Vijayapura | ನಿವೃತ್ತ ಶಿಕ್ಷಕನ ಬರ್ಬರ Murder ಕೇಸ್ಗೆ ಟ್ವಿಸ್ಟ್ – ಆಸ್ತಿ, ಪ್ರಿಯಕರನಿಗಾಗಿ ತಂದೆಯನ್ನೇ ಕೊಲೆಗೈದ ಮಗಳು

ವಿಜಯಪುರದ ಭೀಮಾತೀರದಲ್ಲಿ ನಡೆದಿರೋ ಈ ಘಟನೆ ಕೇಳಿದ್ರೆ ಎಂಥವರು ಬೆಚ್ಚಿಬೀಳೋದು ಗ್ಯಾರಂಟಿ.
ಹೌದು. ಆಸ್ತಿ ಆಸೆಗೆ ಜೊತೆಗೆ ತನ್ನ ಅಕ್ರಮ ಸಂಬಂಧಕ್ಕೆ ತಂದೆ ಅಡ್ಡಿಯಾಗ್ತಾನೆ ಅಂತ, ಪ್ರಿಯಕರನ ಜೊತೆ ಸೇರಿ ಹೆತ್ತ ಮಗಳೇ ತಂದೆಯನ್ನೇ ಕೊಲೆಗೈದು ಬಳಿಕ ಮೃತದೇಹವನ್ನ ರಸ್ತೆ ಬದಿಗೆ ಬಿಸಾಕಿರೋ ಆರೋಪ ಕೇಳಿಬಂದಿದೆ.
ಕೊಲೆಯ ಹಿಂದೆ ಪುತ್ರಿ ಪ್ರಿಯಾಂಕಾಳ ಕೈವಾಡ
Vijayapura ಜಿಲ್ಲೆಯ ಇಂಡಿ ತಾಲೂಕಿನ ಚೌಡಿಹಾಳ ರಸ್ತೆ ಬಳಿಯ ಪೂಜಾರಿ ವಸ್ತಿ ತೋಟದ ಸಮೀಪ ಎರಡು ದಿನಗಳ ಹಿಂದೆ ನಿವೃತ್ತ ಶಿಕ್ಷಕ ಸಿದ್ದಪ್ಪ ಅಂಜುಟಗಿ ಅವರ ಮೃತದೇಹ ಪತ್ತೆಯಾಗಿತ್ತು.
62 ವರ್ಷದ ಸಿದ್ದಪ್ಪ ಅವರನ್ನ ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿರಬಹುದು ಎಂದು ಆರಂಭದಲ್ಲಿ ಪೊಲೀಸರು ಶಂಕಿಸಿದ್ದರು.
ಆದ್ರೆ ಸಿದ್ದಪ್ಪ ಅವರ ಕಿರಿಯ ಮಗಳು ನಿಖಿತಾ ನೀಡಿದ್ದ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರಿಗೆ, ಕೊಲೆಯ ಹಿಂದೆ ಮೃತರ ಇನ್ನೋರ್ವ ಪುತ್ರಿ ಪ್ರಿಯಾಂಕಾಳ ಕೈವಾಡ ಇರೋದು ಬೆಳಕಿಗೆ ಬಂದಿದೆ.
READ THIS : ಶೀಲ ಶಂಕಿಸಿ ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ.!

ಆಟೋ ಚಾಲಕ ಸಂತೋಷ ಸಿಂಧೆ ಜೊತೆ ಸಂಬಂಧ
ಸಿದ್ದಪ್ಪ ಎರಡು ವರ್ಷಗಳ ಹಿಂದೆ ನಿವೃತ್ತರಾಗಿದ್ದು, ನಿವೃತ್ತಿ ಹಣದ ಜೊತೆಗೆ ಊರಿನಲ್ಲಿ ಆಸ್ತಿಯನ್ನೂ ಹೊಂದಿದ್ದರು.
ಇದೇ ಆಸ್ತಿ ವಿಚಾರದಲ್ಲಿ ತಂದೆ-ಮಗಳ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತಂತೆ, ಮತ್ತೊಂದೆಡೆ ಪ್ರಿಯಾಂಕಾಳ ಪತಿ ಕೊರೋನಾ ಸಮಯದಲ್ಲಿ ಮೃತಪಟ್ಟ ಬಳಿಕ, ಆಟೋ ಚಾಲಕ ಸಂತೋಷ ಸಿಂಧೆ ಜೊತೆ ಆಕೆಗೆ ಸಂಬಂಧ ಬೆಳೆದಿತ್ತಂತೆ.
ಈ ಸಂಬಂಧಕ್ಕೂ ಸಿದ್ದಪ್ಪ ವಿರೋಧ ವ್ಯಕ್ತಪಡಿಸಿದ್ದರು. ಜೊತೆಗೆ ಆಸ್ತಿಯಲ್ಲಿ ಪಾಲು ನೀಡುವುದಿಲ್ಲ ಎಂದು ಹೇಳಿದ್ದೇ ಪ್ರಿಯಾಂಕಾಳ ಆಕ್ರೋಶಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.
ಆಸ್ತಿಗಾಗಿ ಹೆತ್ತ ತಂದೆಯ ಬರ್ಬರ ಮರ್ಡರ್
ಇನ್ನು ಆಗಸ್ಟ್ 15ರಂದು ಇದೇ ವಿಚಾರವಾಗಿ ತಂದೆ-ಮಗಳ ನಡುವೆ ಮತ್ತೆ ಗಲಾಟೆ ನಡೆದಿದ್ದು, ಗಲಾಟೆ ವಿಕೋಪಕ್ಕೆ ಹೋಗುತ್ತಿದ್ದಂತೆ ಪ್ರಿಯಾಂಕಾ ತನ್ನ ಪ್ರಿಯಕರ ಸಂತೋಷನಿಗೆ ಕರೆ ಮಾಡಿ ಮನೆಗೆ ಬರುವಂತೆ ಹೇಳಿದ್ದಾಳೆ.
ಬಳಿಕ ಸಂತೋಷ ತನ್ನ ಸ್ನೇಹಿತ ಗುರುರಾಜನ ಜೊತೆ ಪ್ರಿಯಾಂಕಾ ಮನೆಗೆ ಬಂದಿದ್ದು, ಮೂವರು ಸೇರಿ ಸಿದ್ದಪ್ಪನನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಅ
ಷ್ಟಕ್ಕೇ ನಿಲ್ಲದ ಆರೋಪಿಗಳು, ಖಾರ ಕುಟ್ಟಲು ಬಳಸುವ ದೊಡ್ಡ ಕಲ್ಲಿನಿಂದ ಸಿದ್ದಪ್ಪನ ತಲೆಗೆ ಹೊಡೆದು ಬಳಿಕ ಮೃತದೇಹವನ್ನು ರಸ್ತೆ ಬದಿಗೆ ತಂದು ಎಸೆದು ಪರಾರಿಯಾಗಿದ್ದಾರೆ.

ಭೀಮಾತೀರದಲ್ಲಿ ಸಂಚಲನ
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಯಾಂಕಾ ಹಾಗೂ ಸಂತೋಷ ಸಿಂಧೆಯನ್ನು ಪೊಲೀಸರು ಬಂಧಿಸಿದ್ದು, ಮತ್ತೋರ್ವ ಆರೋಪಿ ಗುರುರಾಜ ಬಿರಾದಾರ್ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಆದ್ರೆ ತಂದೆಯ ಕೊಲೆ ಪ್ರಕರಣದಲ್ಲಿ ಮಗಳೇ ಪ್ರಮುಖ ಆರೋಪಿಯಾಗಿರೋದು ಇದೀಗ ಭೀಮಾತೀರದಲ್ಲಿ ಸಂಚಲನ ಮೂಡಿಸಿದೆ.
MUST WATCH : PILLARಬಿದ್ದು ಬಾಲಕ ದುರ್ಮರ* ಕೇಸ್ – ಘಟನಾ ಸ್ಥಳಕ್ಕೆ ಮಕ್ಕಳ ರಕ್ಷಣಾಘಟಕ ಭೇಟಿ





