
Dharwad : ಪತ್ನಿ ಕೊಂದು ತಾನೂ ನೇಣಿಗೆ ಶರಣಾದ ಪತಿ!
ಪತ್ನಿಯನ್ನು ಕೊಲೆ ಮಾಡಿದ ಬಳಿಕ ಪತಿಯೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ Dharwad ತಾಲೂಕಿನ ಗರಗ ಗ್ರಾಮದಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಮಗುವಿನ ಎದುರೇ ಪತ್ನಿ ಕೊಲೆ!
ಗರಗ ಗ್ರಾಮದ ಮೌಲಾಸಾಬ್ (28) ಎಂಬಾತ ತನ್ನ ಪತ್ನಿ ಸಲ್ಮಾ (21) ಅವರನ್ನು ಕೊಲೆ ಮಾಡಿ ಬಳಿಕ ತಾನೂ ನೇಣಿಗೆ ಶರಣಾಗಿದ್ದಾನೆ. ಘಟನೆಯ ವೇಳೆ ದಂಪತಿಯ ಒಂದೂವರೆ ವರ್ಷದ ಮಗು ಮನೆಯಲ್ಲೇ ಇದ್ದು, ಮಗುವಿನ ಎದುರೇ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ಮೌಲಾಸಾಬ್ ಹಾಗೂ ಸಲ್ಮಾ ಅವರ ವಿವಾಹವಾಗಿ ಸುಮಾರು ಮೂರು ವರ್ಷಗಳಾಗಿತ್ತು. ನೆನ್ನೆ ತಡರಾತ್ರಿವರೆಗೂ ಮನೆಯಿಂದ ಯಾವುದೇ ಶಬ್ದ ಕೇಳಿಸದ ಹಿನ್ನೆಲೆಯಲ್ಲಿ ವೃದ್ಧೆಯೊಬ್ಬರು ಮನೆಗೆ ತೆರಳಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
READ THIS : ಸ್ನೇಹ ಬೆಳೆಸಲು ನಿರಾಕರಿಸಿದಕ್ಕೆ ಜಿಮ್ ಟ್ರೇನರ್ನಿಂದ ಮಾಡೆಲ್ ಕೊಲೆ!

ಮೃತೆ ಸಲ್ಮಾ ತಾಯಿ ಹೇಳಿದ್ದೇನು?
ಕೊಲೆಯಾದ ಸಲ್ಮಾ ಮನೆಯವರು ಗರಗ ಗ್ರಾಮಕ್ಕೆ ಬರುತ್ತಿದ್ದಂತೆಯೇ ಎರಡೂ ಕುಟುಂಬಗಳ ಮಧ್ಯೆ ಗಲಾಟೆ ಸಂಭವಿಸಿದೆ. ಎರಡೂ ಕುಟುಂಬದವರು ಪರಸ್ಪರ ಹೊಡೆದಾಟಕ್ಕೆ ಮುಂದಾಗಿದ್ದಾರೆ.
ಅತ್ತೆ-ಮಾವನ ಕಾಟದಿಂದ ತಮ್ಮ ಮಗಳು ಬಲಿಯಾಗಿದ್ದಾಳೆ ಅಳಿಯನಿಂದ ಯಾವುದೇ ಕಾಟ ಇರಲಿಲ್ಲ. ಕೂಲಿ ಕೆಲಸ ಮಾಡುತ್ತಿದ್ದ ಅಳಿಯನಿಗೆ ತಾವೇ ಸಹಾಯ ಮಾಡುತ್ತಿದ್ದೆವು. ತಮ್ಮ ಮಗಳು ಸಣ್ಣವಳಾಗಿದ್ದು, ಆಕೆಯಲ್ಲಿ ಚುರುಕುತನ ಇರಲಿಲ್ಲ ಎಂದು ಸಲ್ಮಾ ತಾಯಿ ಆರೋಪಿಸಿದ್ದಾರೆ.
Dharwad – ಗರಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ
ಘಟನೆ ನಡೆದ ತಕ್ಷಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಧಾರವಾಡ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಘಟನೆಗೆ ನಿಖರ ಕಾರಣವೇನು ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ. ಗರಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

MUST WATCH : TOXIC ಸಿನಿಮಾ ಬಗ್ಗೆ ಹೊಸ ಕಿರಿಕ್ – COURT ಆದೇಶಕ್ಕೆ ತುಮಕೂರಲ್ಲಿ ವಿರೋಧ.!



