Sira : ಮಾರಕಾಸ್ತ್ರಗಳಿಂದ ಯುವಕನ ಮೇಲೆ ಡೆಡ್ಲಿ ಅಟ್ಯಾಕ್..! ಯುವಕನ ಮೇಲೆ ಸಂಬಂಧಿಯಿಂದಲೇ ನಡೆದಿದ್ಯಾ ದಾಳಿ?

ಯುವಕನೋರ್ವನ ಮೇಲೆ ಮಾರಕಾಸ್ತ್ರಗಳಿಂದ ಸಿಕ್ಕ ಸಿಕ್ಕ ಕಡೆ ಅಟ್ಯಾಕ್ ಮಾಡಿ ಎಸ್ಕೇಪ್ ಆಗಿರುವ ಭಯಾನಕ ಘಟನೆ ತುಮಕೂರು ಜಿಲ್ಲೆ Sira ತಾಲೂಕಿನ ತಾವರೆಕೆರೆಯಲ್ಲಿ ನಡೆದಿದೆ. ನಾಗೇಶ್ ಎಂಬಾತ ಮೇಲೆ ಹೇಮಂತ್ ಹಾಗೂ ಆತನನ ಸಹಚರರು ಮನಸ್ಸೋ ಇಚ್ಛೆ ಹಲ್ಲೆ ಮಾಡಿ, ಎಸ್ಕೇಪ್ ಆಗಿದ್ದಾರೆ.
ಇದನ್ನು ಓದಿ : ಮಾದಕ ವಸ್ತು ನಿರ್ಬಂಧಿಸಿದ್ದಕ್ಕೆ ರೌಡಿಗಳ ಹಲ್ಲೆ – ಜೈಲರ್ ಸೇರಿದಂತೆ ಮೂವರು ಗಾಯ

ಸಂಬಂಧಿಯಿಂದಲೇ ನಡೆದಿದ್ಯಾ ದಾಳಿ?
ಶಿರಾ ತಾಲೂಕಿನ ತಾವರೆಕೆರೆಯಲ್ಲಿರುವ ಹೇಮಂತ್ನ ತೋಟಕ್ಕೆ ನಾಗೇಶ್ನನ್ನು ಕರೆಸಿಕೊಂಡಿದ್ದ ಎನ್ನಲಾಗಿದೆ. ಬಳಿಕ ನಾಗೇಶ್ ಮೇಲೆ ಹೇಮಂತ್ ಹಾಗೂ ಆತನನ ಸಹಚರರು ಮಚ್ಚು ಹಾಗೂ ಚಾಕುವಿಂದ ಎದೆ, ಮುಖ, ತಲೆ, ಬೆನ್ನು, ಕೈಗೆ ಸಿಕ್ಕ ಸಿಕ್ಕ ಕಡೆ ರಕ್ತ ಬರುವಂತೆ ಹಲ್ಲೆ ನಡೆಸಿದ್ದಾರೆ. ದಾಳಿಯಿಂದಾಗಿ ನಾಗೇಶ್ಗೆ ಗಂಭೀರ ಗಾಯಗಳಾಗಿದ್ದು, ತುಮಕೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಆರೋಪಿಗಳು ಎಸ್ಕೇಪ್!
ಇನ್ನು ನಾಗೇಶ್ ಹಾಗೂ ಹೇಮಂತ್ ಶಿರಾ ನಗರದ ನಿವಾಸಿಗಳು ಆಗಿದ್ದು, ಮಾರಕಾಸ್ತ್ರಗಳಿಂದ ನಾಗೇಶ್ ಮೇಲೆ ಹೇಮಂತ್ ದಾಳಿ ಮಾಡಲು ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಆರೋಪಿಗಳು ಕೃತ್ಯ ಎಸಗಿ ಪರಾರಿಯಾಗಿದ್ದಾರೆ. ಈ ಸಂಬಂಧ ತನಿಖೆ ಬಳಿಕಷ್ಟೇ ದಾಳಿ ಮಾಡಲು ನಿಖರ ಕಾರಣ ತಿಳಿದುಬರಲಿದೆ.
ಇದನ್ನು ನೋಡಿ : ದೇವರಾಯನ ದುರ್ಗದ ರಸ್ತೆಯಲ್ಲಿ ಅಪಘಾಕಾರಿನೊಳಗೆ ಸಿಲುಕಿದ್ದ ನಾಲ್ವರು ಬಚಾವ್




