ಬೆಂಗಳೂರಲ್ಲಿ ಪತಿ, ಮಗು Murder ಕೇಸ್ ಗೆ ಬಿಗ್ ಟ್ವಿಸ್ಟ್ : ಪೊಲೀಸರ ಮುಂದೆ ಅಸಲಿ ಸತ್ಯ ಬಾಯಿಬಿಟ್ಟ ಪಾಪಿ ಪತ್ನಿ.!

ಚಿಕ್ಕಬಾಣಾವರದಲ್ಲಿ ನಡೆದ ಗಂಡ ಹಾಗೂ ಮಗುವಿನ ಡಬಲ್ ಮರ್ಡರ್ ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ಪ್ರಕರಣದ ವಿಚಾರಣೆ ವೇಳೆ ಮೃತ ಅಭಿನಂದನ್ ಅವರ ಪತ್ನಿ ಹರಿಣಿ ಪೊಲೀಸರ ಮುಂದೆ ಸತ್ಯ ಬಾಯಿಬಿಟ್ಟಿದ್ದಾಳೆ. ಪ್ರಿಯಕರನ ವಿನಯ್ ಜೊತೆ ಸೇರಿಕೊಂಡು ಪತಿ ಹಾಗೂ ಮಗನನ್ನು Murder ಮಾಡಿರುವುದಾಗಿ ಆಕೆ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾಳೆ.
ಪೊಲೀಸರ ಮುಂದೆ ಅಸಲಿ ಸತ್ಯ ಬಾಯಿಬಿಟ್ಟ ಪಾಪಿ ಪತ್ನಿ.!
ಪೊಲೀಸರ ತನಿಖೆಯ ಪ್ರಕಾರ, ಘಟನೆ ನಡೆದ ರಾತ್ರಿ ಸುಮಾರು 11 ಗಂಟೆ ವೇಳೆಗೆ ಹರಿಣಿ ತನ್ನ ಪ್ರಿಯಕರ ವಿನಯ್ನನ್ನು ಮನೆಗೆ ಕರೆಸಿಕೊಂಡಿದ್ದಳು. ಬಳಿಕ ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡಲಾಗಿತ್ತು. ಇಬ್ಬರೂ ಸೇರಿ ಅಭಿನಂದನ್ ಮೇಲೆ ದಾಳಿ ನಡೆಸಿದ್ದು, ಮನೆಯಲ್ಲಿದ್ದ ಸೌಟ್ನಿಂದ ತಲೆಗೆ ಹೊಡೆದು ಹತ್ಯೆ ಮಾಡಲಾಗಿದೆ ಎಂದು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾಳೆ.
READ THIS : BIDADI ಕದನಕ್ಕೆ JDS ವಿಧಾನಸೌಧ ಚಲೋ – ಮುತ್ತಿಗೆ ಹಾಕಲು ಬಂದ ಸಾವಿರಾರು ಜನರು

ಈ ವೇಳೆ ಅಭಿನಂದನ್ ಅವರ ಪುತ್ರ ಯದುವೀರ್ ಘಟನೆಯನ್ನು ನೋಡಿದ್ದ ಎನ್ನಲಾಗಿದ್ದು, ಆತ ಮುಂದೆ ಸಾಕ್ಷಿಯಾಗಬಹುದು ಎಂಬ ಕಾರಣಕ್ಕೆ ಮಗುವನ್ನೂ ಹತ್ಯೆ ಮಾಡಲಾಗಿದೆ ಎಂದು ಹರಿಣಿ ಪೊಲೀಸರಿಗೆ ತಿಳಿಸಿದ್ದಾಳೆ. ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಕೊಲೆ ಬಳಿಕ ಸಾಕ್ಷ್ಯ ನಾಶಪಡಿಸಲು ಹರಿಣಿ ಪ್ಲಾನ್
ಕೊಲೆ ಬಳಿಕ ಸಾಕ್ಷ್ಯ ನಾಶಪಡಿಸಲು ಹರಿಣಿ ಪ್ರಯತ್ನಿಸಿದ್ದಳು ಎನ್ನಲಾಗಿದೆ. ಮನೆಯಲ್ಲಿದ್ದ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಿ, ಅಭಿನಂದನ್ ಅವರ ರಕ್ತದ ಕಲೆಗಳಿದ್ದ ಬಟ್ಟೆಗಳನ್ನು ಬದಲಾಯಿಸಿ ರಾತ್ರೋರಾತ್ರಿ ತೊಳೆದಿದ್ದಾಳೆ ಎಂದು ಪೊಲೀಸರ ವಿಚಾರಣೆಯಲ್ಲಿ ಮಾಹಿತಿ ಹೊರಬಿದ್ದಿದೆ. ನಂತರ ಮಗುವನ್ನು ಮೇಲೆ ಮಲಗಿಸಿ ಉಸಿರುಗಟ್ಟಿಸಿ ಸಾಯಿಸಿದ್ದಾನೆ ಎಂಬಂತೆ ಬಿಂಬಿಸಲು ಯತ್ನಿಸಿರುವುದಾಗಿ ಹರಿಣಿ ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾಳೆ.

ಪ್ರಿಯತಮ ಪರಾರಿ!
ತಮ್ಮ ಪ್ಲಾನ್ನಂತೆ ಕೊಲೆ ನಡೆಸಿದ ಬಳಿಕ ಪ್ರಿಯತಮ ವಿನಯ್ ಅಲ್ಲಿಂದ ಪರಾರಿಯಾಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಲಭ್ಯವಿರುವ ಸಾಕ್ಷ್ಯಗಳು ಹಾಗೂ ಆರೋಪಿಗಳ ಹೇಳಿಕೆಗಳನ್ನು ಪರಿಶೀಲಿಸುತ್ತಿದ್ದು, ತನಿಖೆ ಮುಂದುವರಿದಿದೆ.
MUST WATCH : ಮನೆಯಲ್ಲೇ ಹೆಣವಾದ್ರು ತಂದೆ-ಮಗ : ಕೊಲೆ ಶಂಕೆ!




