30ಕ್ಕೂ ಹೆಚ್ಚು ದೇಶಗಳಲ್ಲಿ Jananayagan ಗ್ರ್ಯಾಂಡ್ ರಿಲೀಸ್ಗೆ ಸಜ್ಜು – 2 ದಿನ ಇರುವಾಗ್ಲೇ ಬಿಗ್ ಚೇಂಜಸ್

ಕಾಲಿವುಡ್ ಸ್ಟಾರ್ ನಟ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅಭಿನಯದ ಕೊನೆಯ ಸಿನಿಮಾ ‘ಜನ ನಾಯಗನ್’ (Jananayagan) ಇದೇ ಜುಲೈ 23ರಂದು ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ವಿಜಯ್ ಅವರ ಕೊನೆಯ ಚಿತ್ರ ಇದಾಗಿದ್ದು, ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯಿದೆ.
ಪ್ರಮುಖ ಬದಲಾವಣೆ
ಸೆನ್ಸಾರ್ ಪ್ರಕ್ರಿಯೆಯಿಂದ ಸುಮಾರು ಏಳು ತಿಂಗಳ ವಿಳಂಬವಾದರೂ, ಈ ಅವಧಿಯನ್ನು ಚಿತ್ರತಂಡ ಹಲವು ಬದಲಾವಣೆಗಳನ್ನು ಮಾಡಲು ಬಳಸಿಕೊಂಡಿದೆ.
ಬಿಡುಗಡೆಯಿಗೆ ಇನ್ನೆರಡು ದಿನಗಳು ಬಾಕಿ ಇರುವಾಗ ಚಿತ್ರದ ಕೆಲವು ಪ್ರಮುಖ ಬದಲಾವಣೆಗಳ ಮಾಹಿತಿ ಹೊರಬಿದ್ದಿದೆ.

ಸಿಎಂ ಗೌರವಿಸುವ ವಿಶೇಷ ಟೈಟಲ್ ಕಾರ್ಡ್
ಚಿತ್ರದ ಆರಂಭದಲ್ಲೇ ವಿಜಯ್ ಅವರನ್ನು ಕೇವಲ ನಟನಾಗಿ ಅಲ್ಲದೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪರಿಚಯಿಸುವ ವಿಶೇಷ ಟೈಟಲ್ ಕಾರ್ಡ್ ಸೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಜೊತೆಗೆ ವಿಜಯ್ ಅವರ ಪ್ರಸಿದ್ಧ ಸಿಗ್ನೇಚರ್ ಹ್ಯಾಂಡ್ ಫ್ಲಿಕ್ ಶೈಲಿಯನ್ನು ಚಿತ್ರದಲ್ಲಿ ಅಳವಡಿಸಲಾಗಿದ್ದು, ಅವರ ರಾಜಕೀಯ ಪಕ್ಷ ಟಿವಿಕೆ (TVK) ಕುರಿತ ಉಲ್ಲೇಖವನ್ನೂ ಸೇರಿಸಲಾಗಿದೆ ಎನ್ನಲಾಗಿದೆ.
ಇದನ್ನು ಓದಿ : ದಳಪತಿ ವಿಜಯ್ ‘ಜನ ನಾಯಗನ್’ ಚಿತ್ರಕ್ಕೆ ಹೊಸ ಟ್ವಿಸ್ಟ್
ಪ್ರಚಾರ ಗೀತೆಯಲ್ಲಿ ವಿಜಯ್ ಅವರ ರಿಯಲ್ ಸ್ಟೈಲ್
ಚಿತ್ರದ ಪ್ರಚಾರ ಗೀತೆ **‘ರಾವಣ ಮಾವಂಡಾ’**ಯಲ್ಲಿ ವಿಜಯ್ ಅವರ ವಿಶಿಷ್ಟ ಹಾವಭಾವಗಳನ್ನು ನೆನಪಿಸುವ ದೃಶ್ಯಗಳನ್ನು ಸೇರಿಸಲಾಗಿದೆ. ತಮಿಳುನಾಡು ವಿಧಾನಸಭೆಯಲ್ಲಿ ಅವರು ಪ್ರದರ್ಶಿಸಿದ ಶೈಲಿಯನ್ನು ಹೋಲುವ ದೃಶ್ಯಗಳೂ ಹಾಡಿನಲ್ಲಿ ಕಾಣಿಸಲಿವೆ. ಅನಿರುದ್ಧ್ ರವಿಚಂದರ್ ಸಂಗೀತ ನೀಡಿರುವ ಈ ಹಾಡಿಗೆ ವಿವೇಕ್ ಸಾಹಿತ್ಯ ಬರೆದಿದ್ದು, ಸುಮಾರು ಎರಡು ನಿಮಿಷಗಳ ಹೈ-ಎನರ್ಜಿ ಗೀತೆಯಲ್ಲಿ ಚಿತ್ರದ ಪ್ರಮುಖ ದೃಶ್ಯಗಳು ಇರಲಿವೆ.

ಸೆನ್ಸಾರ್ ಸೂಚನೆಯಂತೆ ಬದಲಾವಣೆ
ಸೆನ್ಸಾರ್ ಮಂಡಳಿ ಚಿತ್ರದ ಸುಮಾರು 20 ಸೆಕೆಂಡುಗಳ ದೃಶ್ಯವನ್ನು ತೆಗೆದುಹಾಕಲು ಹಾಗೂ 10 ಸೆಕೆಂಡುಗಳ ದೃಶ್ಯವನ್ನು ತಿದ್ದುಪಡಿ ಮಾಡಲು ಸೂಚಿಸಿತ್ತು.
ಧಾರ್ಮಿಕ ಉಲ್ಲೇಖಗಳಿರುವ ಕೆಲವು ಸಂಭಾಷಣೆಗಳನ್ನು ಮ್ಯೂಟ್ ಮಾಡಲು ಸೂಚನೆ ನೀಡಲಾಗಿದ್ದು, ಚಿತ್ರತಂಡ ಅದರಂತೆ ಬದಲಾವಣೆ ಮಾಡಿದೆ.
Jananayagan – 8,000 ಪರದೆಗಳಲ್ಲಿ ಭರ್ಜರಿ ಬಿಡುಗಡೆ
ವರದಿಗಳ ಪ್ರಕಾರ, ತಮಿಳುನಾಡಿನಲ್ಲಿ ಈಗಾಗಲೇ 3,500ಕ್ಕೂ ಹೆಚ್ಚು ಪ್ರದರ್ಶನಗಳು ನಿಗದಿಯಾಗಿದ್ದು, ಈ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.
ಚಿತ್ರದ ಅವಧಿ 3 ಗಂಟೆ 3 ನಿಮಿಷಗಳು ಎಂದು ಹೇಳಲಾಗಿದೆ. ನಿರ್ಮಾಣ ಸಂಸ್ಥೆಯ ಮಾಹಿತಿ ಪ್ರಕಾರ, 30ಕ್ಕೂ ಹೆಚ್ಚು ದೇಶಗಳು ಹಾಗೂ ಭಾರತದ ವಿವಿಧ ರಾಜ್ಯಗಳಲ್ಲಿ ಸೇರಿ ಸುಮಾರು 8,000 ಪರದೆಗಳಲ್ಲಿ ‘ಜನ ನಾಯಗನ್’ ಬಿಡುಗಡೆಯಾಗಲಿದೆ.

ಇದನ್ನು ನೋಡಿ : DUTY TIMEನಲ್ಲಿ ಎಣ್ಣೆ PARTY ಆರೋಪ ವೈರಲ್ ಆದ ಅಸಲಿಯತ್ತೇ ಬೇರೆ




