ಪತಿ-ಪತ್ನಿ Suicide ಗೆ ಶರಣು – ಪೊಲೀಸರ ಕಿರುಕುಳ ಶಂಕೆ!

ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ವಿಚಾರಣೆಗೆ ಒಳಗಾಗಿದ್ದ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಮಿಳುನಾಡಿನ ಹೊಸೂರು ಸಮೀಪದ ಭಾರತಿಯಾರ್ ನಗರದಲ್ಲಿ ನಡೆದಿದೆ. ಪೊಲೀಸ್ ವಿಚಾರಣೆಯ ಬಳಿಕವೇ ದಂಪತಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಸಾವಿಗೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪತಿ-ಪತ್ನಿ ಆತ್ಮಹತ್ಯೆಗೆ ಶರಣು
ಮೃತರನ್ನು ಉಲಗನಾಥನ್ (50) ಮತ್ತು ರಾಣಿ (44) ಎಂದು ಗುರುತಿಸಲಾಗಿದೆ. ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದರಲ್ಲಿ ತಾಮ್ರದ ತಂತಿ ಕಳ್ಳತನವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಲಗನಾಥನ್ ಅವರನ್ನು ಹುಡ್ಕೊ ಠಾಣೆ ಪೊಲೀಸರು ವಿಚಾರಣೆಗೆ ಕರೆದಿದ್ದರು ಎನ್ನಲಾಗಿದೆ.
READ THIS : ಯುವಕನಿಂದ ಬ್ಲ್ಯಾಕ್ ಮೇಲ್ – ಕ್ರಿಮಿನಾಶಕ ಮಾತ್ರೆ ಸೇವಿಸಿ ಗೃಹಿಣಿ ಸೂಸೈಡ್!

ನಡೆದಿದ್ದೇನು?
ಮಾಹಿತಿಯ ಪ್ರಕಾರ, 2025ರ ಆಗಸ್ಟ್ನಲ್ಲಿ ನಡೆದಿದ್ದ ತಾಮ್ರದ ತಂತಿ ಕಳ್ಳತನ ಪ್ರಕರಣದಲ್ಲಿ ಉಲಗನಾಥನ್ ಅವರನ್ನು ಬಂಧಿಸಲಾಗಿತ್ತು. ಬಳಿಕ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಮತ್ತೆ ಪೊಲೀಸ್ ವಿಚಾರಣೆಗೆ ಕರೆಸಲಾಗಿತ್ತು ಎನ್ನಲಾಗಿದೆ.
ನಿನ್ನೆ ಪೊಲೀಸ್ ವಿಚಾರಣೆಗೆ ಹಾಜರಾಗಿ ಮನೆಗೆ ವಾಪಸ್ ಬಂದ ಬಳಿಕ ದಂಪತಿ Suicide ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇಂದು ಮನೆಯಲ್ಲಿದ್ದ ದಂಪತಿ ಪ್ರತಿಕ್ರಿಯಿಸದಿರುವುದನ್ನು ಗಮನಿಸಿದ ಪುತ್ರಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಸ್ಥಳಕ್ಕೆ ಪೊಲೀಸರ ಭೇಟಿ
ಘಟನಾ ಸ್ಥಳಕ್ಕೆ ಹುಡ್ಕೊ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತದೇಹಗಳನ್ನು ಹೊಸೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
MUST WATCH : ಅಂತರ್ಜಾತಿ ವಿವಾಹವಾಗಿದ್ದಕ್ಕೆ ಕೊ* – 13 ದಿನದ ಬಳಿಕ ಯುವಕನ ಅಸ್ಥಿಪಂಜರ ಪತ್ತೆ




