Haveri : ಪೂಜೆಗೆ ನೀರು ತರಲು ಹೋದ ವ್ಯಕ್ತಿ ವರದಾ ನದಿಯಲ್ಲಿ ಮುಳುಗಿ ನಾಪತ್ತೆ!

ಶ್ರಾವಣ ಮಾಸದ ಅಮವಾಸ್ಯೆ ಹಿನ್ನೆಲೆಯಲ್ಲಿ ಬಸವೇಶ್ವರ ಪೂಜೆಗೆ ನೀರು ತರಲು ತೆರಳಿದ್ದ ವ್ಯಕ್ತಿಯೊಬ್ಬರು ವರದಾ ನದಿಯಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ Haveri ಜಿಲ್ಲೆಯ ಸವಣೂರು ತಾಲೂಕಿನ ಮೆಳಗಟ್ಟಿ ಗ್ರಾಮದ ಬಳಿ ನಡೆದಿದೆ. ಮೃತರನ್ನು ಸವಣೂರು ಪಟ್ಟಣದ ಹೊರಕೇರಿ ಓಣಿಯ ನಿವಾಸಿ ಬಸವರಾಜ್ ಪುಟ್ಟಪ್ಪ ಕೆಮ್ಮನಕೇರಿ (43) ಎಂದು ಗುರುತಿಸಲಾಗಿದೆ.
ಇದನ್ನು ಓದಿ : ಕೃಷಿ ಹೊಂಡದಲ್ಲಿ ಮುಳುಗಿ ಚಿಕ್ಕಪ್ಪ- ಮಗನ ದುರ್ಮರಣ..!!

ಆಗಿದ್ದೇನು?
ಬಸವರಾಜ್ ಸೇರಿದಂತೆ ಐವರು ಸವಣೂರಿನಿಂದ ಬಸವೇಶ್ವರ ಮೂರ್ತಿಯ ಪೂಜೆಗೆ ನೀರು ತರಲು ವರದಾ ನದಿಗೆ ತೆರಳಿದ್ದರು. ಈ ವೇಳೆ ಉಳಿದವರು ಮುಂದೆ ಸಾಗುತ್ತಿದ್ದಾಗ ಬಸವರಾಜ್ ಅವರು ನದಿಯಲ್ಲಿ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಪ್ರಕರಣ ದಾಖಲು
ಘಟನೆ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ಆರಂಭಿಸಿದ್ದಾರೆ. ನದಿಯಲ್ಲಿ ನಾಪತ್ತೆಯಾಗಿದ್ದ ಬಸವರಾಜ್ ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದ್ದು, ಘಟನೆಗೆ ಸಂಬಂಧಿಸಿದಂತೆ ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ನೋಡಿ : ತುಮಕೂರಿನಲ್ಲಿ ಜೋರಾದ JCBಗಳ ಘರ್ಜನೆ – ಪಾಲಿಕೆ ವಿರುದ್ಧ ಬೀದಿ ಬದಿ ವ್ಯಾಪಾರಿಗಳ ಆಕ್ರೋಶ




