
ನೇಪಾಳ ಪ್ರವಾಹ – ಮೃತರ ಸಂಖ್ಯೆ 939ಕ್ಕೆ ಏರಿಕೆ, ಇನ್ನೂ ಸುಮಾರು 4,000 ಜನ ಕಣ್ಮರೆ
ನೇಪಾಳ-ಚೀನಾ ಗಡಿ ಸಮೀಪ ಸಂಭವಿಸಿದ ಭೀಕರ ಪ್ರವಾಹದಿಂದ ಉಂಟಾದ ದುರಂತದಲ್ಲಿ ಸಾವಿನ ಸಂಖ್ಯೆ 939ಕ್ಕೆ ಏರಿಕೆಯಾಗಿದೆ. ರಕ್ಷಣಾ ಹಾಗೂ ಶೋಧ ಕಾರ್ಯಾಚರಣೆ ಆರನೇ ದಿನಕ್ಕೆ ಕಾಲಿಟ್ಟಿದ್ದು, ಇನ್ನೂ 3,925 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಪ್ರವಾಹದಿಂದ ನೇಪಾಳ ಮಾತ್ರವಲ್ಲದೆ ಟಿಬೆಟ್ ಪ್ರದೇಶವೂ ತೀವ್ರವಾಗಿ ಹಾನಿಗೊಳಗಾಗಿದೆ. ಟಿಬೆಟ್ನಲ್ಲಿ ಇದುವರೆಗೆ 16 ಮಂದಿ ಮೃತಪಟ್ಟಿದ್ದು, 546 ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

592 ವಿದೇಶಿಯರು ನಾಪತ್ತೆ
ನೇಪಾಳದಲ್ಲಿ ನಾಪತ್ತೆಯಾಗಿರುವವರ ಪೈಕಿ 592 ಮಂದಿ ವಿದೇಶಿ ನಾಗರಿಕರು ಸೇರಿದ್ದಾರೆ. ಪ್ರವಾಹದಿಂದ ತೀವ್ರವಾಗಿ ಹಾನಿಗೊಳಗಾದ ಜಲವಿದ್ಯುತ್ ಯೋಜನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ 639 ಕಾರ್ಮಿಕರಿಗಾಗಿ ರಕ್ಷಣಾ ತಂಡಗಳು ಶೋಧ ಕಾರ್ಯ ಮುಂದುವರಿಸಿವೆ.
ನೇಪಾಳದ ವಿಪತ್ತು ನಿರ್ವಹಣಾ ಸಂಸ್ಥೆಯ ಮಾಹಿತಿ ಪ್ರಕಾರ, ಒಟ್ಟು 3,333 ನೇಪಾಳಿ ನಾಗರಿಕರು ಇನ್ನೂ ಪತ್ತೆಯಾಗಿಲ್ಲ. ನಾಪತ್ತೆಯಾಗಿರುವವರಿಗಾಗಿ ನದಿ ಪ್ರದೇಶಗಳು, ಪ್ರವಾಹ ಪೀಡಿತ ಗ್ರಾಮಗಳು ಹಾಗೂ ಹಾನಿಗೊಳಗಾದ ಮೂಲಸೌಕರ್ಯಗಳ ಸುತ್ತಮುತ್ತ ಶೋಧ ಕಾರ್ಯ ನಡೆಯುತ್ತಿದೆ.
RAED THIS : ನೇಪಾಳದಲ್ಲಿ ಭೀಕರ ಪ್ರವಾಹ – ಸಾವಿನ ಸಂಖ್ಯೆ 626 ಕ್ಕೆ ಏರಿಕೆ!

ಅಂತಾರಾಷ್ಟ್ರೀಯ ನೆರವಿಗೆ ಪ್ರಧಾನಿ ಕರೆ
ಹಿಮಾಲಯದಲ್ಲಿ ಸಂಭವಿಸಿರುವ ಈ ಭೀಕರ ಪ್ರವಾಹ ಸಾಮಾನ್ಯ ನೈಸರ್ಗಿಕ ವಿಪತ್ತಲ್ಲ ಎಂದು ನೇಪಾಳ ಪ್ರಧಾನಿ ಬಾಲೇಂದ್ರ ಶಾ ಹೇಳಿದ್ದಾರೆ.
ಪರಿಸ್ಥಿತಿಯ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಅಂತಾರಾಷ್ಟ್ರೀಯ ಕ್ರಮ ಹಾಗೂ ಸಹಕಾರದ ಅಗತ್ಯವಿದೆ ಎಂದು ಅವರು ಕರೆ ನೀಡಿದ್ದಾರೆ.
ಹವಾಮಾನ ಬದಲಾವಣೆಯಿಂದ ಹೆಚ್ಚಿದ ಆತಂಕ
ಹಿಮಾಲಯ ಪ್ರದೇಶದಲ್ಲಿ ಹವಾಮಾನ ಬದಲಾವಣೆಯ ಪರಿಣಾಮಗಳು ಹೆಚ್ಚಾಗುತ್ತಿವೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಜಾಗತಿಕ ತಾಪಮಾನ ಏರಿಕೆಯಿಂದ ಹಿಮಾಲಯದ ತಾಪಮಾನದಲ್ಲೂ ಬದಲಾವಣೆ ಉಂಟಾಗುತ್ತಿದ್ದು, ಇದರಿಂದ ಹಿಮನದಿಗಳು ವೇಗವಾಗಿ ಕರಗುವ ಸಾಧ್ಯತೆಯಿದೆ.

ಹಿಮನದಿಗಳ ಕರಗುವಿಕೆ ಹಾಗೂ ಅತಿಯಾದ ಮಳೆಯಂತಹ ಬೆಳವಣಿಗೆಗಳು ಪ್ರವಾಹದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಬಹುದು.
ಹೀಗಾಗಿ ಹಿಮಾಲಯ ಪ್ರದೇಶದಲ್ಲಿ ಇಂತಹ ಅನಿರೀಕ್ಷಿತ ಪ್ರವಾಹಗಳು ಮತ್ತು ನೈಸರ್ಗಿಕ ವಿಪತ್ತುಗಳ ಅಪಾಯ ಹೆಚ್ಚುತ್ತಿರುವ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.
MUST WATCH : TUMAKURU VVಯಲ್ಲಿ ನಡೆದಿದ್ದ ಭ್ರಷ್ಟಚಾರ ಬಯಲು!?- ವಂಚನೆ ಹಣ ವಾಪಸ್ ಕಟ್ಟಿದ್ರೇ ಶಿಕ್ಷೆಯೇ ಇಲ್ಲಾ.?




