Toxic Movie: ಯಶ್ ಮತ್ತೆ ಬೆಳ್ಳಿಪರದೆಗೆ ಮರಳುತ್ತಿದ್ದು, ಈ ಚಿತ್ರವು ಈಗಾಗಲೇ ದೇಶ, ವಿದೇಶಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘Toxic: A Fairy Tale for Grown-Ups’ ಸಿನಿಮಾ ಬಿಡುಗಡೆಗೂ ಮುನ್ನವೇ ಭರ್ಜರಿ ಸದ್ದು ಮಾಡ್ತಿದೆ. ಗೀತು ಮೋಹನ್ದಾಸ್ ನಿರ್ದೇಶನದ ಈ ಚಿತ್ರ ಆಗಸ್ಟ್ 26ರಂದು ತೆರೆಗೆ ಬರಲಿದ್ದು, ಚಿತ್ರದ ಮುಂಗಡ ಟಿಕೆಟ್ ಬುಕಿಂಗ್ ಈಗಾಗಲೇ ಆರಂಭವಾಗಿದೆ.
‘ಟಾಕ್ಸಿಕ್’ ಟಿಕೆಟ್ ಸೋಲ್ಡ್ ಔಟ್!
ಅಡ್ವಾನ್ಸ್ ಬುಕಿಂಗ್ ಆರಂಭವಾಗುತ್ತಿದ್ದಂತೆಯೇ ಬೆಂಗಳೂರಿನಲ್ಲಿ ಅಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದ ಹಲವು ಮಲ್ಟಿಪ್ಲೆಕ್ಸ್ಗಳಲ್ಲಿ ಮೊದಲ ದಿನದ ಬಹುತೇಕ ಪ್ರದರ್ಶನಗಳ ಟಿಕೆಟ್ಗಳು ಕೆಲವೇ ನಿಮಿಷಗಳಲ್ಲಿ ಸೋಲ್ಡ್ ಔಟ್ ಆಗಿವೆ. ಬುಕ್ಮೈಶೋನಲ್ಲಿ ಪ್ರತಿ ಗಂಟೆಗೆ 25 ಸಾವಿರಕ್ಕೂ ಅಧಿಕ ಟಿಕೆಟ್ಗಳು ಮಾರಾಟವಾಗುತ್ತಿವೆ ಎನ್ನಲಾಗಿದೆ.

ಬೆಳಗ್ಗೆ 6ರಿಂದಲೇ ‘ಟಾಕ್ಸಿಕ್’ ಶೋ
ಬೆಂಗಳೂರಿನಲ್ಲಿ ಚಿತ್ರದ ವಿಶೇಷ ಪ್ರದರ್ಶನಗಳು ಮುಂಜಾನೆ 6 ಗಂಟೆಯಿಂದಲೇ ಆರಂಭವಾಗಲಿವೆ. ಮಲ್ಟಿಪ್ಲೆಕ್ಸ್ಗಳ ಗೋಲ್ಡ್ ಕ್ಲಾಸ್ ಟಿಕೆಟ್ ದರ ₹1,500ರಿಂದ ₹1,700ರವರೆಗೆ ಇದ್ದರೆ, ಸಾಮಾನ್ಯ ಪ್ರದರ್ಶನಗಳ ಟಿಕೆಟ್ ದರ ₹800ರಿಂದ ₹1,000ರವರೆಗೆ ಇದೆ. ಸಿಂಗಲ್ ಸ್ಕ್ರೀನ್ಗಳಲ್ಲಿ ಟಿಕೆಟ್ ದರ ಸುಮಾರು ₹400ರಿಂದ ₹500ರವರೆಗೆ ಇದೆ.
ಬೆಳಗ್ಗೆ 6 ಗಂಟೆಯ ವಿಶೇಷ ಶೋಗಳಿಗೆ ಸಾಮಾನ್ಯಕ್ಕಿಂತ ಹೆಚ್ಚಿನ ದರ ನಿಗದಿಪಡಿಸಲಾಗಿದೆ. ಮುಂಬೈ ಮತ್ತು ದೆಹಲಿಯಲ್ಲಿ ಟಿಕೆಟ್ ದರ ಸುಮಾರು ₹800ರಿಂದ ₹900ರವರೆಗೆ ಇದೆ. ಆದರೆ ಚೆನ್ನೈ, ಹೈದರಾಬಾದ್ ಮತ್ತು ಕೊಚ್ಚಿಯಲ್ಲಿ ಇನ್ನೂ ಬುಕಿಂಗ್ ಆರಂಭವಾಗಿಲ್ಲ ಎನ್ನಲಾಗಿದೆ.
READ THIS : Toxic ಅಡ್ವಾನ್ಸ್ ಬುಕಿಂಗ್ ಶುರು

ಅಮೆರಿಕದಲ್ಲೂ ಭರ್ಜರಿ ಮುಂಗಡ ಬುಕಿಂಗ್
‘ಟಾಕ್ಸಿಕ್’ ಚಿತ್ರಕ್ಕೆ ಅಮೆರಿಕದಲ್ಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ವರದಿಗಳ ಪ್ರಕಾರ, ಅಮೆರಿಕದಲ್ಲಿ ಚಿತ್ರದ ಮುಂಗಡ ಬುಕಿಂಗ್ನಿಂದ ಈಗಾಗಲೇ $121,258 ಆದಾಯ ದಾಖಲಾಗಿದೆ.
ಸುಮಾರು 204 ಸ್ಥಳಗಳಲ್ಲಿ 589 ಪ್ರದರ್ಶನಗಳಿಗೆ 5,550ಕ್ಕೂ ಅಧಿಕ ಟಿಕೆಟ್ಗಳು ಮಾರಾಟವಾಗಿವೆ ಎನ್ನಲಾಗಿದೆ.
ಮುಂಗಡ ಟಿಕೆಟ್ ಮಾರಾಟದಲ್ಲೇ ಚಿತ್ರ ₹1 ಕೋಟಿಗೂ ಅಧಿಕ ಮೊತ್ತ ಗಳಿಸಿರುವುದು ಯಶ್ ಅಭಿಮಾನಿಗಳಲ್ಲಿರುವ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

Toxic ಬಿಡುಗಡೆಗೆ ಕ್ಷಣಗಣನೆ
‘ಟಾಕ್ಸಿಕ್’ ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರೀಕರಿಸಲಾಗಿದ್ದು, ಇತರ ಭಾರತೀಯ ಭಾಷೆಗಳಿಗೂ ಡಬ್ ಮಾಡಲಾಗುತ್ತಿದೆ.
ಯಶ್ ಅವರ ಜನಪ್ರಿಯತೆಯ ಹಿನ್ನೆಲೆಯಲ್ಲಿ ವಿವಿಧ ನಗರಗಳಲ್ಲಿ ವಿಶೇಷ ಪ್ರದರ್ಶನಗಳಿಗೆ ಹೆಚ್ಚಿನ ಬೇಡಿಕೆ ಕಂಡುಬರುವ ನಿರೀಕ್ಷೆಯಿದೆ.
ಆಗಸ್ಟ್ 26ರಂದು ಚಿತ್ರ ತೆರೆಗೆ ಬರಲಿದ್ದು, ಬಿಡುಗಡೆಯ ದಿನ ಬಾಕ್ಸ್ ಆಫೀಸ್ನಲ್ಲಿ ‘ಟಾಕ್ಸಿಕ್’ ಎಂತಹ ದಾಖಲೆ ಬರೆಯಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

MUST WATCH : ವಿದ್ಯುತ್ ಕಂಬಗಳಿಗೆ ಬಳ್ಳಿಗಳ ಕಂಟಕ – ಅನಾಹುತಕ್ಕೆ ಕಾಯ್ತಿದೆಯಾ ಹೆಸ್ಕಾಂ.?




