
ನೆಲಮಂಗಲ Toll ದರ ಏರಿಕೆ- ವಾಹನ ಸವಾರರಿಗೆ ಬೆಲೆ ಏರಿಕೆಯ ಬರೆ
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಟೋಲ್ ದರ ಏರಿಕೆಯ ಶಾಕ್ ನೀಡಿದೆ.
ಮಧ್ಯರಾತ್ರಿಯಿಂದಲೇ ಪರಿಷ್ಕೃತ ಟೋಲ್ ದರ ಜಾರಿಗೆ
ನೆಲಮಂಗಲ–ಹಾಸನ ರಾಷ್ಟ್ರೀಯ ಹೆದ್ದಾರಿಯ ನೆಲಮಂಗಲ–ದೇವಿಹಳ್ಳಿ ವ್ಯಾಪ್ತಿಯಲ್ಲಿರುವ ಟೋಲ್ ಪ್ಲಾಜಾಗಳಲ್ಲಿ ಸೆಪ್ಟೆಂಬರ್ 1ರ ಮಧ್ಯರಾತ್ರಿ 12 ಗಂಟೆಯಿಂದ ಪರಿಷ್ಕೃತ Toll ದರ ಜಾರಿಗೆ ಬಂದಿದೆ. ವಾಹನಗಳ ಪ್ರಕಾರ ಟೋಲ್ ಶುಲ್ಕವನ್ನು ₹5ರಿಂದ ₹10ರವರೆಗೆ ಹೆಚ್ಚಿಸಲಾಗಿದೆ.

ನೆಲಮಂಗಲ–ದೇವಿಹಳ್ಳಿ ಎಕ್ಸ್ಪ್ರೆಸ್ವೇ ವ್ಯಾಪ್ತಿಯ ದೊಡ್ಡಕರೇನಹಳ್ಳಿ ಹಾಗೂ ಕಾರಬೈಲು ಟೋಲ್ ಪ್ಲಾಜಾಗಳಲ್ಲಿ ಪರಿಷ್ಕೃತ ದರ ಅನ್ವಯವಾಗಲಿದೆ. ಇದರಿಂದ ಈ ಮಾರ್ಗದಲ್ಲಿ ನಿತ್ಯ ಸಂಚರಿಸುವ ವಾಹನ ಸವಾರರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ.
READ THIS : Bengaluru – Mysuru ಎಕ್ಸ್ಪ್ರೆಸ್ವೇ ಟೋಲ್ ದರ ಏರಿಕೆ..!!
ಯಾವ ವಾಹನಕ್ಕೆ ಎಷ್ಟು ?
- ಕಾರು, ಜೀಪ್, ವ್ಯಾನ್ ಹಾಗೂ ಲಘು ವಾಹನಗಳು (LMV): ಫಾಸ್ಟ್ಟ್ಯಾಗ್ ಮೂಲಕ ಏಕಮುಖ ಸಂಚಾರಕ್ಕೆ ₹60. ಅದೇ ದಿನದ ಮರು ಸಂಚಾರದ ರಿಟರ್ನ್ ಪಾಸ್ ₹85ರಿಂದ ₹90ಕ್ಕೆ ಏರಿಕೆಯಾಗಿದೆ.
- ಲಘು ವಾಣಿಜ್ಯ ಹಾಗೂ ಸರಕು ವಾಹನಗಳು (LCV): ಏಕಮುಖ ಸಂಚಾರದ ಶುಲ್ಕ ₹100ರಿಂದ ₹105ಕ್ಕೆ ಹೆಚ್ಚಳವಾಗಿದ್ದು, ದಿನದ ಸಂಚಾರದ ಶುಲ್ಕ ₹155ಕ್ಕೆ ನಿಗದಿಯಾಗಿದೆ.
- ಬಸ್ ಮತ್ತು ಟ್ರಕ್: ಏಕಮುಖ ಸಂಚಾರಕ್ಕೆ ₹205 ಹಾಗೂ ದಿನದ ಸಂಚಾರಕ್ಕೆ ₹310 ಶುಲ್ಕ ನಿಗದಿಪಡಿಸಲಾಗಿದೆ.
- ಮಲ್ಟಿ ಆಕ್ಸಲ್ ಹಾಗೂ ಬೃಹತ್ ವಾಹನಗಳು: ಏಕಮುಖ ಸಂಚಾರಕ್ಕೆ ₹330 ಹಾಗೂ ದಿನದ ಸಂಚಾರಕ್ಕೆ ₹495 ಶುಲ್ಕ ವಿಧಿಸಲಾಗುತ್ತಿದೆ.

ಟೋಲ್ ದರ ಪರಿಷ್ಕರಣೆಯಿಂದ ಬೆಂಗಳೂರು–ನೆಲಮಂಗಲ–ದೇವಿಹಳ್ಳಿ ಮಾರ್ಗದಲ್ಲಿ ಪ್ರತಿನಿತ್ಯ ಸಂಚರಿಸುವ ವಾಹನ ಸವಾರರು ಹಾಗೂ ವಾಣಿಜ್ಯ ವಾಹನ ಮಾಲೀಕರಿಗೆ ಹೆಚ್ಚುವರಿ ವೆಚ್ಚ ಎದುರಾಗಲಿದೆ.
MUST WATCH : ಸೇತುವೆ ಮಧ್ಯೆ ಬಿರುಕು – ಕುಸಿತದ ಭೀತಿಯಲ್ಲಿ ಗ್ರಾಮಸ್ಥರು.!




