ಪ್ರಕೃತಿ ಮಡಿಲಲ್ಲಿ ನಟಿ Sapthami Gowda ಹೊಸ ಮನೆ

‘ಕಾಂತಾರ’ ಸಿನಿಮಾದಲ್ಲಿ ‘ಲೀಲಾ’ ಪಾತ್ರದ ಮೂಲಕ ಸಿನಿಪ್ರಿಯರ ಮನಗೆದ್ದ ನಟಿ ಸಪ್ತಮಿ ಗೌಡ ಅವರ ಬಹುಕಾಲದ ಕನಸು ಇದೀಗ ನನಸಾಗಿದೆ. ಪ್ರಕೃತಿ ಸೌಂದರ್ಯದ ತವರೂರಾದ ಮಲೆನಾಡಿನಲ್ಲಿ ಹೊಸ ಫಾರ್ಮ್ಹೌಸ್ ಖರೀದಿಸಿರುವ ನಟಿ, ಅದಕ್ಕೆ ‘ಕಾಜಾಣ’ ಎಂದು ನಾಮಕರಣ ಮಾಡಿದ್ದಾರೆ.

ಕಾಜಾಣ ಎಂದರೇನು?
‘ಕಾಜಾಣ’ ಎಂಬುದು ಸಣ್ಣ ಗಾತ್ರದ ಪಕ್ಷಿಯ ಹೆಸರು. ಇದು ಸಮೃದ್ಧಿ ಮತ್ತು ಸೌಂದರ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕೆ ತಮ್ಮ ಕನಸಿನ ಮನಗೆ ಈ ಹೆಸರು ಇಟ್ಟಿರುವುದು ವಿಶೇಷವಾಗಿದೆ.
ಇದನ್ನು ಓದಿ : ವಿಂಟರ್ ಟ್ರೆಂಡ್ ವೆಲ್ವೆಟ್ ಸೀರೆಯಲ್ಲಿ ನಟಿ ಸಪ್ತಮಿಗೌಡ ಮಿಂಚಿಂಗ್!

ಕುಟುಂಬದೊಂದಿಗೆ ಗೃಹಪ್ರವೇಶ ಸಂಭ್ರಮ
ಮಲೆನಾಡಿನ ತಂಪಾದ ವಾತಾವರಣ, ಸುತ್ತಲೂ ಕಂಗೊಳಿಸುವ ಹಸಿರಿನ ಮಧ್ಯೆ ಇರುವ ಈ ಫಾರ್ಮ್ಹೌಸ್ನಲ್ಲಿ ಸಪ್ರಮಿ ಗೌಡ ಕುಟುಂಬದವರು ವಿಘ್ನ ವಿನಾಶ ಪೂಜೆಯನ್ನ ಅತ್ಯಂತ ಶ್ರದ್ದಾ-ಭಕ್ತಿಯಿಂದ ನೆರವೇರಿಸಿದ್ದಾರೆ. ಈ ಸಂಭ್ರಮದ ಫೋಟೋಗಳನ್ನು ನಟಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

ಕುಟುಂಬದ ಸಮ್ಮುಖದಲ್ಲಿ ಪೂಜೆ
ಈ ಸಂಭ್ರಮದ ಕ್ಷಣಕ್ಕೆ ಸಪ್ತಮಿ ಗೌಡ ಅವರ ಇಡೀ ಕುಟುಂಬ ಸಾಕ್ಷಿಯಾಗಿತ್ತು. ಸಪ್ತಮಿ ಗೌಡ ಅವರ ತಂದೆ ಎಸ್.ಕೆ ಉಮೇಶ್, ತಾಯಿ ಹಾಗೂ ಮುದ್ದನ ತಂಗಿ ಉತ್ತರೆ ಗೌಡ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿದ್ದರು.
ಇದನ್ನು ನೋಡಿ : ಬಡವರ ಅಕ್ಕಿಗೆ ಕನ್ನ ಹಾಕಲು ಯತ್ನ ಜಮೀನಿನಲ್ಲಿದ್ದ ಗೋಡೌನ್ ಮೇಲೆ ರೇಡ್





