CSK ಮತ್ತು ಅದರ ಹೆಡ್ ಕೋಚ್ ಸ್ಟೀಫನ್ ಫ್ಲೆಮಿಂಗ್ ತಮ್ಮ 18 ವರ್ಷಗಳ ಐತಿಹಾಸಿಕ ಒಡನಾಟವನ್ನು ಕೊನೆಗೊಳಿಸಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರು ಹುದ್ದೆಯಿಂದ ಕೆಳಗಿಳಿದಿದ್ದಾರೆ. ಇದರೊಂದಿಗೆ ಐಪಿಎಲ್ನ ಅತ್ಯಂತ ಸುದೀರ್ಘ ಹಾಗೂ ಯಶಸ್ವಿ ಕೋಚ್-ಫ್ರಾಂಚೈಸಿ ಬಾಂಧವ್ಯವೊಂದು ಕೊನೆಗೊಂಡಂತಾಗಿದೆ.
ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದ ಸ್ಟೀಫನ್ ಫ್ಲಯಿಂಗ್
2008ರ ಚೊಚ್ಚಲ ಐಪಿಎಲ್ ಆವೃತ್ತಿಯಲ್ಲಿ ಆಟಗಾರನಾಗಿ ಸಿಎಸ್ಕೆ ತಂಡವನ್ನು ಪ್ರತಿನಿಧಿಸಿದ್ದ ಫ್ಲೆಮಿಂಗ್, ಬಳಿಕ ನಿವೃತ್ತಿ ಪಡೆದು 2009ರಿಂದ ಮುಖ್ಯ ಕೋಚ್ ಆಗಿ ತಂಡದ ಜವಾಬ್ದಾರಿ ವಹಿಸಿಕೊಂಡಿದ್ದರು. ಎಂ.ಎಸ್. ಧೋನಿ ಅವರೊಂದಿಗೆ ಅವರು ಸಿಎಸ್ಕೆಯನ್ನು ಐಪಿಎಲ್ನ ಅತ್ಯಂತ ಯಶಸ್ವಿ ತಂಡವನ್ನಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಫ್ಲೆಮಿಂಗ್-ಸಿಎಸ್ಕೆ ಬೇರ್ಪಡಲು ಕಾರಣವೇನು?
ಇತ್ತೀಚಿನ ಕೆಲವು ಐಪಿಎಲ್ ಆವೃತ್ತಿಗಳಲ್ಲಿ ಸಿಎಸ್ಕೆ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿತ್ತು. ಕಳೆದ ಮೂರು ಸೀಸನ್ಗಳಲ್ಲಿ ತಂಡ ಪ್ಲೇಆಫ್ ಪ್ರವೇಶಿಸಲು ಸಾಧ್ಯವಾಗದಿರುವುದು ಹಾಗೂ ಅಂಕಪಟ್ಟಿಯಲ್ಲಿ ಹಿನ್ನಡೆ ಅನುಭವಿಸಿರುವುದು ಕೋಚಿಂಗ್ ಬದಲಾವಣೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಇದರ ಜೊತೆಗೆ, ಮೇಜರ್ ಲೀಗ್ ಕ್ರಿಕೆಟ್ನಲ್ಲಿ ಸಿಎಸ್ಕೆ ಒಡೆತನದ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡದ ನಿರಾಸಾದಾಯಕ ಪ್ರದರ್ಶನವೂ ಈ ನಿರ್ಧಾರಕ್ಕೆ ಕಾರಣವಾಗಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ಇದನ್ನು ಓದಿ : RCB vs CSK ಐಪಿಎಲ್ ಟಿಕೆಟ್ ನೀಡುವುದಾಗಿ ವಂಚನೆ ..!!

ಫ್ಲೆಮಿಂಗ್ ಅವರ ಸಾಧನೆಗಳು
ಸ್ಟೀಫನ್ ಫ್ಲೆಮಿಂಗ್ ಅವರ ಮಾರ್ಗದರ್ಶನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಲವು ಐತಿಹಾಸಿಕ ಸಾಧನೆಗಳನ್ನು ದಾಖಲಿಸಿದೆ.
- ಐದು ಬಾರಿ ಐಪಿಎಲ್ ಚಾಂಪಿಯನ್ (2010, 2011, 2018, 2021, 2023)
- ಎರಡು ಬಾರಿ ಚಾಂಪಿಯನ್ಸ್ ಲೀಗ್ ಟಿ20 ಪ್ರಶಸ್ತಿ
- 10 ಬಾರಿ ಐಪಿಎಲ್ ಫೈನಲ್ ಪ್ರವೇಶ
- 12 ಬಾರಿ ಪ್ಲೇಆಫ್ ಪ್ರವೇಶ
18 ವರ್ಷಗಳ ಸುದೀರ್ಘ ನಂಟಿಗೆ ಸ್ಟೀಫನ್ ಫ್ಲೆಮಿಂಗ್ ಗುಡ್ ಬೈ ಹೇಳಿದ್ದು, ಹೀಗಾಗಿ ಮುಂಬರುವ ಐಪಿಎಲ್ ಆರಂಭಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಹೊಸ ಕೋಚ್ ನೇಮಕವಾಗಲಿದ್ದಾರೆ.

ಇದನ್ನು ನೋಡಿ : BJPಗೆ ಬರೋದು ಬಿಡೋದು ಆಮೇಲೆ – ಆದ್ರೆ ಮೊನ್ನೆ ಕೆಲವರು ಎದೆ ಒಡೆದುಕೊಂಡಿದ್ರು




