Tirupati : ದಿನ ಮೊದಲ ಆರತಿ ಬೆಳಗುವ ಹಕ್ಕು ರಾಜ್ಯಕ್ಕೆ ಚಾನ್ಸ್

ದೇಶದ ಅತ್ಯಂತ ಶ್ರೀಮಂತ ದೇಗುಲಗಳಲ್ಲಿ ಒಂದಾದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ನಿತ್ಯ ಸಾವಿರಾರು ಮಂದಿ ಭಕ್ತರು ಆಗಮಿಸ್ತಾರೆ. ಇತ್ತ ರಾಜ್ಯದಿಂದಲೂ ಸಾವಿರಾರು ಮಂದಿ ತಿಮ್ಮಪ್ಪನ ದರ್ಶನಕ್ಕೆ ಹೋಗ್ತಾರೆ. ಇದೀಗ ತಿಮ್ಮಪ್ಪನ ದರ್ಶನ ಪಡೆಯುವ ಭಕ್ತರಿಗೆ ಭರ್ಜರಿ ಗುಡ್ ನ್ಯೂಸ್ ಒಂದು ಸಿಕ್ಕಿದೆ. ಹೌದು, ಇನ್ಮುಂದೆ ತಿರುಪತಿಯ ಶ್ರೀ ವೆಂಕಟೇಶ್ವರ ದೇವರಿಗೆ ಮೊದಲ ಆರತಿಯಲ್ಲೇ ರಾಜ್ಯದ ಭಕ್ತರಿಗೆ ಬಿಗ್ ಚಾನ್ಸ್ ಸಿಗಲಿದೆ. ಈ ಬಗ್ಗೆ ಸಿಎಂ ಡಿ.ಕೆ ಶಿವಕುಮಾರ್ ಘೋಷಣೆ ಮಾಡಿದ್ದಾರೆ.
400 ವರ್ಷಗಳ ಅವಿನಾಭಾವದ ನಂಟು
ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ಪ್ರತಿದಿನ ಬೆಳಿಗ್ಗೆ ನೆರವೇರಿಸಲಾಗುವ ಮೊದಲ ಆರತಿ ಸಾಂಪ್ರದಾಯಿಕವಾಗಿ ಕರ್ನಾಟಕ ರಾಜ್ಯದ ಹೆಸರಿನಲ್ಲೇ ನಡೆಯುತ್ತದೆ. ತಿರುಪತಿ ಕ್ಷೇತ್ರಕ್ಕೂ ಕರ್ನಾಟಕಕ್ಕೂ 400 ವರ್ಷಗಳ ಅವಿನಾಭಾವದ ನಂಟಿದೆ. ಈ ನಂಟಿನ ಪ್ರತೀಕವಾಗಿ ಸ್ವಾಮಿಯ ಮೊದಲ ಆರತಿ ರಾಜ್ಯದ ಪರವಾಗಿಯೇ ಸಲ್ಲಿಸಲಾಗುತ್ತದೆ.
ಇದನ್ನು ಓದಿ : ತಿರುಪತಿಗೆ ಹೋಗುವ ಭಕ್ತರಿಗೆ ಅಲರ್ಟ್! ದರ್ಶನಕ್ಕೆ ಎಷ್ಟು ಗಂಟೆ ಕಾಯ್ಬೇಕು ಗೊತ್ತಾ?

ತಿಮ್ಮಪ್ಪನಿಗೆ ಮೊದಲ ಆರತಿ ಬೆಳಗುವ ಹಕ್ಕು
ಇನ್ನು ಮೈಸೂರು ಮಹಾರಾಜರ ಕಾಲದಲ್ಲಿ ತಿಮ್ಮಪ್ಪನ ಗರ್ಭಗುಡಿಯೊಳಗೆ ನಿರಂತರವಾಗಿ ಬೆಳಗುವ ಪವಿತ್ರ ದೀಪಗಳಿಗೆ ಪ್ರತಿದಿನ 5 ಕೆಜಿ ಪರಿಶುದ್ಧವಾದ ತುಪ್ಪವನ್ನು ಕಾಣಿಕೆಯಾಗಿ ನೀಡುವ ಸಂಪ್ರದಾಯ ಇದ್ದು, ಮೈಸೂರು ಮಹಾರಾಜರ ಕೊಡುಗೆ ಪ್ರತಿಯಾಗಿ ತಿಮ್ಮಪ್ಪನಿಗೆ ಮೊದಲ ಆರತಿ ಬೆಳಗುವ ಹಕ್ಕು ರಾಜ್ಯಕ್ಕೆ ಸಿಕ್ಕಿದೆ.
Tirupati ತಿಮ್ಮಪ್ಪನ ಆರತಿಯಲ್ಲಿ ಇನ್ಮುಂದೆ ಕರ್ನಾಟಕ ವಿಐಪಿಗಳಿಗೂ ಚಾನ್ಸ್!
ಪ್ರತಿದಿನ ಬೆಳಿಗ್ಗೆ ಕರ್ನಾಟಕ ಸರ್ಕಾರದ ವತಿಯಿಂದ ತಿರುಪತಿಯಲ್ಲಿ ನಿಯೋಜನೆಗೊಂಡಿರುವ ವಿಶೇಷ ಅಧಿಕಾರಿಯೊಬ್ಬರು ಅಲ್ಲಿ ಹಾಜರಿದ್ದು ಪ್ರಸಾದ ಮತ್ತು ಗೌರವವನ್ನು ಸ್ವೀಕರಿಸುತ್ತಾರೆ. ಇದೀಗ ಸಿಎಂ ಡಿ.ಕೆ ಶಿವಕುಮಾರ್ ಆದೇಶದಂತೆ ತಿರುಪತಿ ತಿಮ್ಮಪ್ಪನ ಮೊದಲ ಆರತಿಯಲ್ಲಿ ಕರ್ನಾಟಕದ ಸಚಿವರು, ಶಾಸಕರಿಗೂ ಅವಕಾಶ ನೀಡಲು ಸರ್ಕಾರ ಮುಂದಾಗಿದ್ದು, ಆದಷ್ಟು ಬೇಗ ಆ ಆದೇಶ ಹೊರಡಿಸಲಾಗುತ್ತದೆ.

ಇದನ್ನು ನೋಡಿ : JDS ಬಿಡೋವಾಗ ಮಂತ್ರಿ ಮಾಡ್ತೀವಿ ಅಂದಿದ್ರು -ಸಚಿವ ಸ್ಥಾನದ ಬಗ್ಗೆ ಬಾಯ್ಬಿಟ್ಟ




