
ಇಬ್ಬರು ಮಕ್ಕಳಿಗೆ ವಿಷ ಉಣಿಸಿ ತಾಯಿಯೂ ಆತ್ಮಹತ್ಯೆ – ಮೂವರ ಸಾವಿನಿಂದ ಬೆಚ್ಚಿಬಿದ್ದ Sira
ಶಿರಾ ಮೂಲದ ರಾಬಿಯಾ ಎಂಬ ಮಹಿಳೆ ತನ್ನ ಇಬ್ಬರು ಮಕ್ಕಳಿಗೆ ವಿಷವಿಟ್ಟು ಬಳಿಕ ಆಕೆಯೂ ಆತ್ಮಹತ್ಯೆಗೆ ಶರಣಾಗಿದ್ದು, ಈ ಘಟನೆ ಶಿರಾನಗರವನ್ನೇ ಬೆಚ್ಚಿ ಬೀಳಿಸಿದೆ. ಒಂಟಿ ಮಹಿಳೆ ತನ್ನಿಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಇದೀಗ ಸಾಕಷ್ಟು ಅನುಮಾನ ಮೂಡಿಸಿದೆ.
ಸಾವಿನ ಸುತ್ತ ಅನುಮಾನದ ಹುತ್ತ!
ಹೌದು.. ತುಮಕೂರು ಜಿಲ್ಲೆಯ ಶಿರಾ ನಗರ ಠಾಣೆ ವ್ಯಾಪ್ತಿಯಲ್ಲಿ ಒಂದು ಹೃದಯವಿದ್ರಾವಕ ಘಟನೆ ನಡೆದಿದೆ. ಶಿರಾದ ರಾಬಿಯಾ ಅಸ್ಲಾಂ ಪಾಷ, ತಮ್ಮ ಇಬ್ಬರು ಮುದ್ದು ಮಕ್ಕಳಿಗೆ ವಿಷ ನೀಡಿ ಮಕ್ಕಳು ಸಾವನ್ನಪ್ಪಿದ ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ರಾಬಿಯಾ ಸಾವಿನ ಸುತ್ತ ಸಾಕಷ್ಟು ಅನುಮಾನ ಮೂಡಿಸಿದೆ.

ನಿವೇಶನಕ್ಕಾಗಿ ರಾಬಿಯಾ ಹೋರಾಟ
ಶಿರಾದಲ್ಲಿ ಸರ್ಕಾರಿ ನಿವೇಶನಕ್ಕಾಗಿ ಈ ಹಿಂದೆ ರಾಬೀಯಾ ಹೋರಾಟ ನಡೆಸಿದ್ದಳು. ರಾಬಿಯಾ ಹೋರಾಟದ ಫಲವಾಗಿ ಇತ್ತೀಚೆಗಷ್ಟೆ ಶಿರಾದಲ್ಲಿ ಸರ್ಕಾರಿ ನಿವೇಶನ ಮಂಜೂರು ಮಾಡಿತ್ತು. ರಾಬಿಯಾ ಆ ಜಾಗದಲ್ಲಿ ಸಣ್ಣ ಮನೆ ಕೂಡ ನಿರ್ಮಿಸಿಕೊಂಡು ತನ್ನಿಬ್ಬರು ಮಕ್ಕಳೊಂದಿಗೆ ವಾಸವಾಗಿದ್ದಳು.
READ THIS : ಪಾಗಲ್ ಪ್ರೇಮಿಯ ಕಾಟಕ್ಕೆ ಬೇಸತ್ತು ಅಪ್ರಾಪ್ತೆ ಆತ್ಮಹತ್ಯೆ!

ಆಗಿದ್ದೇನು?
ಇನ್ನು ಈ ರಾಬಿಯ ಗೆ ಒಟ್ಟು ಮೂರು ಜನ ಗಂಡಂದಿರು. ಮೊದಲನೇ ಗಂಡ ಮೊದಲ ಮಗು ಆದ ಬಳಿಕ ತಲಾಕ್ ನೀಡಿ ರಾಬಿಯಳನ್ನ ಬಿಟ್ಟಿದ್ದ. ಇದಾದ ಬಳಿಕ ರಾಬಿಯ ಮತ್ತೊಂದು ಮದುವೆಯಾಗಿದ್ಲು. ಮದುವೆಯಾದ ಬಳಿಕ ಎರಡನೇ ಮಗು ಆದ ಕೆಲವೇ ದಿನಗಳಲ್ಲಿ ಎರಡನೇ ಗಂಡ ಅನಾರೋಗ್ಯದಿಂದ ಸಾವನ್ನಪ್ಪಿದ್ದ. ಇದಾದ ಬಳಿಕ ತುಮಕೂರು ನಗರದ ರೌಡಿಶೀಟರ್ ಶ್ರೀಕಾಂತ್ ಎಂಬಾತನನ್ನ ಕಳೆದ ಒಂದು ತಿಂಗಳ ಹಿಂದಷ್ಟೇ ಮದುವೆಯಾಗಿದ್ರು ಎಂದು ಹೇಳಲಾಗ್ತಿದೆ. ಅಲ್ಲದೇ ಸರ್ಕಾರದಿಂದ ಕೊಟ್ಟಿದ್ದ ನಿವೇಶನದಲ್ಲಿ ಮನೆ ನಿರ್ಮಿಸಿಕೊಂಡು ಕಳೆದ ನಾಲ್ಕು ದಿನಗಳ ಹಿಂದಷ್ಟೇ ಹೊಸ ಮನೆಯಲ್ಲಿ ವಾಸ ಶುರು ಮಾಡಿದ್ಲು.ಆಗಾಗ್ಗೆ ತುಮಕೂರಿನ ಶ್ರೀಕಾಂತ್ ಈಕೆಯ ಮನೆಗೆ ಬಂದು ಹೋಗ್ತಿದ್ದ ಎನ್ನಲಾಗಿದೆ.

ರಾತ್ರಿ ಶ್ರೀಕಾಂತ್ ರಾಬೀಯಾ ಮನೆಗೆ ಬಂದಿದ್ದು, ಈ ವೇಳೆ ರಾಬೀಯಾ ಬಾಗಿಲು ತೆಗೆಯದಿದ್ದಾಗ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಸ್ಥಳಕ್ಕೆ ಬಂದು ಬಾಗಿಲು ತೆಗೆದಾಗ ಮನೆಯೊಳಗೆ ಮೂವರು ಸಾವನ್ನಪ್ಪಿರೋದು ಬೆಳಕಿಗೆ ಬಂದಿದೆ. ಇನ್ನು ಮೃತ ರಾಬಿಯ ಕುಟುಂಬಸ್ಥರು ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಆರೋಪ ಮಾಡ್ತಿದ್ದಾರೆ. ಸದ್ಯ ಘಟನೆ ಸಂಬಂಧ ಶಿರಾ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದು ಎರಡು ಮಕ್ಕಳನ್ನ ಕೊಲೆ ಮಾಡಿದ ಆರೋಪದ ಮೇಲೆ ರಾಬಿಯ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಸಾವಿಗೆ ಪ್ರಚೋದನೆ ನೀಡಿದ ಆರೋಪದ ಮೇರೆಗೆ ಶ್ರೀಕಾಂತ್ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಿದ ಶಿರಾ ಪೊಲೀಸರು ರಾಬಿಯ ಮೂರನೇ ಪತಿ ಆರೋಪಿ ಶ್ರೀಕಾಂತ್ ನನ್ನ ವಶಕ್ಕೆ ಪಡೆದಿದ್ದಾರೆ.

ರಾಬಿಯಾಳ ಸಾವಿಗೆ ನಿಖರ ಕಾರಣವೇನು?
ಇನ್ನು ರಾಬಿಯಾಳ ಸಾವಿಗೆ ನಿಖರ ಕಾರಣ ಮತ್ತು ಕಾರಣರಾದವರು ಯಾರು ಎಂಬುದು ಪೊಲೀಸರ ತನಿಖೆಯಿಂದಷ್ಟೇ ಹೊರ ಬರಬೇಕಿದೆ. ಅದೇನೆ ಆಗಲಿ ಏನು ಅರಿಯದ ಇಬ್ಬರು ಮುಗ್ದ ಮಕ್ಕಳ ಜೀವ ತೆಗೆದು ತಾನೂ ಸಾವಿಗೆ ಶರಣಾಗಿರೋದು ಮಾತ್ರ ದುರಂತವೇ ಸರಿ.
MUST WATCH : ತುಮಕೂರಲ್ಲಿ ಮತದಾರರಿಗೆ SIR ಶಾಕ್ – ಪಟ್ಟಿಯಿಂದ DELETE ಆದವರೆಷ್ಟು ಗೊತ್ತಾ.?





