ಬರೋಬ್ಬರಿ 132 ರನ್ – ಭರ್ಜರಿ ದಾಖಲೆ Vaibhav Sooryavanshi !

ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ 2026ರ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಮತ್ತೊಂದು ಮಹತ್ವದ ದಾಖಲೆ ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ ಒಟ್ಟು 132 ರನ್ ಕಲೆಹಾಕುವ ಮೂಲಕ ದುಲೀಪ್ ಟ್ರೋಫಿ ಸೆಮಿಫೈನಲ್ನಲ್ಲಿ 100ಕ್ಕೂ ಹೆಚ್ಚು ರನ್ ಗಳಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
266 ರನ್ಗಳಿಗೆ ಆಲೌಟ್
ಮೊದಲು ಬ್ಯಾಟಿಂಗ್ ಮಾಡಿದ ಸೆಂಟ್ರಲ್ ಝೋನ್ ತಂಡ ತನ್ನ ಮೊದಲ ಇನಿಂಗ್ಸ್ನಲ್ಲಿ 266 ರನ್ ಗಳಿಸಿತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ಈಸ್ಟ್ ಝೋನ್ ತಂಡವೂ ವೈಭವ್ ಸೂರ್ಯವಂಶಿ ಅವರ ಅಮೋಘ 92 ರನ್ಗಳ ಇನಿಂಗ್ಸ್ ನೆರವಿನಿಂದ 266 ರನ್ಗಳಿಗೆ ಆಲೌಟ್ ಆಯಿತು.

ಸೆಂಟ್ರಲ್ ಝೋನ್ 158ಕ್ಕೆ ಆಲೌಟ್
ಮೊದಲ ಇನಿಂಗ್ಸ್ನಲ್ಲಿ ಸಮಬಲ ಸಾಧಿಸಿದ ಬಳಿಕ ದ್ವಿತೀಯ ಇನಿಂಗ್ಸ್ ಆರಂಭಿಸಿದ ಸೆಂಟ್ರಲ್ ಝೋನ್ ತಂಡವನ್ನು ಈಸ್ಟ್ ಝೋನ್ ಬೌಲರ್ಗಳು ಕೇವಲ 158 ರನ್ಗಳಿಗೆ ಆಲೌಟ್ ಮಾಡಿದರು.
ಈಸ್ಟ್ ಝೋನ್ ಪರ ಮುಕೇಶ್ ಕುಮಾರ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿ 4 ವಿಕೆಟ್ ಕಬಳಿಸಿದರೆ, ಮೊಹಮ್ಮದ್ ಶಮಿ 3 ವಿಕೆಟ್ ಪಡೆದು ಮಿಂಚಿದರು.
ಇದರೊಂದಿಗೆ ಈಸ್ಟ್ ಝೋನ್ ಗೆಲುವಿಗೆ 159 ರನ್ಗಳ ಗುರಿ ನಿಗದಿಯಾಯಿತು.
READ THIS : ವೈಭವ್ ಆರ್ಭಟಕ್ಕೆ 57 ವರ್ಷಗಳ ಹಳೆಯ ದಾಖಲೆ ಧೂಳೀಪಟ!

43 ಎಸೆತಗಳಲ್ಲಿ 40 ರನ್
159 ರನ್ಗಳ ಗುರಿ ಬೆನ್ನತ್ತಿದ ಈಸ್ಟ್ ಝೋನ್ಗೆ Vaibhav Sooryavanshi ಭರ್ಜರಿ ಆರಂಭ ಒದಗಿಸಿದರು. ಆರಂಭದಲ್ಲಿ ಎಚ್ಚರಿಕೆಯಿಂದ ಬ್ಯಾಟ್ ಬೀಸಿದ ವೈಭವ್, ಬಳಿಕ ತಮ್ಮ ಎಂದಿನ ಆಕ್ರಮಣಕಾರಿ ಆಟಕ್ಕೆ ಮರಳಿದರು.
ಯುವ ದಾಂಡಿಗ 43 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 3 ಬೌಂಡರಿಗಳೊಂದಿಗೆ 40 ರನ್ ಗಳಿಸಿದರು.
ಈ ಮೂಲಕ ಮೊದಲ ಇನಿಂಗ್ಸ್ನ 92 ರನ್ಗಳೊಂದಿಗೆ ಪಂದ್ಯದಲ್ಲಿ ಒಟ್ಟು 132 ರನ್ ಕಲೆಹಾಕಿದರು. ಬಳಿಕ ಭರ್ಜರಿ ಹೊಡೆತಕ್ಕೆ ಮುಂದಾದಾಗ 40 ರನ್ಗಳಿಗೆ ವಿಕೆಟ್ ಒಪ್ಪಿಸಿದರು.

ಪೃಥ್ವಿ ಶಾ ದಾಖಲೆ ಹಿಂದಿಕ್ಕಿದ ವೈಭವ್
ಈ ಪ್ರದರ್ಶನದೊಂದಿಗೆ ವೈಭವ್ ಸೂರ್ಯವಂಶಿ ದುಲೀಪ್ ಟ್ರೋಫಿ ಸೆಮಿಫೈನಲ್ನಲ್ಲಿ ಎರಡೂ ಇನಿಂಗ್ಸ್ಗಳಲ್ಲಿ ಒಟ್ಟು 100ಕ್ಕೂ ಹೆಚ್ಚು ರನ್ ಗಳಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ದಾಖಲೆ ಬರೆದಿದ್ದಾರೆ.
ಇದಕ್ಕೂ ಮುನ್ನ ಈ ದಾಖಲೆ ಪೃಥ್ವಿ ಶಾ ಹೆಸರಿನಲ್ಲಿತ್ತು. 2022ರ ದುಲೀಪ್ ಟ್ರೋಫಿ ಸೆಮಿಫೈನಲ್ನಲ್ಲಿ ಪಶ್ಚಿಮ ವಲಯ ಪರ ಆಡಿದ್ದ ಪೃಥ್ವಿ ಶಾ ಎರಡು ಇನಿಂಗ್ಸ್ಗಳಿಂದ ಒಟ್ಟು 202 ರನ್ ಗಳಿಸಿದ್ದರು. ಆಗ ಅವರಿಗೆ 22 ವರ್ಷ 316 ದಿನ ವಯಸ್ಸಾಗಿತ್ತು.
ಆದರೆ ಇದೀಗ ಕೇವಲ 15ನೇ ವಯಸ್ಸಿನಲ್ಲಿ ವೈಭವ್ ಸೂರ್ಯವಂಶಿ ಸೆಮಿಫೈನಲ್ನ ಎರಡೂ ಇನಿಂಗ್ಸ್ಗಳಲ್ಲಿ ಒಟ್ಟು 132 ರನ್ ಗಳಿಸುವ ಮೂಲಕ ಪೃಥ್ವಿ ಶಾ ಅವರ ದಾಖಲೆ ಮುರಿದಿದ್ದಾರೆ.

MUST WATCH : ಮಾಫಿಯಾ ಪಾಲಾಗ್ತಿದ್ದ ಜಾಗ ಉಳಿದಿದೆ – ಹೀಗ್ಯಾಕಂದ್ರು ಮಾಜಿ ಶಾಸಕ GOWRISHANKAR.?




