September ತಿಂಗಳಲ್ಲಿ ಜನ್ಮಾಷ್ಟಮಿ, ಗಣೇಶ ಚತುರ್ಥಿ, ಇಂದ್ರ ಜಾತ್ರಾ ಸೇರಿದಂತೆ 13 ದಿನಗಳವರೆಗೆ ಬ್ಯಾಂಕ್ ಬಂದ್; ಮುಷ್ಕರವೂ ಇದೆ ಗಮನಿಸಿ

ಮುಂಬರುವ ಸೆಪ್ಟೆಂಬರ್ ತಿಂಗಳಲ್ಲಿ ದೇಶಾದ್ಯಂತ ವಿವಿಧ ಕಾರಣಗಳಿಂದ ಬ್ಯಾಂಕ್ಗಳಿಗೆ ಒಟ್ಟು 13 ದಿನಗಳವರೆಗೆ ರಜೆ ಇರಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಕ್ಯಾಲೆಂಡರ್ ಪ್ರಕಾರ, ರಾಜ್ಯ ಹಾಗೂ ಪ್ರದೇಶವಾರು ಬ್ಯಾಂಕ್ ರಜಾದಿನಗಳಲ್ಲಿ ವ್ಯತ್ಯಾಸವಿರಲಿದೆ.
September ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ ಸೇರಿದಂತೆ ಹಲವು ಹಬ್ಬಗಳಿದ್ದು, ನಾಲ್ಕು ಭಾನುವಾರ ಹಾಗೂ ಎರಡು ಶನಿವಾರಗಳ ರಜೆಯೂ ಒಳಗೊಂಡಿದೆ. ಕರ್ನಾಟಕದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು 7 ದಿನ ಬ್ಯಾಂಕ್ಗಳು ಬಂದ್ ಆಗಲಿವೆ. ಪ್ರಮುಖವಾಗಿ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 14ರಂದು ಬ್ಯಾಂಕ್ಗಳಿಗೆ ರಜೆ ಇರಲಿದೆ.
ಸೆಪ್ಟೆಂಬರ್ನಲ್ಲಿ ದೇಶದ ವಿವಿಧೆಡೆ ಬ್ಯಾಂಕ್ ರಜೆ
- ಸೆಪ್ಟೆಂಬರ್ 4, ಶುಕ್ರವಾರ: ಕೃಷ್ಣ ಜನ್ಮಾಷ್ಟಮಿ — ಹಲವು ರಾಜ್ಯಗಳಲ್ಲಿ ರಜೆ
- ಸೆಪ್ಟೆಂಬರ್ 6, ಭಾನುವಾರ: ವಾರದ ರಜೆ
- ಸೆಪ್ಟೆಂಬರ್ 12, ಶನಿವಾರ: ಎರಡನೇ ಶನಿವಾರ
- ಸೆಪ್ಟೆಂಬರ್ 13, ಭಾನುವಾರ: ವಾರದ ರಜೆ
- ಸೆಪ್ಟೆಂಬರ್ 14, ಸೋಮವಾರ: ಗಣೇಶ ಚತುರ್ಥಿ — ಹಲವು ರಾಜ್ಯಗಳಲ್ಲಿ ರಜೆ
- ಸೆಪ್ಟೆಂಬರ್ 15, ಮಂಗಳವಾರ: ನುವಾಖಾಯ್, ಗಣೇಶ ಚತುರ್ಥಿ — ಕೆಲವೆಡೆ ರಜೆ
- ಸೆಪ್ಟೆಂಬರ್ 20, ಭಾನುವಾರ: ವಾರದ ರಜೆ
- ಸೆಪ್ಟೆಂಬರ್ 21, ಸೋಮವಾರ: ಶ್ರೀ ನಾರಾಯಣಗುರು ಸಮಾಧಿ, ಶ್ರೀಮಂತ ಶಂಕರದೇವ ಜನ್ಮೋತ್ಸವ — ಅಸ್ಸಾಂ, ಕೇರಳದಲ್ಲಿ ರಜೆ
- ಸೆಪ್ಟೆಂಬರ್ 22, ಮಂಗಳವಾರ: ಕರ್ಮ ಪೂಜಾ — ಜಾರ್ಖಂಡ್ನಲ್ಲಿ ರಜೆ
- ಸೆಪ್ಟೆಂಬರ್ 23, ಬುಧವಾರ: ಮಹಾರಾಜ ಹರಿಸಿಂಗ್ ಜಯಂತಿ — ಜಮ್ಮು ಮತ್ತು ಕಾಶ್ಮೀರದಲ್ಲಿ ರಜೆ
- ಸೆಪ್ಟೆಂಬರ್ 25, ಶುಕ್ರವಾರ: ಇಂದ್ರಜಾತ್ರ — ಸಿಕ್ಕಿಂನಲ್ಲಿ ರಜೆ
- ಸೆಪ್ಟೆಂಬರ್ 26, ಶನಿವಾರ: ನಾಲ್ಕನೇ ಶನಿವಾರ
- ಸೆಪ್ಟೆಂಬರ್ 27, ಭಾನುವಾರ: ವಾರದ ರಜೆ
READ THIS : August ತಿಂಗಳಲ್ಲಿ ಬ್ಯಾಂಕುಗಳಿಗೆ 15 ದಿನಗಳವರೆಗೆ ರಜೆ – ಇಲ್ಲಿದೆ ರಜಾಪಟ್ಟಿ

ಕರ್ನಾಟಕದಲ್ಲಿ 7 ದಿನ ಬ್ಯಾಂಕ್ ಬಂದ್
ಕರ್ನಾಟಕದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಈ ಕೆಳಗಿನ ದಿನಗಳಲ್ಲಿ ಬ್ಯಾಂಕ್ಗಳಿಗೆ ರಜೆ ಇರಲಿದೆ:
- ಸೆಪ್ಟೆಂಬರ್ 6: ಭಾನುವಾರ
- ಸೆಪ್ಟೆಂಬರ್ 12: ಎರಡನೇ ಶನಿವಾರ
- ಸೆಪ್ಟೆಂಬರ್ 13: ಭಾನುವಾರ
- ಸೆಪ್ಟೆಂಬರ್ 14: ಗಣೇಶ ಚತುರ್ಥಿ
- ಸೆಪ್ಟೆಂಬರ್ 20: ಭಾನುವಾರ
- ಸೆಪ್ಟೆಂಬರ್ 26: ನಾಲ್ಕನೇ ಶನಿವಾರ
- ಸೆಪ್ಟೆಂಬರ್ 27: ಭಾನುವಾರ
ಬ್ಯಾಂಕ್ ನೌಕರರ ಮುಷ್ಕರ: ಮತ್ತೆ 4 ದಿನ ಬ್ಯಾಂಕ್ ಬಂದ್ ಸಾಧ್ಯತೆ
ಇದರ ನಡುವೆ ಬ್ಯಾಂಕ್ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ನಲ್ಲಿ ಮತ್ತೆ ನಾಲ್ಕು ದಿನ ಬ್ಯಾಂಕಿಂಗ್ ಸೇವೆಗೆ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್ ನೌಕರರು ಸರಣಿ ಮುಷ್ಕರಕ್ಕೆ ಕರೆ ನೀಡಿದ್ದಾರೆ.

ಮುಷ್ಕರ ನಡೆಯಲಿರುವ ನಿರೀಕ್ಷಿತ ದಿನಾಂಕಗಳು:
- ಸೆಪ್ಟೆಂಬರ್ 11, ಶುಕ್ರವಾರ: ಒಂದು ದಿನದ ಮುಷ್ಕರ
- ಸೆಪ್ಟೆಂಬರ್ 28, ಸೋಮವಾರ: ಮುಷ್ಕರ
- ಸೆಪ್ಟೆಂಬರ್ 29, ಮಂಗಳವಾರ: ಮುಷ್ಕರ
- ಸೆಪ್ಟೆಂಬರ್ 30, ಬುಧವಾರ: ಮುಷ್ಕರ
ಹೀಗಾಗಿ ಸೆಪ್ಟೆಂಬರ್ನಲ್ಲಿ ಬ್ಯಾಂಕ್ಗೆ ತೆರಳಿ ಕೆಲಸ ಮಾಡಿಸಿಕೊಳ್ಳುವವರು ರಜಾದಿನಗಳ ಜೊತೆಗೆ ಮುಷ್ಕರದ ದಿನಾಂಕಗಳನ್ನೂ ಗಮನದಲ್ಲಿಟ್ಟುಕೊಳ್ಳುವುದು ಅಗತ್ಯ. ಬ್ಯಾಂಕ್ ಶಾಖೆಗಳು ಮುಚ್ಚಿದ್ದರೂ, ATM, UPI, ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ನಂತಹ ಡಿಜಿಟಲ್ ಸೇವೆಗಳು ಸಾಮಾನ್ಯವಾಗಿ ಲಭ್ಯವಿರುತ್ತವೆ.
MUST WATCH : ತುಮಕೂರಲ್ಲಿ EID MILAD ಸಂಭ್ರಮ – ಮಸೀದಿಯ ಕಲಾಕೃತಿಗೆ ಜನ್ರು ಫಿದಾ.!




