
Gold Rate ನಲ್ಲಿಂದು ಕೊಂಚ ಏರಿಕೆ; ಬೆಲೆ ಇಲ್ಲಿದೆ ನೋಡಿ
ಸೆಪ್ಟೆಂಬರ್ ತಿಂಗಳ ಮೊದಲ ದಿನವೇ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದ್ದು, ಚಿನ್ನ ಖರೀದಿಸುವವರಿಗೆ ಮತ್ತೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್ Gold Rate ಪ್ರತಿ ಗ್ರಾಂಗೆ ₹15ರಷ್ಟು ಏರಿಕೆಯಾಗಿ ₹14,385ಕ್ಕೆ ತಲುಪಿದೆ. 24 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹16 ಏರಿಕೆಯಾಗಿ ₹15,693ಕ್ಕೆ ತಲುಪಿದೆ.
ಬೆಂಗಳೂರಿನಲ್ಲಿ ಚಿನ್ನದ ದರ ಎಷ್ಟಿದೆ?
22 ಕ್ಯಾರಟ್ ಚಿನ್ನದ ಬೆಲೆ ಪ್ರತಿ 8 ಗ್ರಾಂಗೆ ₹1,15,080 ಇದ್ದರೆ, 10 ಗ್ರಾಂಗೆ ₹1,43,850 ಪಾವತಿಸಬೇಕಾಗಿದೆ. ಇನ್ನು 100 ಗ್ರಾಂ ಚಿನ್ನ ಖರೀದಿಸುವುದಾದರೆ ₹14,38,500 ವೆಚ್ಚವಾಗಲಿದೆ. 24 ಕ್ಯಾರಟ್ ಚಿನ್ನದ ಬೆಲೆ 8 ಗ್ರಾಂಗೆ ₹1,25,544 ಇದ್ದು, 10 ಗ್ರಾಂಗೆ ₹1,56,930 ಹಾಗೂ 100 ಗ್ರಾಂಗೆ ₹15,69,300 ಆಗಿದೆ.
READ THIS : ಚಿನ್ನದ ದರದಲ್ಲಿಂದು ಕೊಂಚ ಇಳಿಕೆ – ರೇಟ್ ಚೆಕ್ ಮಾಡಿ

ಪ್ರಮುಖ ನಗರಗಳಲ್ಲಿ Gold Rate
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | ₹14,385 | ₹15,677 |
| ಮುಂಬೈ | ₹14,385 | ₹15,677 |
| ದೆಹಲಿ | ₹14,385 | ₹15,677 |
| ಕೋಲ್ಕತಾ | ₹14,385 | ₹15,677 |
| ಹೈದರಾಬಾದ್ | ₹14,385 | ₹15,677 |

ಬೆಳ್ಳಿ ದರದಲ್ಲಿ ಕೊಂಚ ಇಳಿಕೆ
ಚಿನ್ನದ ಬೆಲೆ ಏರಿಕೆಯ ನಡುವೆಯೇ ಬೆಳ್ಳಿ ದರದಲ್ಲಿ ಕೊಂಚ ಇಳಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ ₹250, 10 ಗ್ರಾಂಗೆ ₹2,500 ಹಾಗೂ ಒಂದು ಕೆ.ಜಿ. ಬೆಳ್ಳಿಗೆ ₹2,50,000 ದರ ಇದೆ.
ಚಿನ್ನ ಮತ್ತು ಬೆಳ್ಳಿಯ ದರಗಳು ಮಾರುಕಟ್ಟೆಯ ಏರಿಳಿತಕ್ಕೆ ಅನುಗುಣವಾಗಿ ಬದಲಾಗುವುದರಿಂದ, ಆಭರಣ ಖರೀದಿಸುವ ಮುನ್ನ ಅಂದಿನ ನಿಖರ ದರವನ್ನು ಪರಿಶೀಲಿಸುವುದು ಸೂಕ್ತ.

MUST WATCH : ರೈಲಿನ ಸೀಟ್ ಕೆಳಗೆ ಮಹಿಳೆ ಶವ ಪತ್ತೆ – ಡೆಡ್ ಬಾಡಿ ಸುತ್ತ ಅನುಮಾನದ ಹುತ್ತ




