ಬೇಲೂರಿನಲ್ಲಿ ದಾರುಣ ಘಟನೆ – ಪತ್ನಿಯನ್ನು ಕೊಂದು ಪತಿಯೂ Suicide !

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕೆಸಗೋಡು ಗ್ರಾಮದಲ್ಲಿ ದಾರುಣ ಘಟನೆಯೊಂದು ನಡೆದಿದೆ. ಪತ್ನಿಯನ್ನು ಕೊಲೆ ಮಾಡಿ ಬಳಿಕ ಪತಿಯೂ ನೇಣು ಬಿಗಿದುಕೊಂಡು Suicide ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತರನ್ನು ಹಳೇಬೀಡು ಹೋಬಳಿಯ ಸಾಣೇನಹಳ್ಳಿ ಗ್ರಾಮದ ಗಗನ (38) ಹಾಗೂ ಆತ್ಮಹತ್ಯೆ ಮಾಡಿಕೊಂಡ ಪತಿಯನ್ನು ಬಿಕ್ಕೋಡು ಹೋಬಳಿಯ ಕೆಸಗೋಡು ಗ್ರಾಮದ ರಘು (41) ಎಂದು ಗುರುತಿಸಲಾಗಿದೆ.
13 ವರ್ಷಗಳ ದಾಂಪತ್ಯ
ಗಗನ ಮತ್ತು ರಘು ಅವರು 13 ವರ್ಷಗಳ ಹಿಂದೆ ವಿವಾಹವಾಗಿದ್ದು, ದಂಪತಿಗೆ 12 ಹಾಗೂ 6 ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ಚಿಕ್ಕಮಗಳೂರಿನಲ್ಲಿ ಬೇಕರಿ ನಡೆಸುತ್ತಿದ್ದು, ಕುಟುಂಬ ಸಮೇತ ಅಲ್ಲಿಯೇ ವಾಸವಾಗಿದ್ದರು ಎಂದು ತಿಳಿದು ಬಂದಿದೆ.
ಇದನ್ನು ಓದಿ : ಬೆಂಗಳೂರಲ್ಲಿ ಕಾಲೇಜು ಕಟ್ಟಡದಿಂದ ಜಿಗಿದು PUC ವಿದ್ಯಾರ್ಥಿ Suicide..!

ಕಾರಿನಲ್ಲಿ ತೆರಳುತ್ತಿದ್ದ ವೇಳೆ ಘಟನೆ
ಶುಕ್ರವಾರ ಪತ್ನಿ ಗಗನ ಅವರೊಂದಿಗೆ ಕಾರಿನಲ್ಲಿ ಕೆಸಗೋಡು ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ರಘು ಅವರು ಪತ್ನಿಯನ್ನು ಕೊಲೆ ಮಾಡಿರುವುದಾಗಿ ಆರೋಪಿಸಲಾಗಿದೆ. ಬಳಿಕ ಸಂಬಂಧಿಕರಿಗೆ ವಿಡಿಯೋ ಕಾಲ್ ಮಾಡಿ, ಈ ವಿಷಯ ತಿಳಿಸಿ ಆತಂಕ ಸೃಷ್ಟಿಸಿದ್ದಾನೆ. ನಂತರ ಗಗನ ಅವರ ಮೃತದೇಹವನ್ನು ಕಾರಿನಲ್ಲೇ ಕೊಂಡೊಯ್ದು ಯಗಚಿ ನಾಲೆಗೆ ಎಸೆದಿರುವುದಾಗಿ ತಿಳಿಸಿದ ಬಳಿಕ, ಕೆಸಗೋಡು ಗ್ರಾಮದಲ್ಲಿ ರಘು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
Suicide – ಮೃತದೇಹಕ್ಕಾಗಿ ಶೋಧ
ಘಟನೆ ಕುರಿತು ಮಾಹಿತಿ ಪಡೆದ ಅರೇಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಗಚಿ ನಾಲೆಗೆ ಎಸೆಯಲಾಗಿದೆ ಎನ್ನಲಾದ ಗಗನ ಅವರ ಮೃತದೇಹ ಪತ್ತೆಗಾಗಿ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಈ ಸಂಬಂಧ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಗೆ ಕಾರಣ ಹಾಗೂ ಇತರ ಅಂಶಗಳ ಕುರಿತು ತನಿಖೆ ನಡೆಯುತ್ತಿದೆ.

ಇದನ್ನು ನೋಡಿ : ತುಮಕೂರಿನಲ್ಲೂ ಭುಗಿಲೆದ್ದ ಕಾವೇರಿ ಕಿಚ್ಚು..! – ಜಿಲ್ಲೆಯಲ್ಲೂ ಹೋರಾಟಕ್ಕೆ ಧುಮುಕಿದ ಮುಖಂಡರು




