Tumakuru : ಕೈ ಶಾಸಕರಿಗೆ ಹೈಕಮಾಂಡ್ ಮಾಸ್ಟರ್ ಸ್ಟ್ರೋಕ್..!

ತೀವ್ರ ಕುತೂಹಲ ಮೂಡಿಸಿದ್ದ ಸಚಿವ ಸಂಪುಟ ವಿಸ್ತರಣೆ ಕಸರತ್ತಿಗೆ ಕೊನೆಗೂ ತೆರೆ ಬಿದ್ದಿದೆ. ಒಟ್ಟು 20 ಮಂದಿ ನೂತನ ಸಚಿವರ ಪಟ್ಟಿಯನ್ನು ರಿಲೀಸ್ ಮಾಡಿದ್ದು, ಇಂದೇ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಹೈಕಮಾಂಡ್ ಅಂತಿಮಗೊಳಿಸಿರೋ ಪಟ್ಟಿಯಂತೆಯೇ ಶಾಸಕರು ಡಿಕೆ ಸಂಪುಟ ಸೇರಿಕೊಂಡಿದ್ದಾರೆ. ನೂತನ ಸಚಿವರ ಪಟ್ಟಿ ಬಿಡುಗಡೆ ಆಗ್ತಿದ್ದಂತೆ ಸಚಿವ ಸ್ಥಾನ ಸಿಕ್ಕಿದ ನಾಯಕರ ಬೆಂಬಲಿಗರಲ್ಲಿ ಸಂಭ್ರಮಾಚರಣೆ ಮನೆ ಮಾಡಿದ್ರೆ, ಇತ್ತ ಸಚಿವ ಸ್ಥಾನ ಸಿಗದೇ ನಿರಾಸೆಯಾಗಿರುವ ನಾಯಕರಿಗೆ ತೀವ್ರ ನಿರಾಸೆಯಾಗಿದೆ. ಇತ್ತ ತುಮಕೂರಿನಲ್ಲಿ ಒಟ್ಟು ಏಳು ಮಂದಿ ಕಾಂಗ್ರೆಸ್ ಶಾಸಕರು ಇದ್ದು, ಈ ಬಾರಿ ಸಚಿವಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದ ನಾಯಕರಿಗೆ ಹೈಕಮಾಂಡ್ ಮಾಸ್ಟರ್ ಸ್ಟ್ರೋಕ್ ನೀಡಿದೆ.
ಹಲವು ನಾಯಕರಿಗೆ ಸಚಿವ ಸ್ಥಾನ
ಹೈಕಮಾಂಡ್ ಅಂತಿಮಗೊಳಿಸಿರುವ ಪಟ್ಟಿಯಲ್ಲಿ ರುದ್ರಪ್ಪ ಲಮಾಣಿ, ಕೆ.ಎಸ್. ಬಸವಂತಪ್ಪ, ಬಿ. ನಾಗೇಂದ್ರ, ಟಿ. ರಘುಮೂರ್ತಿ, ಜಮೀರ್ ಅಹ್ಮದ್ ಖಾನ್, ರಿಜ್ವಾನ್ ಅರ್ಷದ್, ಸಂತೋಷ್ ಲಾಡ್, ಮಧು ಬಂಗಾರಪ್ಪ, ಪುಟ್ಟರಂಗಶೆಟ್ಟಿ, ಮಂಕಾಳ ವೈದ್ಯ, ಡಾ. ಅಜಯ್ ಸಿಂಗ್, ಎನ್. ಚಲುವರಾಯಸ್ವಾಮಿ, ಶಿವಲಿಂಗೇಗೌಡ, ಹೆಚ್.ಸಿ. ಬಾಲಕೃಷ್ಣ, ಎಂಎಲ್ಸಿ ಗಾಯತ್ರಿ ಶಾಂತೇಗೌಡ, ಬಸವರಾಜ ರಾಯರೆಡ್ಡಿ, ವಿಜಯಾನಂದ ಕಾಶಪ್ಪನವರ್ ಹಾಗೂ ಲಕ್ಷ್ಮಣ ಸವದಿ ಸೇರಿದಂತೆ ಹಲವು ನಾಯಕರಿಗೆ ಸಚಿವ ಸ್ಥಾನ ಒಲಿದಿದೆ.

ಜಿಲ್ಲೆಯ ಹಲವು ಶಾಸಕರು ಹಾಗೂ ಹಿರಿಯ ನಾಯಕರಿಗೆ ನಿರಾಸೆ
ಇನ್ನು ಫೈನಲ್ ಪಟ್ಟಿ ರಿಲೀಸ್ ಬೆನ್ನಲ್ಲೇ Tumakuru ಜಿಲ್ಲೆಯಲ್ಲಿ ಮಂತ್ರಿಪಟ್ಟದ ಮೇಲೆ ಆಸೆ ಇಟ್ಟುಕೊಂಡಿದ್ದ, ಜಿಲ್ಲೆಯ ಹಲವು ಶಾಸಕರು ಹಾಗೂ ಹಿರಿಯ ನಾಯಕರಿಗೆ ನಿರಾಸೆ ಮೂಡಿದೆ. ಜಿಲ್ಲೆಯಲ್ಲಿ ಕೆ.ಎನ್. ರಾಜಣ್ಣ, ರಾಜೇಂದ್ರ ರಾಜಣ್ಣ, ಕೆ. ಷಡಕ್ಷರಿ, ಎಚ್.ವಿ. ವೆಂಕಟೇಶ್, ಟಿ.ಬಿ. ಜಯಚಂದ್ರ ಹಾಗೂ ಎಸ್.ಆರ್. ಶ್ರೀನಿವಾಸ್ ಅವರ ಹೆಸರುಗಳು ಸಚಿವ ಸ್ಥಾನದ ರೇಸ್ನಲ್ಲಿ ಮುಂಚೂಣಿಯಲ್ಲಿ ಕೇಳಿಬಂದಿದ್ದವು. ಆದ್ರೆ ಕೊನೆ ಕ್ಷಣದಲ್ಲಿ ಬಿಡುಗಡೆಯಾದ ಪಟ್ಟಿಯಲ್ಲಿ ತುಮಕೂರಿನ ಯಾರೊಬ್ಬರಿಗೂ ಮಂತ್ರಿ ಭಾಗ್ಯ ಒಲಿದಿಲ್ಲ.
ಇದನ್ನು ಓದಿ : ಕಾನ್ಸ್ಟೇಬಲ್ ಪರೀಕ್ಷೆ ಗೊಂದಲ – ಪ್ರಿಯಾಂಕ್ ರಾಜೀನಾಮೆಗೆ ಸಿ.ಟಿ ರವಿ ಆಗ್ರಹ
ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ಕೊಡಬೇಕು
ಇನ್ನು ಡಿಸಿಎಂ ಪರಮೇಶ್ವರ್ ಅವರು ಕೂಡ ತುಮಕೂರು ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ಕೊಡಬೇಕು ಅಂತ ಕೇಳಿದ್ರು, ಯಾಕಂದ್ರೆ ನಮ್ಮ ಜಿಲ್ಲೆ ದೊಡ್ಡ ಜಿಲ್ಲೆಯಾಗಿದೆ ಹೀಗಾಗಿ ನಮ್ಮ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ಕೊಡಿ ಅಂತ ನಾನು ಕೇಳಿದ್ದೇನೆ ಎಂದಿದ್ರು.

ಹಲವು ನಾಯಕರು ಸಚಿವ ಸ್ಥಾನಕ್ಕಾಗಿ ಲಾಬಿ
ತುಮಕೂರು ಜಿಲ್ಲೆಗೆ ಈ ಬಾರಿ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗಲಿದೆ ಎಂಬ ನಿರೀಕ್ಷೆ ಜಿಲ್ಲೆಯ ಕಾಂಗ್ರೆಸ್ ವಲಯದಲ್ಲಿತ್ತು. ಅದರಲ್ಲೂ ಸಚಿವ ಸ್ಥಾನಕ್ಕಾಗಿ ಜಿಲ್ಲೆಯ ನಾಯಕರ ನಡುವೆ ಸಾಕಷ್ಟು ಪೈಪೋಟಿ ಇತ್ತು. ತಮ್ಮ ತಮ್ಮ ರಾಜಕೀಯ ಅನುಭವ, ಕ್ಷೇತ್ರದ ಪ್ರಾಬಲ್ಯ ಹಾಗೂ ಪಕ್ಷ ಸಂಘಟನೆಯಲ್ಲಿ ವಹಿಸಿರುವ ಪಾತ್ರವನ್ನು ಮುಂದಿಟ್ಟುಕೊಂಡು ಹಲವು ನಾಯಕರು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿದ್ರು. ಆದ್ರೆ ಕೊನೆ ಕ್ಷಣದಲ್ಲಿ ಹೊರಬಂದ ಪಟ್ಟಿಯಲ್ಲಿ ಜಿಲ್ಲೆಯ ಯಾರಿಗೂ ಅವಕಾಶ ಸಿಗದಿರುವುದು ತುಮಕೂರು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
Tumakuru ಜಿಲ್ಲೆಯ ಸಚಿವಕಾಂಕ್ಷಿಗಳಿಗೆ ಕೊನೆಗೂ ಒಲಿಯಲೇ ಇಲ್ಲ ಮಂತ್ರಿಗಿರಿ
ಒಟ್ನಲ್ಲಿ, ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಗಿದ್ರೂ, ತುಮಕೂರಿನ ಸಚಿವ ಸ್ಥಾನದ ಆಕಾಂಕ್ಷಿಗಳ ಪಾಲಿಗೆ ಮಾತ್ರ ನಿರೀಕ್ಷೆ ಕೈಗೂಡಿಲ್ಲ. ಆದ್ರೆ ಜಿಲ್ಲೆಗೆ ಸಚಿವ ಸ್ಥಾನ ಸಿಗದಿರುವುದಕ್ಕೆ ಪಕ್ಷದೊಳಗಿನ ಲೆಕ್ಕಾಚಾರವೇ ಕಾರಣವಾ..? ಮುಂದಿನ ದಿನಗಳಲ್ಲಿ ಸಂಪುಟದಲ್ಲಿ ಮತ್ತೊಂದು ಅವಕಾಶ ಸಿಗುತ್ತಾ. ಎಂಬುದನ್ನ ಕಾದು ನೋಡ್ಬೇಕಿದೆ.

ಇದನ್ನು ನೋಡಿ : ವಿಚಾರಣೆಗೆಂದು ಕರೆತಂದಿದ್ದ ವ್ಯಕ್ತಿ ಲಾಕಪ್ ಡೆತ್?- ಆಸ್ಪತ್ರೆ ಮುಂದೆ ಕುಟುಂಬಸ್ಥರ ಆಕ್ರೋಶದ ಕಿಚ್ಚು




