Job Alert : ಗ್ರಾಮೀಣ ಬ್ಯಾಂಕುಗಳಲ್ಲಿ 13,706 ಹುದ್ದೆಗಳಿಗೆ ಅರ್ಜಿ ಆಹ್ವಾನ; ಪದವೀಧರರಿಗೆ ಸುವರ್ಣವಕಾಶ

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಭರ್ಜರಿ ಅವಕಾಶ ಕಲ್ಪಿಸಿದೆ. ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ (RRBs) ಗ್ರೂಪ್ ‘ಎ’ ಅಧಿಕಾರಿ ಹಾಗೂ ಗ್ರೂಪ್ ‘ಬಿ’ ಕಚೇರಿ ಸಹಾಯಕ ಹುದ್ದೆಗಳ ನೇಮಕಾತಿಗಾಗಿ CRP RRBs XV ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.
ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಒಟ್ಟು 13,706 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 1ರಿಂದ 21, 2026ರವರೆಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
13,706 ಹುದ್ದೆಗಳ ವಿವರ
ನೇಮಕಾತಿಯಲ್ಲಿ ವಿವಿಧ ಹುದ್ದೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಹುದ್ದೆಗಳ ವಿವರ ಹೀಗಿದೆ:
- ಆಫೀಸ್ ಅಸಿಸ್ಟೆಂಟ್ (ಮಲ್ಟಿಪರ್ಪಸ್): 8,183
- ಆಫೀಸರ್ ಸ್ಕೇಲ್-I (ಅಸಿಸ್ಟೆಂಟ್ ಮ್ಯಾನೇಜರ್): 4,256
- ಆಫೀಸರ್ ಸ್ಕೇಲ್-II (ಜನರಲ್ ಬ್ಯಾಂಕಿಂಗ್ ಆಫೀಸರ್): 666
- ಆಫೀಸರ್ ಸ್ಕೇಲ್-III (ಸೀನಿಯರ್ ಮ್ಯಾನೇಜರ್): 220
- ಆಫೀಸರ್ ಸ್ಕೇಲ್-II (ಐಟಿ): 182
- ಚಾರ್ಟರ್ಡ್ ಅಕೌಂಟೆಂಟ್ (CA): 81
- ಕಾನೂನು ಅಧಿಕಾರಿ: 46
- ಕೃಷಿ ಅಧಿಕಾರಿ: 38
- ಖಜಾನೆ ವ್ಯವಸ್ಥಾಪಕ: 18
- ಮಾರ್ಕೆಟಿಂಗ್ ಆಫೀಸರ್: 16
READ THIS : ಕೆಇಎಯಿಂದ ಬರೋಬ್ಬರಿ 4,699 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಶೈಕ್ಷಣಿಕ ಅರ್ಹತೆ ಏನು?
ಹುದ್ದೆಗೆ ಅನುಗುಣವಾಗಿ ಶೈಕ್ಷಣಿಕ ಅರ್ಹತೆ ಬದಲಾಗುತ್ತದೆ. ಆಫೀಸ್ ಅಸಿಸ್ಟೆಂಟ್ ಹಾಗೂ ಕೆಲವು ಅಧಿಕಾರಿ ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ವಿಶೇಷ ಹುದ್ದೆಗಳಿಗೆ ಸಂಬಂಧಿತ ವಿಷಯದಲ್ಲಿ ಪದವಿ, CA, MBA ಅಥವಾ ಕಾನೂನು ಪದವಿ ಸೇರಿದಂತೆ ನಿಗದಿತ ವಿದ್ಯಾರ್ಹತೆ ಅಗತ್ಯವಿರುತ್ತದೆ.
ವಯೋಮಿತಿ
- ಆಫೀಸ್ ಅಸಿಸ್ಟೆಂಟ್: 18ರಿಂದ 28 ವರ್ಷ
- ಆಫೀಸರ್ ಸ್ಕೇಲ್-I: 18ರಿಂದ 30 ವರ್ಷ
- ಆಫೀಸರ್ ಸ್ಕೇಲ್-II: 21ರಿಂದ 32 ವರ್ಷ
- ಆಫೀಸರ್ ಸ್ಕೇಲ್-III: 21ರಿಂದ 40 ವರ್ಷ
ನಿಯಮಾನುಸಾರ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ದೊರೆಯಲಿದೆ.
ಅರ್ಜಿ ಶುಲ್ಕ
ಸಾಮಾನ್ಯ ಹಾಗೂ ಇತರೆ ವರ್ಗದ ಅಭ್ಯರ್ಥಿಗಳಿಗೆ ₹850 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಎಸ್ಸಿ, ಎಸ್ಟಿ ಹಾಗೂ ದಿವ್ಯಾಂಗ ಅಭ್ಯರ್ಥಿಗಳಿಗೆ ₹175 ಶುಲ್ಕವಿರುತ್ತದೆ. ಅರ್ಜಿ ಶುಲ್ಕ ಪಾವತಿಸಲು ಸೆಪ್ಟೆಂಬರ್ 21, 2026 ಕೊನೆಯ ದಿನವಾಗಿದೆ.
ಆಯ್ಕೆ ಹೇಗೆ?
ಆಫೀಸ್ ಅಸಿಸ್ಟೆಂಟ್ ಹುದ್ದೆಗೆ ಪ್ರಾಥಮಿಕ ಪರೀಕ್ಷೆ ಮತ್ತು ಮುಖ್ಯ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಅಧಿಕಾರಿ ಹುದ್ದೆಗಳಿಗೆ ಪ್ರಿಲಿಮಿನರಿ ಮತ್ತು ಮುಖ್ಯ ಪರೀಕ್ಷೆಯ ನಂತರ ಸಂದರ್ಶನ ಹಂತವೂ ಇರಲಿದೆ.
ಪರೀಕ್ಷೆ ಯಾವಾಗ?
ಅಧಿಸೂಚನೆಯ ವೇಳಾಪಟ್ಟಿಯಂತೆ ಪ್ರಾಥಮಿಕ ಪರೀಕ್ಷೆಗಳು ನವೆಂಬರ್/ಡಿಸೆಂಬರ್ 2026ರಲ್ಲಿ ನಡೆಯುವ ನಿರೀಕ್ಷೆಯಿದೆ. ಫಲಿತಾಂಶಗಳನ್ನು ಡಿಸೆಂಬರ್ 2026 ಅಥವಾ ಜನವರಿ 2027ರಲ್ಲಿ ಪ್ರಕಟಿಸುವ ಸಾಧ್ಯತೆಯಿದೆ.
ಮುಖ್ಯ ಪರೀಕ್ಷೆ ಹಾಗೂ ಸಂದರ್ಶನ ಪ್ರಕ್ರಿಯೆಗಳು ಜನವರಿ/ಫೆಬ್ರವರಿ 2027ರೊಳಗೆ ಪೂರ್ಣಗೊಳ್ಳಲಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಫೆಬ್ರವರಿ ಅಥವಾ ಮಾರ್ಚ್ 2027ರ ವೇಳೆಗೆ ತಾತ್ಕಾಲಿಕ ಹುದ್ದೆ ಹಂಚಿಕೆ (Provisional Allotment) ನಡೆಯಲಿದೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಪದವೀಧರರು ಹಾಗೂ ಸಂಬಂಧಿತ ವೃತ್ತಿಪರ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಈ ನೇಮಕಾತಿ ಪ್ರಮುಖ ಅವಕಾಶವಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಹುದ್ದೆವಾರು ವಿದ್ಯಾರ್ಹತೆ, ವಯೋಮಿತಿ, ಪರೀಕ್ಷಾ ಮಾದರಿ ಮತ್ತು ಇತರೆ ಅರ್ಹತಾ ಷರತ್ತುಗಳನ್ನು ಅಧಿಸೂಚನೆಯಲ್ಲಿ ಪರಿಶೀಲಿಸುವುದು ಸೂಕ್ತ.
MUST WATCH : FLYOVERಗಳಲ್ಲಿ ಬೈಕ್ಗಳಿಗೆ NO ENTRY – ಯಾವ್ಯಾವ ವಾಹನಗಳಿಗೆ ನಿರ್ಬಂಧ ಗೊತ್ತಾ..?




