Gold Rate : 16,000 ರೂ ದಾಟಿದ ಅಪರಂಜಿ ಚಿನ್ನದ ಬೆಲೆ; ಇಲ್ಲಿದೆ ದರಪಟ್ಟಿ

ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳ ಏರಿಕೆ ಮುಂದುವರಿದಿದೆ. ಶುಕ್ರವಾರವೂ ಚಿನ್ನದ ದರ ಭರ್ಜರಿ ಏರಿಕೆ ಕಂಡಿದ್ದು, ಒಂದು ಗ್ರಾಂಗೆ ₹110 ಹೆಚ್ಚಾಗಿದೆ. ಕಳೆದ ಎರಡು ದಿನಗಳಲ್ಲಿ ಚಿನ್ನದ ಬೆಲೆ ಒಟ್ಟು ₹505ರಷ್ಟು ಏರಿಕೆಯಾಗಿದೆ. ಬೆಳ್ಳಿ ಬೆಲೆಯೂ ಇಂದು ಪ್ರತಿ ಗ್ರಾಂಗೆ ₹5 ಏರಿಕೆಯಾಗಿದೆ.
ಪ್ರಸ್ತುತ ಭಾರತದಲ್ಲಿ 10 ಗ್ರಾಂ 22 ಕ್ಯಾರಟ್ Gold Rate ₹1,47,100 ಇದ್ದರೆ, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ ₹1,60,480ಕ್ಕೆ ತಲುಪಿದೆ. 100 ಗ್ರಾಂ ಬೆಳ್ಳಿಯ ದರ ₹26,000 ಇದೆ.

ಬೆಂಗಳೂರಿನಲ್ಲಿ ಚಿನ್ನ-ಬೆಳ್ಳಿ ದರ
ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,47,100 ಇದ್ದು, ಒಂದು ಗ್ರಾಂಗೆ ₹14,710 ಆಗಿದೆ. 100 ಗ್ರಾಂ ಬೆಳ್ಳಿಯ ಬೆಲೆ ₹26,000 ಇದ್ದು, ಒಂದು ಗ್ರಾಂ ಬೆಳ್ಳಿ ₹260ಕ್ಕೆ ಲಭ್ಯವಿದೆ.
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ
- ಬೆಂಗಳೂರು: ₹14,710 ಪ್ರತಿ ಗ್ರಾಂ
- ಚೆನ್ನೈ: ₹14,710
- ಮುಂಬೈ: ₹14,710
- ದೆಹಲಿ: ₹14,725
- ಕೋಲ್ಕತಾ: ₹14,710
- ಕೇರಳ: ₹14,710
- ಅಹ್ಮದಾಬಾದ್: ₹14,715
- ಜೈಪುರ: ₹14,725
- ಲಕ್ನೋ: ₹14,725
- ಭುವನೇಶ್ವರ್: ₹14,710
21 ಆಗಸ್ಟ್ನ ಚಿನ್ನ-ಬೆಳ್ಳಿ ದರ
- 24 ಕ್ಯಾರಟ್ ಚಿನ್ನ: ₹16,048 ಪ್ರತಿ ಗ್ರಾಂ
- 22 ಕ್ಯಾರಟ್ ಚಿನ್ನ: ₹14,710 ಪ್ರತಿ ಗ್ರಾಂ
- 18 ಕ್ಯಾರಟ್ ಚಿನ್ನ: ₹12,036 ಪ್ರತಿ ಗ್ರಾಂ
- ಬೆಳ್ಳಿ: ₹260 ಪ್ರತಿ ಗ್ರಾಂ

READ THIS : ಆಭರಣ ಪ್ರಿಯರಿಗೆ ಶಾಕ್ – ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ಏರಿಕೆ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ Gold Rate ಏರಿಕೆ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಏರಿಕೆ ಕಂಡಿವೆ. ಸ್ಪಾಟ್ ಗೋಲ್ಡ್ ಪ್ರತಿ ಗ್ರಾಂಗೆ ಸುಮಾರು 146.44 ಡಾಲರ್ ಇದ್ದರೆ, ಸ್ಪಾಟ್ ಸಿಲ್ವರ್ ಪ್ರತಿ ಗ್ರಾಂಗೆ 2.223 ಡಾಲರ್ ಇದೆ.
ಭಾರತಕ್ಕೆ ಹೋಲಿಸಿದರೆ ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಮಲೇಷ್ಯಾದಲ್ಲಿ ಪ್ರತಿ ಗ್ರಾಂಗೆ ಸುಮಾರು ₹14,264, ದುಬೈನಲ್ಲಿ ₹14,177, ಅಮೆರಿಕದಲ್ಲಿ ₹14,167, ಸಿಂಗಾಪುರದಲ್ಲಿ ₹14,809, ಕತಾರ್ನಲ್ಲಿ ₹14,298, ಸೌದಿ ಅರೇಬಿಯಾದಲ್ಲಿ ₹14,259, ಓಮನ್ನಲ್ಲಿ ₹14,434 ಹಾಗೂ ಕುವೇತ್ನಲ್ಲಿ ₹14,086ರಷ್ಟಿದೆ.

ಬೆಳ್ಳಿ ದರ
ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆಯಲ್ಲೂ ವ್ಯತ್ಯಾಸವಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತಾ, ಅಹ್ಮದಾಬಾದ್, ಜೈಪುರ, ಲಕ್ನೋ ಮತ್ತು ಪುಣೆಯಲ್ಲಿ ಪ್ರತಿ ಗ್ರಾಂಗೆ ₹260 ಇದ್ದರೆ, ಚೆನ್ನೈ, ಕೇರಳ ಮತ್ತು ಭುವನೇಶ್ವರ್ನಲ್ಲಿ ₹265ರಷ್ಟಿದೆ.
ಗಮನಿಸಿ: ಚಿನ್ನ ಮತ್ತು ಬೆಳ್ಳಿಯ ದರಗಳು ಮಾರುಕಟ್ಟೆಯ ಏರಿಳಿತಕ್ಕೆ ಅನುಗುಣವಾಗಿ ಬದಲಾಗಬಹುದು. ಆಭರಣ ಖರೀದಿಸುವಾಗ ಜಿಎಸ್ಟಿ, ಮೇಕಿಂಗ್ ಚಾರ್ಜ್ ಸೇರಿದಂತೆ ಇತರ ಶುಲ್ಕಗಳು ಹೆಚ್ಚುವರಿಯಾಗಿ ಅನ್ವಯಿಸಬಹುದು.
MUST WATCH : ಕಾಡಾನೆ ಸೆರೆಗೆ ಭರ್ಜರಿ ಆಪರೇಷನ್ – 60ಕ್ಕೂ ಹೆಚ್ಚು ಸಿಬ್ಬಂದಿಯಿಂದ ಸರ್ಚಿಂಗ್





