BBK 13 : ದೊಡ್ಮನೆಗೆ ಎಂಟ್ರಿ ಕೊಟ್ಟ ಹೊಸ ಸ್ಪರ್ಧಿ

ಬಿಗ್ಬಾಸ್ ಕನ್ನಡ ಸೀಸನ್ 13ರಲ್ಲಿ ಒಂದಲ್ಲ ಒಂದು ಟ್ವಿಸ್ಟ್ಗಳು ಎದುರಾಗುತ್ತಿವೆ. ಈ ವಾರ ಸ್ಪರ್ಧಿಗಳ ನಡುವಿನ ಜಗಳ, ವಾಗ್ವಾದಗಳಿಂದ ಸುದ್ದಿಯಾಗಿದ್ದ ದೊಡ್ಮನೆಗೆ ಇದೀಗ ಹೊಸ ಸ್ಪರ್ಧಿಯ ಆಗಮನವಾಗಿದೆ. ಬಿಗ್ಬಾಸ್ ಅಗ್ನಿಪರೀಕ್ಷೆಯಲ್ಲಿ ಭಾಗವಹಿಸಿ ಗಮನ ಸೆಳೆದಿದ್ದ 20 ವರ್ಷದ ಲಾವಣ್ಯ ಕುಮಾರಿ ಇದೀಗ ಬಿಗ್ಬಾಸ್ ಮನೆಯೊಳಗೆ ಪ್ರವೇಶಿಸುತ್ತಿದ್ದಾರೆ.
ದೊಡ್ಮನೆಗೆ ಎಂಟ್ರಿ ಕೊಟ್ಟ ಹೊಸ ಸ್ಪರ್ಧಿ
ಹೌದು.. ಕಿಚ್ಚ ಸುದೀಪ್ ನಡೆಸಿಕೊಡುವ ಸೂಪರ್ ಸಂಡೇ ವಿತ್ ಬಾದ್ಷಾ ಸುದೀಪ ಎಪಿಸೋಡ್ನಲ್ಲಿ ಹೊಸ ಸ್ಪರ್ಧಿಯ ಎಂಟ್ರಿಯಾಗಿದೆ. ಬಿಗ್ಬಾಸ್ ಅಗ್ನಿಪರೀಕ್ಷೆಯಲ್ಲಿ ಭಾಗವಹಿಸಿದ್ದ ಲಾವಣ್ಯ ಕುಮಾರಿ ತಮ್ಮ ವಿಭಿನ್ನ ವ್ಯಕ್ತಿತ್ವದಿಂದ ಪ್ರೇಕ್ಷಕರ ಗಮನ ಸೆಳೆದಿದ್ದರು. ಇದೀಗ ಅದೇ ಲಾವಣ್ಯ ಬಿಗ್ಬಾಸ್ ಮುಖ್ಯ ಮನೆಯೊಳಗೆ ಪ್ರವೇಶಿಸುತ್ತಿರುವುದು ಕುತೂಹಲ ಮೂಡಿಸಿದೆ.
READ THIS : ದೊಡ್ಮನೆಯಲ್ಲಿ 2ನೇ ಬಾರಿ ಜೈಲಿಗೆ ಹೋದ ಮಾಡ್ರನ್ ಮಹಾಕವಿ ಮಂಜ!

ಸ್ಪರ್ಧಿಗಳ ವರ್ತನೆ ಕುರಿತು ಅಸಮಾಧಾನ!
ಇನ್ನು ಈ ವಾರ ಬಿಗ್ಬಾಸ್ ಮನೆಯಲ್ಲಿ ನಡೆದ ಅಹಿತಕರ ಘಟನೆಗಳು ಹಾಗೂ ಸ್ಪರ್ಧಿಗಳ ವರ್ತನೆ ಕುರಿತು ಶನಿವಾರದ ವೀಕೆಂಡ್ ಎಪಿಸೋಡ್ನಲ್ಲಿ ಕಿಚ್ಚ ಸುದೀಪ್ ಅಸಮಾಧಾನ ವ್ಯಕ್ತಪಡಿಸಿದ್ರು. ಸ್ಪರ್ಧಿಗಳಿಗೆ ಬುದ್ಧಿವಾದ ಹೇಳಿ, ಆಟದ ಜೊತೆಗೆ ಶಿಸ್ತು ಹಾಗೂ ಪರಸ್ಪರ ಗೌರವವೂ ಮುಖ್ಯ ಅನ್ನೋ ಸಂದೇಶ ನೀಡಿದ್ರು. ಇದರ ಬೆನ್ನಲ್ಲೇ ಭಾನುವಾರದ ಎಪಿಸೋಡ್ನಲ್ಲಿ ಹೊಸ ಸ್ಪರ್ಧಿಯ ಆಗಮನವಾಗಿದೆ.
BBK 13 – ಯಾವ ರೀತಿಯ ಬದಲಾವಣೆ ಆಗಲಿದೆ
ಇನ್ನು ಕೇವಲ 20 ವರ್ಷದ ಲಾವಣ್ಯ ಕುಮಾರಿ ಬಿಗ್ಬಾಸ್ ಮನೆಯೊಳಗೆ ಕಾಲಿಡುತ್ತಿರುವುದು ಉಳಿದ ಸ್ಪರ್ಧಿಗಳಿಗೂ ಹೊಸ ಸವಾಲಾಗಬಹುದು. ಈಗಾಗಲೇ ಮನೆಯಲ್ಲಿ ಹಲವು ಗುಂಪುಗಳು ಹಾಗೂ ಸ್ಪರ್ಧಿಗಳ ನಡುವೆ ಭಿನ್ನಾಭಿಪ್ರಾಯಗಳು ಕಂಡುಬರುತ್ತಿದ್ದು, ಲಾವಣ್ಯ ಆಗಮನದಿಂದ ಮನೆಯ ವಾತಾವರಣದಲ್ಲಿ ಯಾವ ರೀತಿಯ ಬದಲಾವಣೆ ಆಗಲಿದೆ ಅನ್ನೋದನ್ನು ಕಾದುನೋಡಬೇಕಿದೆ.

MUST WATCH : ಇನ್ಮೇಲೆ DEAD BODY ಮೇಲೆ BILL ವಸೂಲಿ ಬಂದ್ – ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರದ BIG WARNING




