ಸೆನ್ಸಾರ್ ಕಟ್ ಇಲ್ಲದೆ ‘ಜನ ನಾಯಗನ್’ ಸಿನಿಮಾ ನೋಡಲು Vijay ಅಭಿಮಾನಿಗಳಿಗೆ ಸುವರ್ಣಾವಕಾಶ

ತಮಿಳುನಾಡು ಮುಖ್ಯಮಂತ್ರಿ ಹಾಗೂ ಸ್ಟಾರ್ ನಟ ವಿಜಯ್ ಅವರ ಕೊನೆಯ ಸಿನಿಮಾ ‘ಜನ ನಾಯಗನ್’ ಬಿಡುಗಡೆಗೆ ಸಜ್ಜಾಗಿದೆ. ಸೆನ್ಸಾರ್ ಮಂಡಳಿ ಈ ಚಿತ್ರಕ್ಕೆ ‘ಎ’ ಪ್ರಮಾಣಪತ್ರ ನೀಡಿದೆ. ಸುಮಾರು 7 ತಿಂಗಳ ವಿಳಂಬದ ನಂತರ ಸಿನಿಮಾ ಥಿಯೇಟರ್ಗೆ ಬರುತ್ತಿದೆ. ಭಾರತದಲ್ಲಿ ರಿಲೀಸ್ ಆಗುವ ಸಿನಿಮಾಗೆ ಸೆನ್ಸಾರ್ ಮಂಡಳಿ ಹಲವು ಕಟ್ಗಳನ್ನು ಮಾಡಿದೆ. ಆದರೆ ವಿದೇಶಗಳಲ್ಲಿ ಯಾವುದೇ ಕಟ್ ಇಲ್ಲದೆ ಒರಿಜಿನಲ್ ಸಿನಿಮಾ ಬಿಡುಗಡೆಯಾಗುತ್ತಿದೆ. ವಿದೇಶದಲ್ಲಿರುವ ವಿಜಯ್ ಅಭಿಮಾನಿಗಳು ಚಿತ್ರದ ರಾ ಮತ್ತು ಅನ್ಕಟ್ ವರ್ಷನ್ ನೋಡಬಹುದು.

ಯುಕೆಯಲ್ಲಿ ಜುಲೈ 24ರಂದು ಬಿಡುಗಡೆ
ಯುನೈಟೆಡ್ ಕಿಂಗ್ಡಮ್ನಲ್ಲಿ ‘ಜನ ನಾಯಗನ್’ ಚಿತ್ರವನ್ನು ಅಹಿಂಸಾ ಎಂಟರ್ಟೈನ್ಮೆಂಟ್ ವಿತರಣೆ ಮಾಡುತ್ತಿದೆ. ವಿತರಕರು ತಮ್ಮ ಅಧಿಕೃತ ಎಕ್ಸ್ (X) ಖಾತೆಯ ಮೂಲಕ ಜುಲೈ 24ರಂದು ಸಿನಿಮಾ ಬಿಡುಗಡೆಯಾಗಲಿದೆ ಎಂದು ಘೋಷಿಸಿದ್ದು, ಚಿತ್ರಕ್ಕೆ 15+ ರೇಟಿಂಗ್ ನೀಡಲಾಗಿದೆ. ಯಾವುದೇ ದೃಶ್ಯ ಅಥವಾ ಸಂಭಾಷಣೆಗೆ ಕತ್ತರಿ ಹಾಕದೇ ಸಂಪೂರ್ಣ ವರ್ಷನ್ ಪ್ರದರ್ಶಿಸಲಾಗುವುದು ಎಂದು ತಿಳಿಸಿದ್ದಾರೆ.

ಭಾರತದಲ್ಲಿ ಸೆನ್ಸಾರ್ ಮಾಡಿದ ಪ್ರಮುಖ ಬದಲಾವಣೆಗಳು
ಚಿತ್ರದಲ್ಲಿ Vijay ಅವರ ಪಾತ್ರದ ಹೆಸರು ‘ದಳಪತಿ ವೆಟ್ರಿ ಕೊಂಡಾನ್’ ಆಗಿದ್ದು, ಅದರ ಮೊದಲ ಅಕ್ಷರಗಳು ‘TVK’ ಆಗುತ್ತವೆ. ಇದು ವಿಜಯ್ ಅವರ ರಾಜಕೀಯ ಪಕ್ಷ ತಮಿಳಗ ವೆಟ್ರಿ ಕಳಗಂ ಹೆಸರಿನ ಸಂಕ್ಷಿಪ್ತ ರೂಪವೂ ಆಗಿದೆ. ಚಿತ್ರದಲ್ಲಿದ್ದ ‘ಅಂಬೇಡ್ಕರ್ ಸಟಮ್… ಟು… TVK ಸಟಮ್’ ಎಂಬ ಸಂಭಾಷಣೆಯನ್ನು ಸೆನ್ಸಾರ್ ಮಂಡಳಿ ಸಂಪೂರ್ಣವಾಗಿ ತೆಗೆದುಹಾಕಿದೆ. ಈ ಬದಲಾವಣೆಯನ್ನು ಆಡಿಯೋ ಹಾಗೂ ವಿಡಿಯೋ ಎರಡರಲ್ಲೂ ಮಾಡಲಾಗಿದೆ.
ಇನ್ನೂ ಹಲವು ದೃಶ್ಯಗಳಿಗೆ ಕತ್ತರಿ
ಸೆನ್ಸಾರ್ ಮಂಡಳಿ ಚಿತ್ರದ ಹಲವು ದೃಶ್ಯಗಳು ಮತ್ತು ಪದಗಳಲ್ಲಿ ಬದಲಾವಣೆ ಮಾಡಿದೆ. ‘ಓಂ’, ‘ನ್ಯೂ ಇಂಡಿಯಾ’, ‘ಭಾಗವತಂ’, ‘ರಂಗನಾಥರ್’ ಸೇರಿದಂತೆ ಕೆಲವು ಪದಗಳನ್ನು ಮ್ಯೂಟ್ ಮಾಡಲಾಗಿದೆ.
ಸದ್ದಾಂ ಹುಸೇನ್ ಗಲ್ಲು ಶಿಕ್ಷೆಗೆ ಸಂಬಂಧಿಸಿದ ಸಂಭಾಷಣೆಗಳನ್ನು ಬದಲಾಯಿಸಲಾಗಿದ್ದು, ಪೊಲೀಸ್ ಅಧಿಕಾರಿಯ ಬ್ಯಾಡ್ಜ್ಗೆ ಗೌರವ ನೀಡದ ದೃಶ್ಯವನ್ನು ತೆಗೆದುಹಾಕಲಾಗಿದೆ.

ಅಶ್ಲೀಲ ಪದಗಳನ್ನು ಮ್ಯೂಟ್
ಇದರ ಜೊತೆಗೆ, ಕೆಲವು ಅಶ್ಲೀಲ ಪದಗಳನ್ನು ಮ್ಯೂಟ್ ಮಾಡಲಾಗಿದ್ದು, ಮಗುವನ್ನು ಸುಡುವ ದೃಶ್ಯ ಹಾಗೂ ಭಾರತದ ರಾಷ್ಟ್ರಧ್ವಜ ನೆಲಕ್ಕೆ ಬೀಳುವ ದೃಶ್ಯಗಳನ್ನು ಸಂಪೂರ್ಣವಾಗಿ ಚಿತ್ರದಿಂದ ತೆಗೆದುಹಾಕಲಾಗಿದೆ.
ಭಾರತೀಯ ಪ್ರೇಕ್ಷಕರು ಸೆನ್ಸಾರ್ ಮಾಡಲಾದ ವರ್ಷನ್ ವೀಕ್ಷಿಸಲಿರುವಾಗ, ವಿದೇಶದಲ್ಲಿರುವ ವಿಜಯ್ ಅಭಿಮಾನಿಗಳು ಚಿತ್ರದ ಮೂಲ, ಅನ್ಕಟ್ ರೂಪವನ್ನು ವೀಕ್ಷಿಸುವ ಅವಕಾಶ ಪಡೆಯಲಿದ್ದಾರೆ.
ಇದನ್ನು ನೋಡಿ : BIDARಗೆ CM PHOTO SHOOTಗೆ ಹೋಗಿದ್ರು – CM DKS ವಿರುದ್ಧ VIJAYENDRA ವಾಗ್ದಾಳಿ





