ರೈಲ್ವೆ ಇಲಾಖೆಯಿಂದ 119 ಸೆಕ್ಷನ್ ಕಂಟ್ರೋಲರ್ ಮತ್ತು 6565 ಟೆಕ್ನೀಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ

RRB Recruitment : ಭಾರತೀಯ ರೈಲ್ವೆಯಲ್ಲಿ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಭರ್ಜರಿ ಅವಕಾಶ ಸಿಕ್ಕಿದೆ. ರೈಲ್ವೆ ನೇಮಕಾತಿ ಮಂಡಳಿ ದೇಶದ ವಿವಿಧ ರೈಲ್ವೆ ವಲಯಗಳಲ್ಲಿ 119 ಸೆಕ್ಷನ್ ಕಂಟ್ರೋಲರ್ ಹುದ್ದೆಗಳ ಭರ್ತಿಗೆ ಕಿರು ಅಧಿಸೂಚನೆ ಪ್ರಕಟಿಸಿದ್ದು, ಜುಲೈ 15ರಿಂದ ಆನ್ಲೈನ್ ಅರ್ಜಿ ಪ್ರಕ್ರಿಯೆ ಆರಂಭವಾಗಲಿದೆ.
ಯಾರು ಅರ್ಜಿ ಸಲ್ಲಿಸಬಹುದು?
ರೈಲ್ವೆ ನೇಮಕಾತಿ ಮಂಡಳಿ CEN No. 03/2026 ಅಡಿಯಲ್ಲಿ ಸೆಕ್ಷನ್ ಕಂಟ್ರೋಲರ್ ಹುದ್ದೆಗಳ ನೇಮಕಾತಿಗೆ ಶೀಘ್ರದಲ್ಲೇ ಅಧಿಕೃತ ಅಧಿಸೂಚನೆ ಪ್ರಕಟಿಸಲಿದೆ. ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.
ಜುಲೈ 15 ರಿಂದ ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭ
- ಒಟ್ಟು ಹುದ್ದೆಗಳು: 119
- ಹುದ್ದೆ: Section Controller
- ಅಧಿಸೂಚನೆ: CEN No. 03/2026
ಜುಲೈ 15, 2026ರಿಂದ ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಆಗಸ್ಟ್ 14, 2026 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ವಯೋಮಿತಿಯಲ್ಲಿ ಸಡಿಲಿಕೆ
- ಅರ್ಜಿ ಆರಂಭ: 15 ಜುಲೈ 2026
- ಕೊನೆಯ ದಿನ: 14 ಆಗಸ್ಟ್ 2026
ಅಭ್ಯರ್ಥಿಗಳ ವಯಸ್ಸು 2026ರ ಜುಲೈ 1ರಂತೆ 20 ರಿಂದ 30 ವರ್ಷಗಳೊಳಗೆ ಇರಬೇಕು. ಸರ್ಕಾರದ ನಿಯಮದಂತೆ ಎಸ್ಸಿ, ಎಸ್ಟಿ, ಒಬಿಸಿ ಹಾಗೂ ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.
ವಯೋಮಿತಿ
- ಸಾಮಾನ್ಯ: 20–30 ವರ್ಷ
- SC/ST: 5 ವರ್ಷ ಸಡಿಲಿಕೆ
- OBC: 3 ವರ್ಷ
- PwBD: 10 ವರ್ಷ
- OBC-PwBD: 13 ವರ್ಷ
- SC/ST-PwBD: 15 ವರ್ಷ
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ 35 ಸಾವಿರ 400 ರೂಪಾಯಿ ಮೂಲ ವೇತನದ ಜೊತೆಗೆ ಕೇಂದ್ರ ಸರ್ಕಾರದ ವಿವಿಧ ಭತ್ಯೆಗಳೂ ದೊರೆಯಲಿವೆ.
ಇದನ್ನು ಓದಿ : RRB Recruitment 2025: 2,570 Junior Engineer , DMS, CMA ಹುದ್ದೆಗಳಿಗೆ ನೇಮಕಾತಿ

ಅರ್ಜಿ ಶುಲ್ಕ
ಅರ್ಜಿ ಶುಲ್ಕ ಸಾಮಾನ್ಯ ಅಭ್ಯರ್ಥಿಗಳಿಗೆ 500 ರೂಪಾಯಿ ಹಾಗೂ ಮಹಿಳೆಯರು, ಎಸ್ಸಿ, ಎಸ್ಟಿ, ಮಾಜಿ ಸೈನಿಕರು, ಪಿಡಬ್ಲ್ಯೂಬಿಡಿ, ಟ್ರಾನ್ಸ್ಜೆಂಡರ್ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 250 ರೂಪಾಯಿ ನಿಗದಿಯಾಗಿದೆ. ಸಿಬಿಟಿ ಪರೀಕ್ಷೆಗೆ ಹಾಜರಾಗುವ ಸಾಮಾನ್ಯ ಅಭ್ಯರ್ಥಿಗಳಿಗೆ 400 ರೂಪಾಯಿ ಶುಲ್ಕ ಮರುಪಾವತಿ ಮಾಡಲಾಗುತ್ತದೆ.
- ಸಾಮಾನ್ಯ: ₹500
- SC/ST/ಮಹಿಳೆ/PwBD/Ex-Servicemen/EBC: ₹250
- CBT ನಂತರ ಸಾಮಾನ್ಯರಿಗೆ ₹400 ಮರುಪಾವತಿ
ತಂತ್ರಜ್ಞ ಹುದ್ದೆಗಳಿಗೂ ಅರ್ಜಿ ಆಹ್ವಾನ
ಇದೇ ವೇಳೆ ರೈಲ್ವೆ ಇಲಾಖೆ 6 ಸಾವಿರ 565 ತಂತ್ರಜ್ಞ ಹುದ್ದೆಗಳಿಗೂ ಅರ್ಜಿ ಆಹ್ವಾನಿಸಿದ್ದು, ಐಟಿಐ, ಡಿಪ್ಲೊಮಾ ಹಾಗೂ ಪದವಿ ಪಡೆದ ಅಭ್ಯರ್ಥಿಗಳು ಜುಲೈ 29ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.
- Technician ಹುದ್ದೆಗಳು: 6,565
- ಅರ್ಜಿ ಕೊನೆಯ ದಿನ: 29 ಜುಲೈ 2026
ರೈಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಕನಸು ಹೊಂದಿರುವ ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ, ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ ಸಮಯಕ್ಕೆ ಸರಿಯಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ರೈಲ್ವೆ ನೇಮಕಾತಿ ಮಂಡಳಿ ಸೂಚಿಸಿದೆ.
ಇದನ್ನು ನೋಡಿ : ಶಾಸಕ SURESH GOWDA ಅವ್ರೇ ಇಲ್ನೋಡಿ..! ರಸ್ತೆಗಾಗಿ ಪ್ರತಿಭಟಿಸಿ ಸ್ಥಳೀಯರ ಆಕ್ರೋಶ




