Bengaluru : ರಾಜ್ಯದಲ್ಲಿ ಮತಪಟ್ಟಿಯಿಂದ 1 ಕೋಟಿ ಮತದಾರರಿಗೆ ಶಾಕ್..!

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಭಾಗವಾಗಿ, ಚುನಾವಣಾ ಆಯೋಗವು ಇದುವರೆಗೆ ಪ್ರಕಟಿಸಿರುವ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕರಡು ಮತದಾರರ ಪಟ್ಟಿಯಲ್ಲಿ 1,05,12,457 ಮತದಾರರ ಹೆಸರುಗಳನ್ನು ತಾತ್ಕಾಲಿಕವಾಗಿ ಕೈಬಿಟ್ಟಿದೆ.
ಮತದಾರರ ಹೆಸರು ಕರಡು ಪಟ್ಟಿಯಿಂದ ಕೈಬಿಟ್ಟ ಚುನಾವಣಾ ಆಯೋಗ:
ಚುನಾವಣಾ ಆಯೋಗದ ಪ್ರಕಾರ, ಈ ಹೆಸರುಗಳನ್ನು ಎಎಸ್ಡಿಡಿಓ (ASDDO) ವರ್ಗದಲ್ಲಿ ಗುರುತಿಸಲಾಗಿದೆ.
ಅಂದರೆ Absent (ಗೈರು), Shifted (ಸ್ಥಳಾಂತರ), Dead (ಮೃತ), Duplicate (ದ್ವಿಪ್ರತಿ) ಹಾಗೂ Other Reasons (ಇತರೆ ಕಾರಣಗಳು) ಆಧಾರದ ಮೇಲೆ ಹೆಸರುಗಳನ್ನು ಕರಡು ಪಟ್ಟಿಯಿಂದ ತೆಗೆದುಹಾಕಲಾಗಿದೆ.
ಆದರೆ, ಹೆಸರು ಕೈಬಿಟ್ಟಿರುವ ಮತದಾರರಿಗೆ ಆತಂಕಪಡುವ ಅಗತ್ಯವಿಲ್ಲ. ಕರಡು ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಹಾಗೂ ಅಗತ್ಯ ದಾಖಲೆಗಳನ್ನು ನೀಡಿ ಹೆಸರು ಮರು ಸೇರ್ಪಡೆ ಅಥವಾ ತಿದ್ದುಪಡಿ ಮಾಡಿಸಿಕೊಳ್ಳಲು ಚುನಾವಣಾ ಆಯೋಗ ಅವಕಾಶ ನೀಡಿದೆ.
ಇದನ್ನು ಓದಿ : SIR ಕರ್ತವ್ಯ ನಿರ್ವಹಣೆ ವೇಳೆ BLO ಹೃದಯಾಘಾತದಿಂದ ದಾರುಣ ಸಾವು

ಹರಿಯಾಣದಲ್ಲಿ ಒಟ್ಟು 33.83 ಲಕ್ಷ ಹೆಸರುಗಳನ್ನು ತೆಗೆಯಲಾಗಿದೆ
ಶುಕ್ರವಾರ ಆಂಧ್ರಪ್ರದೇಶ ಮತ್ತು ಹರಿಯಾಣದ ಕರಡು ಮತದಾರರ ಪಟ್ಟಿಗಳು ಪ್ರಕಟವಾಗಿದ್ದು, ಈ ಎರಡೂ ರಾಜ್ಯಗಳಲ್ಲಿ ಮಾತ್ರವೇ ದೊಡ್ಡ ಪ್ರಮಾಣದಲ್ಲಿ ಹೆಸರುಗಳು ಕೈಬಿಡಲಾಗಿದೆ.
- ಆಂಧ್ರಪ್ರದೇಶ: 44.89 ಲಕ್ಷ ಹೆಸರುಗಳು ಕೈಬಿಡಲಾಗಿದ್ದು, ಮತದಾರರ ಸಂಖ್ಯೆ 4.16 ಕೋಟಿಯಿಂದ 3.71 ಕೋಟಿಗೆ ಇಳಿದಿದೆ.
- ಹರಿಯಾಣ: 33.83 ಲಕ್ಷ ಹೆಸರುಗಳನ್ನು ಕರಡು ಪಟ್ಟಿಯಿಂದ ತೆಗೆದುಹಾಕಲಾಗಿದೆ.
ಇದಕ್ಕೂ ಮುನ್ನ ಒಡಿಶಾ, ಮಣಿಪುರ, ಮಿಜೋರಾಂ, ಸಿಕ್ಕಿಂ, ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ದಿಯು, ಉತ್ತರಾಖಂಡ, ಚಂಡೀಗಢ ಹಾಗೂ ಅರುಣಾಚಲ ಪ್ರದೇಶಗಳ ಕರಡು ಮತದಾರರ ಪಟ್ಟಿಗಳೂ ಪ್ರಕಟವಾಗಿವೆ.
1.13 ಕೋಟಿ ಹೆಸರುಗಳನ್ನು ಡಿಲೀಟ್
ಈವರೆಗೆ ಒಟ್ಟು ಹತ್ತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮತದಾರರ ಕರಡು ಪಟ್ಟಿಗಳನ್ನು ಪ್ರಕಟಿಸಲಾಗಿದೆ.
ಇಲ್ಲಿನ 10.89 ಕೋಟಿ ಮತದಾರರ ಪೈಕಿ, ನಿಧನ, ಶಾಶ್ವತ ಸ್ಥಳಾಂತರ ಹಾಗೂ ಒಂದಕ್ಕಿಂತ ಹೆಚ್ಚು ಕಡೆ ಹೆಸರು ನೋಂದಣಿಯಾಗಿರುವ ಕಾರಣದಿಂದಾಗಿ 1.13 ಕೋಟಿ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ. ಉಳಿದಂತೆ 9.75 ಕೋಟಿ ಜನರ ಹೆಸರುಗಳನ್ನು ಉಳಿಸಿಕೊಳ್ಳಲಾಗಿದೆ.

ಇದನ್ನು ನೋಡಿ : CIVIL POLICE CONSTABLE EXAM – ತುಮಕೂರಿನಲ್ಲಿ ಹೇಗಿದೆ ಪರೀಕ್ಷಾ ಸಿದ್ಧತೆ?




