
BBK 13 : ʻಬಿಗ್ ಬಾಸ್ʼ ಮನೆಯಿಂದ ನಟಿ ಸಂಗೀತಾ ಭಟ್ ಆಸ್ಪತ್ರೆಗೆ ಶಿಫ್ಟ್; ಟಾಸ್ಕ್ ವೇಳೆ ತೀವ್ರ ಉಸಿರಾಟದ ಸಮಸ್ಯೆ, ವಿಡಿಯೋ ವೈರಲ್!
ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಮತ್ತೊಬ್ಬ ಸ್ಪರ್ಧಿಯ ಆರೋಗ್ಯದಲ್ಲಿ ಏರುಪೇರಾಗಿದೆ. ಹೌದು.. ನಟಿ ಸಂಗೀತಾ ಭಟ್ ಅವರಿಗೆ ಏಕಾಏಕಿ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಪ್ರಾಥಮಿಕ ಚಿಕಿತ್ಸೆ ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.
ತೀವ್ರ ಉಸಿರಾಟದ ಸಮಸ್ಯೆ
ಬಿಗ್ ಬಾಸ್ ಮನೆಯಲ್ಲಿ ‘ಗಂಧರ್ವರು ವರ್ಸಸ್ ರಾಕ್ಷಸರು’ ಟಾಸ್ಕ್ ನಡೆಯುತ್ತಿದ್ದ ವೇಳೆ ಸಂಗೀತಾ ಭಟ್ ಅವರಿಗೆ ವೀಝಿಂಗ್ ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ ಎನ್ನಲಾಗಿದೆ. ಸಂಗೀತಾ ಅವರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದಂತೆ ಸಹಸ್ಪರ್ಧಿಗಳು ಆತಂಕಗೊಂಡಿದ್ದು, ಅವರನ್ನು ಕನ್ಫೆಶನ್ ರೂಮ್ಗೆ ಕರೆದೊಯ್ದಿದ್ದಾರೆ.
READ THIS : ಯಶಸ್ ವಿರುದ್ಧ ಮಿತಿಮೀರಿದ ಮಾಡ್ರನ್ ಮಹಾಕವಿ ಮಂಜು ಮಾತು!

ಸೋಶಿಯಲ್ ಮಿಡಿಯಾದಲ್ಲಿ ವೈರಲ್!
ಸಂಗೀತಾ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ವೈದ್ಯಕೀಯ ಸಲಹೆಯಂತೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಹಸ್ಪರ್ಧಿಗಳು ಸಂಗೀತಾ ಅವರನ್ನು ಕರೆದೊಯ್ಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿದ್ದು, ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.
BBK 13 – ಸಂಗೀತಾ ಭಟ್ ಆರೋಗ್ಯ ಹೇಗಿದೆ?
“ಸಂಗೀತಾ ಭಟ್ ಆರೋಗ್ಯ ಹೇಗಿದೆ? ಅವರಿಗೆ ಏನಾಗಿದೆ? ಚಿಕಿತ್ಸೆ ಮುಗಿಸಿ ಮತ್ತೆ ದೊಡ್ಮನೆಗೆ ಮರಳುತ್ತಾರಾ?” ಎಂಬ ಪ್ರಶ್ನೆಗಳು ವೀಕ್ಷಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.

ಇನ್ನು ಈ ಸೀಸನ್ನಲ್ಲಿ ಸ್ಪರ್ಧಿಗಳ ಆರೋಗ್ಯ ಸಮಸ್ಯೆ ಚರ್ಚೆಗೆ ಕಾರಣವಾಗುತ್ತಿರುವುದು ಇದೇ ಮೊದಲಲ್ಲ. ಎರಡನೇ ವಾರದಲ್ಲಿ ನಿರ್ದೇಶಕ ಓಂ ಪ್ರಕಾಶ್ ರಾವ್ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಬಳಿಕ ತಮ್ಮ ಆರೋಗ್ಯದ ಕಾರಣ ನೀಡಿ ಬಿಗ್ ಬಾಸ್ ಮನೆಯಿಂದ ಸ್ವಯಂಪ್ರೇರಿತರಾಗಿ ಹೊರನಡೆದಿದ್ದರು.
MUST WATCH : ವಿಭೂತಿ–ನಾಮ ಹಾಕೊಂಡ್ರೆ ಹಿಂದೂ ಆಗಲ್ಲ ಡಿಕೆಶಿಗೆ ಅಶೋಕ್ ಏಕವಚನದಲ್ಲೇ ವಾಗ್ದಾಳಿ





