Toxic ಸಿನಿಮಾ ಬಗ್ಗೆ ಹೊಸ ಕಿರಿಕ್ – ಕೋರ್ಟ್ ಆದೇಶಕ್ಕೆ ತುಮಕೂರಲ್ಲಿ ವಿರೋಧ.!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಇನ್ನು ಸಿನಿಮಾ ರಿಲೀಸ್ಗೂ ಮುನ್ನವೇ ನಿರ್ಮಾಪಕರು ಚಿತ್ರದ ವಿರುದ್ಧ ಸುಳ್ಳು ಸುದ್ದಿ ಹಾಗೂ ಮಾನಹಾನಿಕರ ಮಾಹಿತಿ ಪ್ರಸಾರ ಮಾಡಿ ಹರಡದಂತೆ ಬೆಂಗಳೂರಿನ 36ನೇ ಸಿಸಿಹೆಚ್ ಕೋರ್ಟ್ ಆದೇಶ ನೀಡಿದೆ. ಆದ್ರೆ ಸಿನಿಮಾ ತಂಡದ ಈ ನಡೆಗೆ ಹಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.
ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡದಂತೆ ಕೋರ್ಟ್ ತಡೆಯಾಜ್ಞೆ
Toxic ಚಿತ್ರದ ವಿರುದ್ಧ ಸುಳ್ಳು ಹಾಗೂ ಮಾನಹಾನಿಕರ ಸುದ್ದಿಗಳನ್ನು ಪ್ರಸಾರ ಮಾಡದಂತೆ ಕೋರ್ಟ್ ತಡೆಯಾಜ್ಞೆ ನೀಡಿದೆ. ಆದ್ರೆ ಸಿನಿಮಾ ನೋಡಿದ ಬಳಿಕ ಅದು ಚೆನ್ನಾಗಿದೆಯೋ, ಇಲ್ಲವೋ ಎಂದು ಹೇಳುವುದು ಪ್ರೇಕ್ಷಕರ ಹಕ್ಕು. ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವುದನ್ನೇ ತಡೆಯುವುದು ಸರಿಯಲ್ಲ ಎಂದು ತುಮಕೂರಿನಲ್ಲಿ ಕರ್ನಾಟಕ ರಕ್ಷಣ ಸೇನೆ ವೇದಿಕೆಯ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
READ THIS : ಎರಡನೇ ದಿನವೂ ಅಬ್ಬರಿಸಿದ ಟಾಕ್ಸಿಕ್ – ಭರ್ಜರಿ ಗಳಿಕೆ ಮಾಡಿದ ಯಶ್ ಸಿನಿಮಾ

ಸಿನಿಮಾ ವಿಮರ್ಶಿಸುವುದು ಕನ್ನಡಿಗರ ಹಕ್ಕು
ಇನ್ನು ಯಶ್ ಅವರು ಕರ್ನಾಟಕದವರು. ಅವರ ಸಿನಿಮಾ ಬಗ್ಗೆ ಮಾತನಾಡುವುದು, ಸಿನಿಮಾ ಹೇಗಿದೆ ಎಂಬುದನ್ನು ವಿಮರ್ಶಿಸುವುದು ಕನ್ನಡಿಗರ ಹಕ್ಕು. ಅದನ್ನೇ ಬೇಡ ಎನ್ನುವುದು ತಪ್ಪು. ಸಿನಿಮಾ ಪೈರಸಿ ತಡೆಯುವ ವಿಚಾರವಾಗಿ ಕೋರ್ಟ್ನಿಂದ ಸ್ಟೇ ತಂದಿದ್ದರೆ ಅದನ್ನು ಸ್ವಾಗತಿಸುತ್ತೇವೆ. ಆದ್ರೆ ಸಿನಿಮಾ ಬಗ್ಗೆ ಪ್ರೇಕ್ಷಕರು ತಮ್ಮ ಅಭಿಪ್ರಾಯ ಹೇಳುವುದಕ್ಕೆ ನಿರ್ಬಂಧ ಹೇರುವುದು ಕನ್ನಡಿಗರ ಸ್ವಾತಂತ್ರ್ಯಕ್ಕೆ ಧಕ್ಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿ ಪ್ರಸಾರಕ್ಕೆ ಕೋರ್ಟ್ ತಡೆ
ಒಟ್ಟಿನಲ್ಲಿ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ ಸುಳ್ಳು ಹಾಗೂ ಮಾನಹಾನಿಕರ ಸುದ್ದಿ ಪ್ರಸಾರಕ್ಕೆ ಕೋರ್ಟ್ ತಡೆ ನೀಡಿದೆ. ಮತ್ತೊಂದೆಡೆ, ಸಿನಿಮಾ ವಿಮರ್ಶೆ ಮಾಡುವ ಪ್ರೇಕ್ಷಕರ ಹಕ್ಕಿನ ಬಗ್ಗೆ ಸಂಘಟನೆಗಳು ಧ್ವನಿ ಎತ್ತಿವೆ. ಕೋರ್ಟ್ ಆದೇಶ ಇದೀಗ ಸಿನಿಮಾ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

MUST WATCH : ನಿಯಂತ್ರಣ ತಪ್ಪಿ ಹಾಲಿನ ಗಾಡಿ ಪಲ್ಟಿ – ಹಾಲು ತುಂಬಿಕೊಳ್ಳಲು ಮುಗಿಬಿದ್ದ ಜನ




