Accident : ಬೈಕ್ಗಳ ಮುಖಾಮುಖಿ ಡಿಕ್ಕಿ – ಬೈಕ್ ಸವಾರ ಸಾವು

ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಅರಸೀಕೆರೆ ತಾಲೂಕಿನಲ್ಲಿ ನಡೆದಿದೆ.
READ THIS : ಕಂಟೇನರ್ಗೆ ಕಾರು Accident – ನವವಿವಾಹಿತೆ ಸೇರಿ ಇಬ್ಬರು ಸಾವು..!
ಬೈಕ್ ಸವಾರ ಸಾವು!
ಶಂಕರನಳ್ಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗಂಗಾಧರ್ ನಾಯಕ್ ಮೃತ ದುರ್ದೈವಿ. ಅರಸೀಕೆರೆ–ಹುಳಿಯಾರ್ ರಸ್ತೆಯ ಎಚ್ಪಿ ಪೆಟ್ರೋಲ್ ಬಂಕ್ ಸಮೀಪ ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿತ್ತು. ಅಪಘಾತದಲ್ಲಿ ಗಂಗಾಧರ್ ನಾಯಕ್ ಅವರಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಬೈಕ್ ಸವಾರನಿಗೂ ಗಾಯ
ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗಂಗಾಧರ್ ನಾಯಕ್ ಮೃತಪಟ್ಟಿದ್ದಾರೆ. ಇನ್ನು ಅಪಘಾತದಲ್ಲಿ ಮತ್ತೊಂದು ಬೈಕ್ನಲ್ಲಿದ್ದ ಹಾಸನ ಮೂಲದ ಮುಬಾರಕ್ (19) ಅವರಿಗೂ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
MUST WATCH : ಪಕ್ಷಕ್ಕಾಗಿ ಎಲ್ಲದಕ್ಕೂ ಸಿದ್ದ ಎಂದ NAGENDRA – DKS ಹೇಳಿಕೆ ಕೊಡ್ತು ರಾಜೀನಾಮೆ ಸುಳಿವು





