
ಹಾಸನದಲ್ಲಿ ಚಿನ್ನಾಭರಣಕ್ಕಾಗಿ ವೃದ್ಧೆಯ ಭೀಕರ MURDER – ಪ್ಲಾಸ್ಟಿಕ್ ಚೀಲದಲ್ಲಿ ಶವ ಪತ್ತೆ!
ನಾಲೆಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿದ ಸ್ಥಿತಿಯಲ್ಲಿ ವೃದ್ಧೆಯೊಬ್ಬರ ಶವ ಪತ್ತೆಯಾಗಿದೆ. ಹೌದು.. ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಬೆಟ್ಟದಹಳ್ಳಿ ಗ್ರಾಮದ ಬಳಿಯ ನಾಲೆಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿದ ಸ್ಥಿತಿಯಲ್ಲಿ ವೃದ್ಧೆಯೊಬ್ಬರ ಶವ ಪತ್ತೆಯಾಗಿದ್ದು, ಸ್ಥಳೀಯವಾಗಿ ತೀವ್ರ ಆತಂಕ ಮೂಡಿಸಿದೆ. ಹಿರೀಹಳ್ಳಿಕೊಪ್ಪಲು ಗ್ರಾಮದ 67 ವರ್ಷದ ಲಕ್ಷ್ಮಮ್ಮ ಮೃತ ವೃದ್ದೆಯಾಗಿದ್ದಾರೆ.
ಆಗಿದ್ದೇನು..?
ಇನ್ನು ಲಕ್ಷ್ಮಮ್ಮ ತಮ್ಮ ಪತಿ ಅಣ್ಣೇಗೌಡ ಅವರೊಂದಿಗೆ ವಾಸವಾಗಿದ್ರು. ಅಕ್ಟೋಬರ್ 3ರಂದು ವಿಜಿ ಕೊಪ್ಪಲಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಲಕ್ಷ್ಮಮ್ಮ ಬಳಿಕ ಮನೆಗೆ ವಾಪಸ್ ಬಂದಿರಲಿಲ್ಲ. ಕುಟುಂಬಸ್ಥರು ಸಂಬಂಧಿಕರು ಹುಡುಕಾಟ ನಡೆಸಿದ್ರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ.
READ THIS : ಜಿಮ್ ಟ್ರೈನರ್ ನಿಗೂಢ ಸಾವು – ಸ್ನೇಹಿತರೇ ಹಲ್ಲೆಗೈದು ಕೊಲೆ ಮಾಡಿದ್ರಾ.?

ಪ್ಲಾಸ್ಟಿಕ್ ಚೀಲದಲ್ಲಿತ್ತು ಶವ!
ಅಕ್ಟೋಬರ್ 6ರಂದು ಪತ್ನಿ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಲು ಪತಿ ಅಣ್ಣೇಗೌಡ ಪೊಲೀಸ್ ಠಾಣೆಗೆ ಆಗಮಿಸಿದ್ರು. ಬಳಿಕ ಪೊಲೀಸರು ಹಾಗೂ ಸ್ಥಳೀಯರು ಹುಡುಕಾಟ ನಡೆಸಿದ ವೇಳೆ ಬೆಟ್ಟದಹಳ್ಳಿ ಗ್ರಾಮದ ಬಳಿಯ ನಾಲೆಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿದ್ದ ಲಕ್ಷ್ಮಮ್ಮ ಅವರ ಶವ ಪತ್ತೆಯಾಗಿದೆ.
MURDER ಗೆ ನಿಖರ ಕಾರಣವೇನು?
ಲಕ್ಷ್ಮಮ್ಮ ಅವರ ಸಾವಿನ ಹಿಂದೆ ಚಿನ್ನಾಭರಣ ದೋಚುವ ಉದ್ದೇಶ ಇರಬಹುದಾ ಅನ್ನೋ ಶಂಕೆ ವ್ಯಕ್ತವಾಗಿದೆ. ದುಷ್ಕರ್ಮಿಗಳು ಕೊಲೆ ಮಾಡಿ ಬಳಿಕ ಶವವನ್ನು ಚೀಲದಲ್ಲಿ ಕಟ್ಟಿ ನಾಲೆಗೆ ಎಸೆದಿರಬಹುದು ಎಂಬ ಅನುಮಾನವೂ ವ್ಯಕ್ತವಾಗಿದೆ. ಆದ್ರೆ MURDER ಗೆ ನಿಖರ ಕಾರಣ ಏನು..? ಯಾರು ಈ ಕೃತ್ಯ ಎಸಗಿದ್ದಾರೆ..? ಅನ್ನೋದು ಪೊಲೀಸ್ ತನಿಖೆಯಿಂದಷ್ಟೇ ತಿಳಿಯಬೇಕಿದೆ.

MURDER – SP ಭೇಟಿ, ಪರಿಶೀಲನೆ
ಘಟನಾ ಸ್ಥಳಕ್ಕೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆ ಹಾಗೂ ಕೊಲೆಯ ಹಿಂದಿನ ಕಾರಣ ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
MUST WATCH : ನಾನೊಂತರ ರಾಷ್ಟ್ರಪತಿ ಇದ್ದ ಹಾಗೆ ರೈತರ ಪರ ಹೆಬ್ಬಾಳ್ಕರ್ ಬ್ಯಾಟಿಂಗ್




