3.85 ಕೋಟಿ ರೂ. ವಂಚನೆ ಆರೋಪ – ಸ್ಯಾಂಡಲ್ ವುಡ್ ನಿರ್ದೇಶಕ, ನಟ Om Prakash ವಿರುದ್ಧ ದೂರು ದಾಖಲು!

ಸ್ಯಾಂಡಲ್ವುಡ್ನ ನಿರ್ದೇಶಕ ಹಾಗೂ ನಟ ಓಂ ಪ್ರಕಾಶ್ ರಾವ್ ವಿರುದ್ಧ ₹3.85 ಕೋಟಿ ವಂಚನೆ ಆರೋಪ ಕೇಳಿಬಂದಿದ್ದು, ಈ ಸಂಬಂಧ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಕೆಯಾಗಿದೆ.

ಕೋಟಿ ಕೋಟಿ ವಂಚನೆ
ನಟ ಭಾಸ್ಕರ ಶೆಟ್ಟಿ ಅವರು Om Prakash ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ‘ಫಿನಿಕ್ಸ್’ ಸಿನಿಮಾಗಾಗಿ ಸುಮಾರು ಮೂರು ವರ್ಷಗಳ ಹಿಂದೆ ಸಾಲ ಪಡೆದಿದ್ದರೂ, ಇದುವರೆಗೆ ಹಣವನ್ನು ಹಿಂದಿರುಗಿಸದೆ ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

READ THIS : ಲಕ್ಷೀದೇವಿ ಕುರಿತು ವಿವಾದತ್ಮಕ ಹೇಳಿಕೆ – ಆರ್ಯವರ್ಧನ್ ಗುರೂಜಿ ವಿರುದ್ಧ ದೂರು!
ಓಂ ಪ್ರಕಾಶ್ ರಾವ್ ವಿರುದ್ಧ ದೂರು
ಸಾಲದ ಹಣವನ್ನು ವಾಪಸ್ ನೀಡುವಂತೆ ಕೇಳಿದ ವೇಳೆ ಬೆದರಿಕೆ ಹಾಕಲಾಗಿದೆ ಎಂಬ ಆರೋಪವೂ ಚಿತ್ರತಂಡದ ಕಡೆಯಿಂದ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ನಟ ಭಾಸ್ಕರ ಶೆಟ್ಟಿ ನೀಡಿರುವ ದೂರಿನ ಆಧಾರದ ಮೇಲೆ ಓಂ ಪ್ರಕಾಶ್ ವಿರುದ್ಧ ಪ್ರಕರಣ ದಾಖಲಾಗಿದೆ.

ಇನ್ನು ಈ ಗಂಭೀರ ಆರೋಪಗಳ ಬಗ್ಗೆ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

MUST WATCH : NAGENDRA ರಾಜೀನಾಮೆ ಒತ್ತಾಯಿಸಿ BJP ಹೋರಾಟ – ಪ್ರತಿಭಟನೆಗೆ ಕುಳಿತ್ತಿದವರನ್ನ ವಶಕ್ಕೆ ಪಡೆದ ಪೊಲೀಸರು




