August ನಲ್ಲಿ ಬ್ಯಾಂಕುಗಳಿಗೆ 15 ದಿನಗಳು ರಜೆ

August ತಿಂಗಳಲ್ಲಿ ಬ್ಯಾಂಕ್ಗೆ ಭೇಟಿ ನೀಡುವ ಯೋಜನೆ ಇದ್ದರೆ ಮುಂಚಿತವಾಗಿಯೇ ದಿನಾಂಕ ಪರಿಶೀಲಿಸುವುದು ಒಳಿತು. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಬಿಡುಗಡೆ ಮಾಡಿರುವ ರಜೆಗಳ ಕ್ಯಾಲೆಂಡರ್ ಪ್ರಕಾರ, ಆಗಸ್ಟ್ 2026ರಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 15 ದಿನಗಳವರೆಗೆ ಬ್ಯಾಂಕುಗಳಿಗೆ ರಜೆ ಇರಲಿದೆ. ಸ್ವಾತಂತ್ರ್ಯ ದಿನಾಚರಣೆ, ಈದ್ ಮಿಲಾದ್, ಓಣಂ ಸೇರಿದಂತೆ ಹಲವು ರಾಷ್ಟ್ರೀಯ ಹಾಗೂ ಪ್ರಾದೇಶಿಕ ಹಬ್ಬಗಳ ಹಿನ್ನೆಲೆಯಲ್ಲಿ ಬ್ಯಾಂಕ್ ಶಾಖೆಗಳು ಬಂದ್ ಆಗಲಿವೆ.
ಕರ್ನಾಟಕದಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರ, ಭಾನುವಾರಗಳು ಸೇರಿದಂತೆ ಒಟ್ಟು 9 ದಿನ ಬ್ಯಾಂಕ್ಗಳಿಗೆ ರಜೆ ಇರಲಿದೆ.

ಆಗಸ್ಟ್ 2026ರ ಬ್ಯಾಂಕ್ ರಜೆಗಳ ಪಟ್ಟಿ
- ಆಗಸ್ಟ್ 2 (ಭಾನುವಾರ): ವಾರಾಂತ್ಯ ರಜೆ
- ಆಗಸ್ಟ್ 4 (ಮಂಗಳವಾರ): ಕೇರ್ ಪೂಜಾ (ತ್ರಿಪುರಾ)
- ಆಗಸ್ಟ್ 8 (ಶನಿವಾರ): ಎರಡನೇ ಶನಿವಾರ, ಟೆಂಡೋಂಗ್ ಲಹೋ ರುಮ್ ಫಾಟ್ (ಸಿಕ್ಕಿಂ)
- ಆಗಸ್ಟ್ 9 (ಭಾನುವಾರ): ವಾರಾಂತ್ಯ ರಜೆ
- ಆಗಸ್ಟ್ 13 (ಗುರುವಾರ): ಪೇಟ್ರಿಯಾಟ್ಸ್ ಡೇ (ಮಣಿಪುರ)
- ಆಗಸ್ಟ್ 15 (ಶನಿವಾರ): ಸ್ವಾತಂತ್ರ್ಯ ದಿನಾಚರಣೆ (ದೇಶಾದ್ಯಂತ)
- ಆಗಸ್ಟ್ 16 (ಭಾನುವಾರ): ವಾರಾಂತ್ಯ ರಜೆ
- ಆಗಸ್ಟ್ 19 (ಬುಧವಾರ): ಮಹಾರಾಜ ಬೀರ್ ಬಿಕ್ರಮ್ ಕಿಶೋರ್ ಮಾಣಿಕ್ಯ ಬಹದೂರ್ ಜಯಂತಿ (ತ್ರಿಪುರಾ)
- ಆಗಸ್ಟ್ 22 (ಶನಿವಾರ): ನಾಲ್ಕನೇ ಶನಿವಾರ
- ಆಗಸ್ಟ್ 23 (ಭಾನುವಾರ): ವಾರಾಂತ್ಯ ರಜೆ
- ಆಗಸ್ಟ್ 25 (ಮಂಗಳವಾರ): ಮಿಲಾದ್ ಉನ್ ನಬಿ, ಮಿಲಾದ್ ಇ ಶೆರಿಫ್, ಪ್ರಥಮ ಓಣಂ (ಕೇರಳ, ಆಂಧ್ರ ಪ್ರದೇಶ)
- ಆಗಸ್ಟ್ 26 (ಬುಧವಾರ): ಈದ್ ಮಿಲಾದ್, ಮಿಲಾದ್ ಉನ್ ನಬಿ, ಬರಾವಾಫತ್, ತಿರುಓಣಂ (ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು)
- ಆಗಸ್ಟ್ 27 (ಗುರುವಾರ): ಝುಲನ್ ಯಾತ್ರಾ, ಓಣಂ (ಒಡಿಶಾ, ಕೇರಳ)
- ಆಗಸ್ಟ್ 28 (ಶುಕ್ರವಾರ): ರಕ್ಷಾಬಂಧನ (ಹಲವು ರಾಜ್ಯಗಳು)
- ಆಗಸ್ಟ್ 30 (ಭಾನುವಾರ): ವಾರಾಂತ್ಯ ರಜೆ
ಇದನ್ನು ಓದಿ : Bank Assistant Manager ನಿಂದ 4 ಕೋಟಿ ಮೌಲ್ಯದ ಚಿನ್ನ ಕಳವು..!!

ಕರ್ನಾಟಕದಲ್ಲಿ ಬ್ಯಾಂಕ್ ರಜೆ ಇರುವ ದಿನಗಳು
ಕರ್ನಾಟಕದಲ್ಲಿ ಆಗಸ್ಟ್ ತಿಂಗಳಲ್ಲಿ ಈ ಕೆಳಗಿನ 9 ದಿನಗಳು ಬ್ಯಾಂಕ್ ಶಾಖೆಗಳು ಬಂದ್ ಆಗಿರಲಿವೆ.
- ಆಗಸ್ಟ್ 2 – ಭಾನುವಾರ
- ಆಗಸ್ಟ್ 8 – ಎರಡನೇ ಶನಿವಾರ
- ಆಗಸ್ಟ್ 9 – ಭಾನುವಾರ
- ಆಗಸ್ಟ್ 15 – ಸ್ವಾತಂತ್ರ್ಯ ದಿನಾಚರಣೆ
- ಆಗಸ್ಟ್ 16 – ಭಾನುವಾರ
- ಆಗಸ್ಟ್ 22 – ನಾಲ್ಕನೇ ಶನಿವಾರ
- ಆಗಸ್ಟ್ 23 – ಭಾನುವಾರ
- ಆಗಸ್ಟ್ 26 – ಈದ್ ಮಿಲಾದ್
- ಆಗಸ್ಟ್ 30 – ಭಾನುವಾರ
ಬ್ಯಾಂಕ್ ರಜೆ ಇದ್ದರೂ ಈ ಸೇವೆಗಳು ಲಭ್ಯ
ಬ್ಯಾಂಕ್ ಶಾಖೆಗಳು ಮುಚ್ಚಿದ್ದರೂ, ಬಹುತೇಕ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಲಭ್ಯ ಇರುತ್ತವೆ.
- ಎಟಿಎಂ ಮೂಲಕ 24 ಗಂಟೆಯೂ ನಗದು ವಿತ್ಡ್ರಾ ಸೌಲಭ್ಯ
- ಯುಪಿಐ ಮೂಲಕ ಹಣ ವರ್ಗಾವಣೆ
- ನೆಟ್ ಬ್ಯಾಂಕಿಂಗ್ ಮೂಲಕ NEFT ಹಾಗೂ RTGS ಸೇವೆಗಳು
- ಮೊಬೈಲ್ ಬ್ಯಾಂಕಿಂಗ್ ಮೂಲಕ ವಿವಿಧ ವಹಿವಾಟುಗಳು
ಆದರೆ ಚೆಕ್ ಠೇವಣಿ, ದೊಡ್ಡ ಮೊತ್ತದ ಹಣ ಠೇವಣಿ ಅಥವಾ ವಿತ್ಡ್ರಾ ಸೇರಿದಂತೆ ಶಾಖೆಗೆ ತೆರಳಿ ಮಾಡಬೇಕಾದ ಬ್ಯಾಂಕಿಂಗ್ ಸೇವೆಗಳಿಗಾಗಿ ರಜೆಗಳನ್ನು ಗಮನದಲ್ಲಿಟ್ಟುಕೊಂಡು ಮುಂಚಿತವಾಗಿ ಯೋಜನೆ ಮಾಡುವುದು ಸೂಕ್ತ.

ಇದನ್ನು ನೋಡಿ : ನಡುರಸ್ತೆಯಲ್ಲೇ ಹೊಡೆದಾಡಿಕೊಂಡ್ರಾ ಅಣ್ಣ-ತಮ್ಮಂದಿರು..? ಅಟ್ಯಾಕ್ ಗೆ ಅದೊಂದೇ ಕಾರಣ ಆಯ್ತಾ?




