ʻಲಾರ್ಡ್ʼನಂತೆ ಶತಕ ಸಿಡಿಸಿದ Rohit Sharma – ಲಾರ್ಡ್ಸ್ನಲ್ಲಿ ಇತಿಹಾಸ ಸೃಷ್ಟಿ; ಹಲವು ದಾಖಲೆ ಉಡೀಸ್

ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ, ಲಾರ್ಡ್ಸ್ ಮೈದಾನದಲ್ಲಿ ಏಕದಿನ ಕ್ರಿಕೆಟ್ನಲ್ಲಿ ಶತಕ ದಾಖಲಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಬಹುದಿನಗಳ ಬಳಿಕ ಲಯಕ್ಕೆ ಮರಳಿದ ಹಿಟ್ ಮ್ಯಾನ್ ರೋಹಿತ್
ಇಂಗ್ಲೆಂಡ್ ವಿರುದ್ಧ 388 ರನ್ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಪರ ಆರಂಭಿಕ ಜೋಡಿ ನಿಧಾನ ಗತಿಯ ಬ್ಯಾಟಿಂಗ್ ಶುರು ಮಾಡಿತು. ಬಳಿಕ ಅಬ್ಬರಿಸಲು ಶುರು ಮಾಡಿದ್ರು. ಬಹುದಿನಗಳ ಬಳಿಕ ಲಯಕ್ಕೆ ಮರಳಿದ ಹಿಟ್ ಮ್ಯಾನ್ Rohit Sharma 84 ಎಸೆತಗಳಲ್ಲಿ 11 ಬೌಂಡರಿ, 4 ಸಿಕ್ಸರ್ ಸಹಿತ ಶತಕ ಬಾರಿಸಿ ಇತಿಹಾಸ ನಿರ್ಮಿಸಿದರು. ಒಟ್ಟು 110 ಎಸೆತಗಳನ್ನು ಎದುರಿಸಿದ ರೋಹಿತ್ 5 ಸಿಕ್ಸರ್, 17 ಬೌಂಡರಿ ಸಹಿತ 138 ರನ್ ಚಚ್ಚಿ ಪೆವಿಲಿಯನ್ಗೆ ಮರಳಿದ್ರು.
ಇದನ್ನು ಓದಿ : Rohit Sharma|ODI ಅಗ್ರ ಸ್ಥಾನಕ್ಕೇರಿದೆ ರೋಹಿತ್ ಶರ್ಮಾ!

ಲಾರ್ಡ್ಸ್ನಲ್ಲಿ ಐತಿಹಾಸಿಕ ಸಾಧನೆ
ಈ ಶತಕದೊಂದಿಗೆ ರೋಹಿತ್ ಶರ್ಮಾ ಲಾರ್ಡ್ಸ್ನಲ್ಲಿ ಏಕದಿನ ಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಇದರ ಜೊತೆಗೆ ಒಂದೇ ವಿದೇಶಿ ತಂಡದ ವಿರುದ್ಧ 8 ಏಕದಿನ ಶತಕಗಳನ್ನು ದಾಖಲಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ಮತ್ತೊಂದು ಅಪರೂಪದ ಸಾಧನೆಯನ್ನೂ ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.

ಒಂದೇ ವಿದೇಶಿ ತಂಡದ ವಿರುದ್ಧ ಅತಿ ಹೆಚ್ಚು ಏಕದಿನ ಶತಕ ಬಾರಿಸಿದ ಬ್ಯಾಟರ್ಗಳು
- ರೋಹಿತ್ ಶರ್ಮಾ – 8 ಶತಕ (ಇಂಗ್ಲೆಂಡ್ ವಿರುದ್ಧ)
- ಕ್ವಿಂಟನ್ ಡಿ ಕಾಕ್ – 7 ಶತಕ (ಭಾರತ ವಿರುದ್ಧ)
- ಎಬಿ ಡಿ ವಿಲಿಯರ್ಸ್ – 7 ಶತಕ (ಭಾರತ ವಿರುದ್ಧ)
- ಸಯೀದ್ ಅನ್ವರ್ – 7 ಶತಕ (ಯುಎಇ ವಿರುದ್ಧ)
- ಸಚಿನ್ ತೆಂಡೂಲ್ಕರ್ – 7 ಶತಕ (ಯುಎಇ ವಿರುದ್ಧ)

ಇದನ್ನು ನೋಡಿ : ತುಮಕೂರಿನಲ್ಲೇ ಏರ್ ಪೋರ್ಟ್ ಮಾಡಿ – ಉದ್ಯಮಿಗಳಿಂದ ಸರ್ಕಾರಕ್ಕೆ ಬೇಡಿಕೆ




