ಹಾಸನದಲ್ಲಿ ದಾರುಣ ಘಟನೆ – ತಂದೆ ಮೊಬೈಲ್ ಕೊಡಿಸದಿದ್ದಕ್ಕೆ 13 ವರ್ಷದ ಮಗ Suicide !

ತಂದೆ ಮೊಬೈಲ್ ಕೊಡಿಸಲಿಲ್ಲ ಎಂದು 13 ವರ್ಷದ ಬಾಲಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಹಾಸನ ಹೊರವಲಯದ ಯಡಿಯೂರು ಗ್ರಾಮದಲ್ಲಿ ನಡೆದಿದೆ.
13 ವರ್ಷದ ಬಾಲಕ ದಾರುಣ ಸಾವು
ಮೃತ ಬಾಲಕನನ್ನು ಚಿತ್ರದುರ್ಗ ಮೂಲದ ಪ್ರೀತಂ (13) ಎಂದು ಗುರುತಿಸಲಾಗಿದೆ. ಶ್ರೀನಿವಾಸ್ ಮತ್ತು ಗೌರಮ್ಮ ದಂಪತಿಯ ಪುತ್ರನಾದ ಪ್ರೀತಂ, ಕುಟುಂಬ ಸಮೇತ ಯಡಿಯೂರಿನಲ್ಲಿ ನಿರ್ಮಾಣವಾಗುತ್ತಿದ್ದ ಖಾಸಗಿ ಲೇಔಟ್ನಲ್ಲಿ ಕೆಲಸ ಮಾಡಲು ಬಂದಿದ್ದರು. ಪ್ರೀತಂ ಚಿತ್ರದುರ್ಗದಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದನು. ಶನಿವಾರ ಕುಟುಂಬದೊಂದಿಗೆ ಯಡಿಯೂರಿಗೆ ಬಂದಿದ್ದ ಬಾಲಕ, ಲೇಔಟ್ನಲ್ಲಿದ್ದ ಶೆಡ್ನಲ್ಲಿ ಪೋಷಕರೊಂದಿಗೆ ವಾಸಿಸುತ್ತಿದ್ದನು.
ಇದನ್ನು ಓದಿ : ‘ಬೆಕ್ಕು ಸಾಕೋದು ಬೇಡ’ ಎಂದಿದ್ದಕ್ಕೆ ವೈದ್ಯೆ Suicide!

ಮೊಬೈಲ್ ಕೊಡಿಸದಿದ್ದಕ್ಕೆ Suicide !
ಪೋಷಕರ ಬಳಿ ಮೊಬೈಲ್ ಕೊಡಿಸುವಂತೆ ಪ್ರೀತಂ ಹಲವು ಬಾರಿ ಕೇಳಿದ್ದ ಎನ್ನಲಾಗಿದೆ. ಆದರೆ ತಂದೆ ಮೊಬೈಲ್ ಕೊಡಿಸಲು ನಿರಾಕರಿಸಿದ್ದರು. ಇದರಿಂದ ಮನನೊಂದು ಬಾಲಕ ಶೆಡ್ನೊಳಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಘಟನೆ ತಿಳಿದು ಸ್ಥಳಕ್ಕೆ ಹಾಸನ ಬಡಾವಣೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಇದನ್ನು ನೋಡಿ : ಆಗಸ್ಟ್ 13ಕ್ಕೆ ಬಂದ್ ಮಾಡೋದು ಬೇಡ – ಸಂಘಟನೆಗಳಿಗೆ ಸಿಎಂ ಡಿಕೆಶಿ ಮನವಿ




