Gold Rate : ಇಂದು ಚಿನ್ನದ ಬೆಲೆ ಕುಸಿತ

ಇಂದು ಚಿನ್ನದ ಬೆಲೆ ಮತ್ತೊಮ್ಮೆ ಇಳಿಕೆಯ ಹಾದಿ ಹಿಡಿದಿದೆ. ವಾರಾಂತ್ಯದಲ್ಲಿ ಅಲ್ಪ ಪ್ರಮಾಣದಲ್ಲಿ ಕುಸಿದಿದ್ದ ಬಂಗಾರದ ದರ, ಇಂದು ಮತ್ತಷ್ಟು 130 ರೂ ಇಳಿಕೆಯಾಗಿದ್ದು, ಆಭರಣ ಖರೀದಿಸಲು ಯೋಜಿಸುತ್ತಿರುವವರಿಗೆ ಇದು ಸಿಹಿ ಸುದ್ದಿಯಾಗಿದೆ.
ಚಿನ್ನದ ಬೆಲೆ ಮತ್ತೆ ಇಳಿಕೆ
ಕಳೆದ ಐದಾರು ತಿಂಗಳುಗಳಿಂದ ಚಿನ್ನದ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ಜನವರಿ ಅಂತ್ಯದ ವೇಳೆಗೆ 24 ಕ್ಯಾರಟ್ ಅಪರಂಜಿ ಚಿನ್ನದ 1 ಗ್ರಾಂ ಬೆಲೆ 17,885 ರೂ ಇದ್ದರೆ, ಇದೀಗ ಅದು 14,291 ರೂಗೆ ಇಳಿದಿದೆ. ಅಂದರೆ ಸುಮಾರು 3,500 ರೂಗಿಂತಲೂ ಹೆಚ್ಚು ಕುಸಿತ ದಾಖಲಾಗಿದೆ.
ಇಂದಿನ ಚಿನ್ನದ ದರ
ಭಾರತದಲ್ಲಿ ಇಂದು 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 1,31,000 ರೂ ಆಗಿದ್ದು, 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ 1,42,910 ರೂ ಆಗಿದೆ. ಬೆಳ್ಳಿ ದರವೂ ಸ್ಥಿರವಾಗಿದ್ದು, 100 ಗ್ರಾಂ ಬೆಳ್ಳಿ 23,500 ರೂಗೆ ಮಾರಾಟವಾಗುತ್ತಿದೆ.
ಬೆಂಗಳೂರಿನ ದರ
ರಾಜಧಾನಿ ಬೆಂಗಳೂರಿನಲ್ಲಿ ಕೂಡ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 1,31,000 ರೂ ಇದ್ದು, 1 ಗ್ರಾಂ ಬೆಳ್ಳಿ 235 ರೂ ದರದಲ್ಲಿ ಲಭ್ಯವಿದೆ.

ಇದನ್ನು ಓದಿ : ಚಿನ್ನ ಖರೀದಿದಾರರಿಗೆ ಗುಡ್ ನ್ಯೂಸ್.. ಬಂಗಾರ-ಬೆಳ್ಳಿ ದರ ಇಳಿಕೆ..!
ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ದರ (ಜುಲೈ 13)
- 24 ಕ್ಯಾರಟ್ ಚಿನ್ನ (1 ಗ್ರಾಂ): 14,291 ರೂ
- 22 ಕ್ಯಾರಟ್ ಚಿನ್ನ (1 ಗ್ರಾಂ): 13,100 ರೂ
- 18 ಕ್ಯಾರಟ್ ಚಿನ್ನ (1 ಗ್ರಾಂ): 10,718 ರೂ
- ಬೆಳ್ಳಿ (1 ಗ್ರಾಂ): 235 ರೂ
ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ (1 ಗ್ರಾಂ)
- ಬೆಂಗಳೂರು – 13,100 ರೂ
- ಚೆನ್ನೈ – 13,200 ರೂ
- ಮುಂಬೈ – 13,100 ರೂ
- ದೆಹಲಿ – 13,115 ರೂ
- ಕೋಲ್ಕತಾ – 13,100 ರೂ
- ಕೇರಳ – 13,100 ರೂ
- ಅಹ್ಮದಾಬಾದ್ – 13,105 ರೂ
- ಜೈಪುರ್ – 13,115 ರೂ
- ಲಕ್ನೋ – 13,115 ರೂ
- ಭುವನೇಶ್ವರ್ – 13,100 ರೂ

ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (1 ಗ್ರಾಂ)
- ಬೆಂಗಳೂರು – 235 ರೂ
- ಚೆನ್ನೈ – 240 ರೂ
- ಮುಂಬೈ – 235 ರೂ
- ದೆಹಲಿ – 235 ರೂ
- ಕೋಲ್ಕತಾ – 235 ರೂ
- ಕೇರಳ – 240 ರೂ
- ಅಹ್ಮದಾಬಾದ್ – 235 ರೂ
- ಜೈಪುರ್ – 235 ರೂ
- ಲಕ್ನೋ – 235 ರೂ
- ಭುವನೇಶ್ವರ್ – 240 ರೂ
- ಪುಣೆ – 235 ರೂ
ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ದರ (1 ಗ್ರಾಂ)
ಮಲೇಷ್ಯಾ, ದುಬೈ, ಅಮೆರಿಕ, ಸಿಂಗಾಪುರ, ಕತಾರ್, ಸೌದಿ ಅರೇಬಿಯಾ, ಓಮನ್ ಹಾಗೂ ಕುವೇತ್ ಸೇರಿದಂತೆ ಹಲವು ದೇಶಗಳಲ್ಲಿ ಚಿನ್ನದ ದರ ಭಾರತೀಯ ಮಾರುಕಟ್ಟೆಗೆ ಹೋಲಿಸಿದರೆ ಕಡಿಮೆ ಮಟ್ಟದಲ್ಲಿದೆ.

ಸೂಚನೆ: ಚಿನ್ನ ಮತ್ತು ಬೆಳ್ಳಿ ದರಗಳು ವಿವಿಧ ಆಭರಣ ಮಳಿಗೆಗಳಿಂದ ಸಂಗ್ರಹಿಸಲಾದ ಮಾಹಿತಿಯನ್ನು ಆಧರಿಸಿವೆ. ಅಂತಿಮ ಖರೀದಿ ದರಕ್ಕೆ ಜಿಎಸ್ಟಿ, ಮೇಕಿಂಗ್ ಚಾರ್ಜ್ ಹಾಗೂ ಇತರೆ ಶುಲ್ಕಗಳು ಹೆಚ್ಚುವರಿಯಾಗಿ ಅನ್ವಯಿಸಬಹುದು.
ಇದನ್ನು ನೋಡಿ : DKS – HDK ಬದ್ಧ ರಾಜಕೀಯ ವೈರಿಗಳು – ಹೀಗ್ಯಾಕಂದ್ರು ಶಾಸಕ SHIVALINGE GOWDA ?




