
ವಾಟ್ಸಪ್ ಸ್ಟೇಟಸ್ ಹಾಕಿ ಹೆಚ್ಡಿಕೆಗೆ ಟಾಂಗ್ ಕೊಟ್ರಾ ಹಾಸನ DC ಲತಾಕುಮಾರಿ?
ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರ ವಾಟ್ಸಪ್ ಸ್ಟೇಟಸ್ ಇದೀಗ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಹೌದು.. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಜಿಲ್ಲಾಧಿಕಾರಿ ವಿರುದ್ಧ ಕೆಪಿಎಸ್ಸಿ ಅಕ್ರಮದ ಆರೋಪ ಮಾಡಿದ ಬೆನ್ನಲ್ಲೇ, ಲತಾಕುಮಾರಿ ತಮ್ಮ ವಾಟ್ಸಪ್ ಸ್ಟೇಟಸ್ನಲ್ಲಿ ಸತ್ಯಮೇವ ಜಯತೇ ಎಂಬ ಸಂದೇಶ ಹಂಚಿಕೊಂಡಿದ್ದು, HDK ಆರೋಪಕ್ಕೆ ಪರೋಕ್ಷ ತಿರುಗೇಟು ಕೊಟ್ರಾ ಎಂಬ ಚರಚೆ ಶುರುವಾಗಿದೆ.
ಸುಳ್ಳಿನಿಂದ ನನ್ನನ್ನು ಕುಗ್ಗಿಸಲು ಸಾಧ್ಯವಿಲ್ಲ
ನೀವು ನನ್ನ ಮೇಲೆ ಸುಳ್ಳಿನ ದಾಳಿ ಮಾಡಬಹುದು. ಆದರೆ ನೀವು ನನ್ನನ್ನು ಸುಳ್ಳಿನಿಂದ ಕುಗ್ಗಿಸಲು ಸಾಧ್ಯವಿಲ್ಲ. ಸುಳ್ಳು ದಾಳಿ ಮಾಡಿದ್ರೆ ಸತ್ಯ ರಕ್ಷಣೆ ಮಾಡುತ್ತೆ ಎಂದು ತಮ್ಮ ವೈಯುಕ್ತಿಕ ನಂಬರ್ನ ವಾಟ್ಸಪ್ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದಾರೆ.
READ THIS : ಹಾಸನಾಂಬ ಉತ್ಸವದಲ್ಲಿ ಕೆಂಡ ಹಾಯ್ದು ಗಮನ ಸೆಳೆದ DC

ಡಿಸಿ ವಿರುದ್ಧ ಹೆಚ್ಡಿಕೆ ಆರೋಪದ ಬೆನ್ನಲ್ಲೇ ಸ್ಟೇಟಸ್
ಇನ್ನು ನಿನ್ನೆಯಷ್ಟೇ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕೆಪಿಎಸ್ಸಿ ಅಕ್ರಮಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಲತಾಕುಮಾರಿ ವಿರುದ್ಧ ಆರೋಪ ಮಾಡಿದ್ರು. ಈ ಬೆಳವಣಿಗೆಯ ಬೆನ್ನಲ್ಲೇ ಜಿಲ್ಲಾಧಿಕಾರಿಯ ವಾಟ್ಸಪ್ ಸ್ಟೇಟಸ್ ಹಾಕಿರುವುದು ಕುತೂಹಲ ಮೂಡಿಸಿದ್ದು, ತಮ್ಮ ವಿರುದ್ಧದ ಆರೋಪಗಳಿಗೆ ಪ್ರತಿಕ್ರಿಯೆಯಾಗಿ ಈ ಸಂದೇಶ ಹಾಕಿದ್ದಾರಾ ಎಂಬ ಚರ್ಚೆ ನಡೆಯುತ್ತಿದೆ.
HDK ಗೆ ಟಾಂಗ್ ಕೊಟ್ರಾ DC
ಒಟ್ಟಿನಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಆರೋಪದ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರ ವಾಟ್ಸಪ್ ಸ್ಟೇಟಸ್ ಚರ್ಚೆಗೆ ಗ್ರಾಸವಾಗಿದೆ. ಸತ್ಯಮೇವ ಜಯತೇ ಎಂಬ ಸಂದೇಶದ ಮೂಲಕ ತಮ್ಮ ವಿರುದ್ಧದ ಆರೋಪಗಳಿಗೆ ಉತ್ತರ ನೀಡಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.

MUST WATCH : 20 ವರ್ಷದಿಂದ ಕಚೇರಿಗೆ ಅಲೆದಾಟ ದಾಖಲೆ ಕೊಟ್ರೂ ಜಮೀನಿನ ಹಕ್ಕು ಸಿಗ್ತಿಲ್ಲ




