
ರೇಣುಕಾಸ್ವಾಮಿ ಕೊಲೆ ಕೇಸ್ : ಇಂದು ಹೈಕೋರ್ಟ್ ನಲ್ಲಿ Darshan ಖುದ್ದು ಹಾಜರಿ ಕುರಿತು ಸಲ್ಲಿಸಿದ್ದ ಅರ್ಜಿಯ ವಿಚಾರಣೆ!
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖುದ್ದು ಹಾಜರಿಗೆ ಅವಕಾಶ ನೀಡುವಂತೆ ನಟ ದರ್ಶನ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು ಹೈಕೋರ್ಟ್ನಲ್ಲಿ ನಡೆಯಲಿದೆ. 59ನೇ ಸಿಸಿಎಚ್ ನ್ಯಾಯಾಲಯವು ದರ್ಶನ್ ಅವರನ್ನು ಖುದ್ದು ಹಾಜರುಪಡಿಸುವಂತೆ ಮಾಡಿದ್ದ ಮನವಿಯನ್ನು ನಿರಾಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ Darshan ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
READ THIS : ಆರೋಪಿ Darshan ಗೆ ಎದುರಾಯ್ತು ಮಾಫಿ ಸಾಕ್ಷಿ ಭೀತಿ!

Darshan ಪರ ವಕೀಲರಿಗೆ ಹೈಕೋರ್ಟ್ ಮೂರು ಆಯ್ಕೆ
ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಹೈಕೋರ್ಟ್, ದರ್ಶನ್ ಪರ ವಕೀಲರಿಗೆ ವಿಚಾರಣೆಯಲ್ಲಿ ಭಾಗವಹಿಸಲು ಮೂರು ಪರ್ಯಾಯ ಮಾರ್ಗಗಳನ್ನು ಸೂಚಿಸಿದೆ. ಮೊದಲನೆಯದಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ದರ್ಶನ್ ಅವರಿಂದ ಸೂಚನೆಗಳನ್ನು ಪಡೆಯುವ ಅವಕಾಶವನ್ನು ನೀಡಲಾಗಿದೆ.
ಎರಡನೇ ಆಯ್ಕೆಯಾಗಿ ವಿಚಾರಣೆಯನ್ನು ಪರಪ್ಪನ ಅಗ್ರಹಾರ ಜೈಲು ಆವರಣಕ್ಕೆ ಸ್ಥಳಾಂತರಿಸುವ ಸಾಧ್ಯತೆಯನ್ನು ನ್ಯಾಯಾಲಯ ಮುಂದಿಟ್ಟಿದೆ. ಮೂರನೇ ಆಯ್ಕೆಯಾಗಿ ಮುಖ್ಯ ಸಾಕ್ಷಿ ಪಾಟೀ ಸವಾಲಿನ ವೇಳೆ ಸೀಮಿತ ಖುದ್ದು ಹಾಜರಿ.

ಎಸ್ಪಿಪಿ ಜೊತೆ ಚರ್ಚಿಸಿ ಪ್ರತಿಕ್ರಿಯಿಸಲು ಸಲಹೆ
ಪಾಟೀ ಸವಾಲಿನ ವೇಳೆ ಸೀಮಿತ ಖುದ್ದು ಹಾಜರಿ. ಎಸ್ಪಿಪಿ ಜೊತೆ ಚರ್ಚಿಸಿ ಪ್ರತಿಕ್ರಿಯಿಸಲು ಹೈಕೋರ್ಟ್ ಸಲಹೆ ನೀಡಿದೆ. ಇಂದು ಮಧ್ಯಾಹ್ನ 2:30ಕ್ಕೆ ನ್ಯಾಯಮೂರ್ತಿ ಶ್ರೀಶಾನಂದ ಅವರ ಪೀಠದಲ್ಲಿ ವಿಚಾರಣೆ ನಡೆಯಲಿದೆ.
MUST WATCH : ರಾಜ್ಯದ ಜನ್ರಿಗೆ ಕರೆಂಟ್ ಶಾಕ್ – ವಿದ್ಯುತ್ ಅಭಾವ ಎಂದ CM





