಜೀ ತಮಿಳು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಎಐ ಟೀಸರ್ ಹಂಚಿಕೊಂಡು ಮಾಹಿತಿ ನೀಡಿದೆ.
ಹೆಚ್. ವಿನೋದ್ ನಿರ್ದೇಶನದ ಈ ಚಿತ್ರದಲ್ಲಿ ವಿಜಯ್ ಜೊತೆ ಪೂಜಾ ಹೆಗ್ಡೆ, ಬಾಬಿ ಡಿಯೋಲ್ ಹಾಗೂ ಮಮಿತಾ ಬೈಜು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್ ಹಾಗೂ ನರೇನ್ ಸೇರಿದಂತೆ ಹಲವು ಪ್ರಮುಖ ಕಲಾವಿದರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
READ THIS : 30ಕ್ಕೂ ಹೆಚ್ಚು ದೇಶಗಳಲ್ಲಿ ಜನನಾಯಗನ್ ಗ್ರ್ಯಾಂಡ್ ರಿಲೀಸ್

ಸೆನ್ಸಾರ್ ವಿವಾದದ ಬಳಿಕ ಚಿತ್ರಮಂದಿರಕ್ಕೆ
‘ಜನ ನಾಯಗನ್’ ಸಿನಿಮಾ ಆರಂಭದಲ್ಲಿ ಜನವರಿ 9ರಂದು ಬಿಡುಗಡೆಯಾಗಬೇಕಿತ್ತು. ಆದರೆ ಸೆನ್ಸಾರ್ ಮಂಡಳಿಗೆ ಸಂಬಂಧಿಸಿದ ಕಾರಣಗಳಿಂದ ಚಿತ್ರದ ಬಿಡುಗಡೆ ವಿಳಂಬವಾಗಿತ್ತು.
ಬಳಿಕ ಕಾನೂನು ಹೋರಾಟಗಳ ನಂತರ ಚಿತ್ರಕ್ಕೆ ‘ಎ’ ಪ್ರಮಾಣಪತ್ರ ದೊರೆಯಿತು.
ಅಂತಿಮವಾಗಿ ಸಿನಿಮಾ ಜುಲೈ 23ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಬಿಡುಗಡೆಯ ಬಳಿಕ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಸಿನಿಮಾ ಆನ್ಲೈನ್ನಲ್ಲಿ ಸೋರಿಕೆಯಾಗಿದ್ದರಿಂದ ಚಿತ್ರದ ಗಳಿಕೆಯ ಮೇಲೂ ಪರಿಣಾಮ ಬೀರಿದೆ ಎಂಬ ಮಾತುಗಳು ಕೇಳಿಬಂದಿದ್ದವು.

ವಿಜಯ್ ಅವರ ಸಿನಿಮಾ ವೃತ್ತಿಗೆ ವಿದಾಯ?
‘ಜನ ನಾಯಗನ್’ ವಿಜಯ್ ಅವರ ಸುದೀರ್ಘ ಸಿನಿಮಾ ಪಯಣದ ಕೊನೆಯ ಚಿತ್ರ ಎಂಬ ಕಾರಣದಿಂದಲೂ ವಿಶೇಷ ಗಮನ ಸೆಳೆದಿದೆ. ಪೂರ್ಣಪ್ರಮಾಣದ ರಾಜಕೀಯ ಜೀವನಕ್ಕೆ ಕಾಲಿಟ್ಟಿರುವ ವಿಜಯ್ ಅವರ ಸಿನಿಮಾ ವೃತ್ತಿಗೆ ಇದು ವಿದಾಯದ ಚಿತ್ರವಾಗಿದೆ.
ಮನೆಯಲ್ಲೇ ನೋಡಿ ಜನನಾಯಗನ್
ಚಿತ್ರಕ್ಕೆ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ವಿಜಯ್ ಅವರನ್ನು ಮತ್ತೊಮ್ಮೆ ತೆರೆ ಮೇಲೆ ನೋಡಲು ಬಯಸುವ ಅಭಿಮಾನಿಗಳಿಗೆ ಒಟಿಟಿ ಬಿಡುಗಡೆ ವಿಶೇಷ ಅವಕಾಶವಾಗಿದೆ.
ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸಲು ಸಾಧ್ಯವಾಗದವರು ಇದೀಗ ಮನೆಯಲ್ಲಿಯೇ ‘ಜನ ನಾಯಗನ್’ ವೀಕ್ಷಿಸಬಹುದಾಗಿದೆ.

MUST WATCH : ಸದನದಲ್ಲೂ ENCOUNTER ಗದ್ದಲ – ವಿಧಾನಸಭೆಯಲ್ಲಿ ಭಾರೀ ಹೈಡ್ರಾಮಾ




