
Yadgiri : ಪತ್ನಿ ಮೇಲಿನ ಕೋಪಕ್ಕೆ ಮಕ್ಕಳನ್ನ ಕಾಲುವೆಗೆ ಎಸೆದ ಪತಿ

ಹೆತ್ತ ಮಕ್ಕಳನ್ನೇ ತಂದೆಯೊಬ್ಬ ಕಾಲುವೆಗೆ ಎಸೆದಿರುವ ಆಘಾತಕಾರಿ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಗ್ರಾಮದಲ್ಲಿ ನಡೆದಿದೆ. ಕಕ್ಕಸಗೇರಾ ಗ್ರಾಮದ ನಿವಾಸಿ ಶಾಂತಪ್ಪ, ತನ್ನ ಪತ್ನಿ ಜೊತೆ ಆಸ್ತಿ ವಿಚಾರವಾಗಿ ಜಗಳ ಮಾಡಿಕೊಂಡಿದ್ದ ಎನ್ನಲಾಗಿದೆ.
READ THIS : ಗುಬ್ಬಿಯಲ್ಲಿ ನವಜಾತ ಶಿಶುವಿನ ಅರ್ಧಂಬರ್ಧ ಮೃತದೇಹ ಪತ್ತೆ!
“ಅಪ್ಪ ನನ್ನನ್ನು ಸಾಯಿಸಬೇಡ”
ಜಗಳದ ಬಳಿಕ ಕೋಪಗೊಂಡ ಶಾಂತಪ್ಪ, ತನ್ನ ಮೂವರು ಮಕ್ಕಳಾದ 9 ವರ್ಷದ ಸಾನ್ವಿ, 2 ವರ್ಷದ ಸೃಜನ್ ಹಾಗೂ ಸಂಜನಾಳನ್ನು ಬೈಕ್ನಲ್ಲಿ ಕರೆದೊಯ್ದಿದ್ದನಂತೆ. ಕಾಲುವೆ ಬಳಿ ತೆರಳಿದ ಬಳಿಕ ಶಾಂತಪ್ಪ, ಸಾನ್ವಿ ಹಾಗೂ ಸೃಜನ್ ಇಬ್ಬರನ್ನೂ ಕಾಲುವೆಗೆ ಎಸೆದಿದ್ದಾನೆ ಎಂದು ಶಂಕಿಸಲಾಗಿದೆ. ಈ ವೇಳೆ ಮಗಳು ಸಂಜನಾ ತಂದೆಯನ್ನು ಅಪ್ಪಿಕೊಂಡು, “ಅಪ್ಪ ನನ್ನನ್ನು ಸಾಯಿಸಬೇಡ” ಎಂದು ಕಣ್ಣೀರಿಟ್ಟಿದ್ದಾಳೆ.

ಬೈಕ್ನಲ್ಲಿ ಕರೆದೊಯ್ದು ಇಬ್ಬರನ್ನು ನಾಲೆಗೆ ಎಸೆದ ಪಾಪಿ ತಂದೆ!
ಮಗಳ ಅಳುವಿನಿಂದ ಕರಗಿದ ಶಾಂತಪ್ಪ, ಸಂಜನಾಳನ್ನು ಮಾತ್ರ ಬಿಟ್ಟುಬಿಟ್ಟಿದ್ದಾನೆ. ಬಳಿಕ ಮಕ್ಕಳನ್ನು ಕಾಲುವೆಗೆ ಎಸೆದಿರುವ ಬಗ್ಗೆ ಶಾಂತಪ್ಪನೇ ಪೊಲೀಸರ ಮುಂದೆ ಮಾಹಿತಿ ನೀಡಿದ್ದಾನೆ. ಮಾಹಿತಿ ತಿಳಿಯುತ್ತಿದ್ದಂತೆ ಗೋಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾಲುವೆಯಲ್ಲಿ ಮಕ್ಕಳಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಶಾಂತಪ್ಪನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
MUST WATCH : ನವಜಾತ ಶಿಶುವಿನ ಅರ್ಧಂಬರ್ಧ ಮೃ*ದೇಹ ಪತ್ತೆ – ಮೃ*ದೇಹ ಕಂಡು ಬೆಚ್ಚಿಬಿದ್ದ ಗ್ರಾಮಸ್ಥರು.!





