
KALBURGI | ಕತ್ತು ಹಿಸುಕಿ ಗಂಡನಿಂದಲೇ ಹೆಂಡತಿಯ ಕೊಲೆ
ಪತ್ನಿಯ ಶೀಲ ಶಂಕಿಸಿ ಪತಿಯೇ ಕತ್ತು ಹಿಸುಕಿ ಕೊಲೆ ಮಾಡಿರುವ ದಾರುಣ ಘಟನೆ ಕಲಬುರಗಿ ನಗರದ ಶರಣಶಿರಸಗಿ ಬಳಿ ನಡೆದಿದೆ. ಕೊಲೆಯಾದ ಮಹಿಳೆಯನ್ನು ರೇಣುಕಾ ಶಿಂಧೆ (38) ಎಂದು ಗುರುತಿಸಲಾಗಿದೆ. ರೇಣುಕಾ ಅವರು ಕೆಲ ವರ್ಷಗಳ ಹಿಂದೆ ಸಂಜಯ್ ಅವರನ್ನು ವಿವಾಹವಾಗಿದ್ದು, ಶರಣಸಿರಸಗಿ ಬಳಿ ಪತಿಯೊಂದಿಗೆ ವಾಸವಾಗಿದ್ರು.
READ THIS : ಆಸ್ತಿ ಆಸೆಗೆ ತಮ್ಮನನ್ನೇ ಚಾಕುವಿನಿಂದ ಇರಿದು ಹತ್ಯೆಗೈದ ಪಾಪಿ ಅಣ್ಣ!

ಕತ್ತು ಹಿಸುಕಿ ಗಂಡನಿಂದಲೇ ಕೊಲೆ!
ಪತ್ನಿ ಪರ ಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ಆಕೆಯ ಪತಿ ಸಂಜಯ್ ಅನುಮಾನ ಪಡುತ್ತಿದ್ದ.ಇದೇ ವಿಚಾರವಾಗಿ ದಂಪತಿ ನಡುವೆ ಹಲವು ಬಾರಿ ಜಗಳ ನಡೆದಿತ್ತು ಎನ್ನಲಾಗಿದೆ. ನಿನ್ನೆ ರಾತ್ರಿ ಕೂಡ ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಈ ವೇಳೆ ಸಂಜಯ್ ಅವರು ರೇಣುಕಾ ಅವರ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

KALBURGI – ಪ್ರಕರಣ ದಾಖಲು
ಘಟನೆಗೆ ಸಂಬಂಧಿಸಿದಂತೆ ಕಲಬುರಗಿ ನಗರದ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

MUST WATCH : ದೇಶ ಕಾಯೋ ಗಣಪನ ವಿಸರ್ಜನಾ ಸಂಭ್ರಮ – ತುಮಕೂರಿನಲ್ಲಿ ಹೇಗಿತ್ತು ಗೊತ್ತಾ ಮೆರವಣಿಗೆ.?




