Rain Alert : ಮಲೆನಾಡು ಹಾಗೂ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅಷ್ಟೋ ಇಷ್ಟೋ ಮಳೆಯಾಗಿದ್ದು, ನದಿ, ಸರೋವರ, ಜಲಾಶಯಗಳಿಗೆ ಜೀವ ಕಳೆ ಬಂದಿದೆ.

ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದು, ಅನ್ನದಾತರು ಕಂಗಾಲಾಗಿದ್ದಾರೆ. ಕರಾವಳಿ, ಮಲೆನಾಡು ಹಾಗೂ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅಷ್ಟೋ ಇಷ್ಟೋ ಮಳೆಯಾಗಿದ್ದು, ನದಿ, ಸರೋವರ, ಜಲಾಶಯಗಳಿಗೆ ಜೀವ ಕಳೆ ಬಂದಿದೆ. ಆದ್ರೆ ಬಯಲು ಸೀಮೆ ಪ್ರದೇಶಗಳಲ್ಲಿ ಮಳೆ ಪ್ರಮಾಣ ಸಂಪೂರ್ಣ ಕಡಿಮೆ ಆಗಿದ್ದು, ಜನರು ತತ್ತರಿಸಿ ಹೋಗಿದ್ದಾರೆ.

ಮತ್ತೆ ಬಿಸಿಲು ಜಾಸ್ತಿ
ಆಗಸ್ಟ್ ಕೊನೆಗೆ ಬಂದಿದ್ದರು ಕೂಡ ಮಳೆ ಪ್ರಮಾಣ ಸುಧಾರಿಸಿಲ್ಲ. ಅಲ್ಪ ಸ್ವಲ್ಪ ಮಳೆಯನ್ನು ನಂಬಿಕೊಂಡು ಕೆಲ ರೈತರು ಬೆಳೆಯನ್ನು ಬಿತ್ತಿದ್ರೆ, ಇನ್ನು ಕೆಲ ರೈತರು ಆಕಾಶ ನೋಡುತ್ತಾ ಆಗ ಮಳೆ ಬರುತ್ತೆ, ಈಗ ಮಳೆ ಬರುತ್ತೆ ಅಂತಾ ಕಾಯ್ತಾ ಕೂತಿದ್ದಾರೆ. ಆದ್ರೆ ಆಗಾಗ ತುಂತುರು ಮಳೆ ಬಂದು ಸುಮ್ಮನೆ ಆಗುವ ಮಳೆಯೂ, ಮಳೆ ಬಳಿಕ ಮತ್ತೆ ಬಿಸಿಲು ಜಾಸ್ತಿ ಆಗ್ತಾ ಇದ್ದು, ತೇವಾಂಶಗೊಂಡಿದ್ದ ಭೂಮಿ ಮತ್ತೆ ಒಣಗುತ್ತಿದೆ. ಇದ್ರಿಂದ ಇದು ಮಳೆಗಾಲನಾ ಅಥವಾ ಬೇಸಿಗೆ ಕಾಲನಾ ಅಂತಾ ಅನುಮಾನ ಶುರುವಾಗಿದೆ.
READ THIS : ಮತ್ತೆ ಮುಂಗಾರು ಚುರುಕು – ರಾಜ್ಯದ ಈ ಭಾಗಗಳಲ್ಲಿ ಭಾರೀ ಮಳೆ

ತುಮಕೂರು ಜಿಲ್ಲೆಯ ಕೆರೆಗಳು ಫುಲ್ ಖಾಲಿ ಖಾಲಿ
ಇನ್ನು ತುಮಕೂರು ಜಿಲ್ಲೆಯ ಪರಿಸ್ಥಿತಿ ಹೇಳತೀರದಾಗಿದೆ. ಜೂನ್ ತಿಂಗಳುಗಳಿಂದ ಆಗಸ್ಟ್ ತಿಂಗಳುಗಳವರೆಗೂ ಶೇಕಡವಾರು ಮಳೆಯ ಪ್ರಮಾಣಕ್ಕಿಂತ ಕ್ಷೀಣಿಸಿದೆ.
ಜಿಲ್ಲೆಯ ಕೆರೆಗಳು ಫುಲ್ ಖಾಲಿ– ಖಾಲಿಯಾಗಿವೆ. ಇತ್ತ ಬೆಳೆಯೂ ಇಲ್ಲ, ಇನ್ನು ಕೆಲ ಕಡೆ ಕುಡಿಯುವ ನೀರಿನ ಸಮಸ್ಯೆಯೂ ಕೂಡ ಶುರುವಾಗಿದೆ.
ಬೋರ್ವೆಲ್ಗಳಲ್ಲಿ ನೀರಿನ ಪ್ರಮಾಣ ಕಡಿಮೆ ಆಗ್ತಿವೆ. ಹೀಗೆ ಪರಿಸ್ಥಿತಿ ಮುಂದುವರೆದ್ರೆ ತುಮಕೂರು ಜಿಲ್ಲೆಯ ಜನರ ಪರಿಸ್ಥಿತಿ ತೀರಾ ಹದಗೆಡಲಿದೆ.

Rain Alrt – ಹಿಂಗಾರು ಮಳೆಯ ಮೇಲೆ ನಿರೀಕ್ಷೆ
ಸದ್ಯ ಮುಂಗಾರು ಮಳೆ ಕೈಕೊಟ್ಟಿದ್ದು, ಕೆಲ ತಿಂಗಳುಗಳಲ್ಲಿ ಶುರುವಾಗುವ ಹಿಂಗಾರು ಮಳೆ ಚುರುಕು ಪಡೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಗೌರಿ-ಗಣೇಶ ಹಬ್ಬದ ಬಳಿಕ ಹಿಂಗಾರು ಮಳೆ ಹೆಚ್ಚಾಗಲಿದ್ದು, ಮಳೆಯಿಂದಾಗಿ ಕೆರೆ ಕಟ್ಟೆ ತುಂಬಿಕೊಂಡ್ರೆ, ಬತ್ತಿ ಹೋಗಿರುವ ಬೋರ್ವೆಲ್ಗಳು ಜೀವಂತವಾಗಿರಲಿವೆ.
ಜೊತೆಗೆ ರೈತರು ಕೂಡ ಹಿಂಗಾರು ಬೆಳೆಗಳನ್ನು ಆದ್ರು ಬೆಳೆಯಲಿದ್ದಾರೆ. ಆದ್ರೆ ಮಳೆ ಜನರ ಜೊತೆ ಕಣ್ಣಾ-ಮುಚ್ಚಾಲೆ ಆಟ ಆಡ್ತಾ ಇದ್ದು ಮುಂದಿನ ದಿನಗಳಲ್ಲಿ ಮಳೆ ಪ್ರಮಾಣ ಹೇಗಿರಲಿದೆ ಅನ್ನೋದನ್ನ ಕಾದುನೋಡಬೇಕಿದೆ.

MUST WATCH : ಮರ ಕಡಿಯುವಾಗ ದುರಂತ – ಕರೆಂಟ್ ಶಾಕ್ ಹೊಡೆದು ಬಾಲಕ ಸಾ*




