
ಸ್ವರ್ಣ ಪ್ರಿಯರಿಗೆ ಮತ್ತೆ ಶಾಕ್ – Gold Rate ನದಲ್ಲಿಂದು ಭಾರೀ ಏರಿಕೆ

ಚಿನ್ನದ ದರದಲ್ಲಿ ಮತ್ತೆ ಭರ್ಜರಿ ಏರಿಕೆ ಕಂಡುಬಂದಿದ್ದು, ಆಭರಣ ಖರೀದಿದಾರರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಆಗಸ್ಟ್ 20, 2026ರಂದು ಬೆಂಗಳೂರಿನಲ್ಲಿ 22 ಕ್ಯಾರಟ್ Gold Rate ಪ್ರತಿ ಗ್ರಾಂಗೆ ₹395 ಏರಿಕೆಯಾಗಿದ್ದು, ₹14,600ಕ್ಕೆ ತಲುಪಿದೆ. ಇದೇ ವೇಳೆ 24 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹430 ಹೆಚ್ಚಾಗಿ ₹15,927ಕ್ಕೆ ಏರಿಕೆಯಾಗಿದೆ. ಲಭ್ಯವಿರುವ ಇಂದಿನ ದರಗಳಲ್ಲಿಯೂ ಇದೇ ಮಟ್ಟದ ಏರಿಕೆ ದಾಖಲಾಗಿದೆ.

22 ಕ್ಯಾರಟ್ ಚಿನ್ನದ ದರ
- 1 ಗ್ರಾಂ: ₹14,600
- 8 ಗ್ರಾಂ: ₹1,16,800
- 10 ಗ್ರಾಂ: ₹1,46,000
- 100 ಗ್ರಾಂ: ₹14,60,000
24 ಕ್ಯಾರಟ್ ಚಿನ್ನದ ದರ
- 1 ಗ್ರಾಂ: ₹15,927
- 8 ಗ್ರಾಂ: ₹1,27,416
- 10 ಗ್ರಾಂ: ₹1,59,270
- 100 ಗ್ರಾಂ: ₹15,92,700
ಒಂದು ದಿನದಲ್ಲಿ 22 ಕ್ಯಾರಟ್ ಚಿನ್ನದ ದರ ಪ್ರತಿ ಗ್ರಾಂಗೆ ₹395 ಹಾಗೂ 24 ಕ್ಯಾರಟ್ ಚಿನ್ನದ ದರ ₹430 ಏರಿಕೆಯಾಗಿದೆ. 10 ಗ್ರಾಂ ಲೆಕ್ಕದಲ್ಲಿ ಕ್ರಮವಾಗಿ ₹3,950 ಮತ್ತು ₹4,300 ಹೆಚ್ಚಳವಾಗಿದೆ.
READ THIS : ಚಿನ್ನದ ದರದಲ್ಲಿಂದು ಕೊಂಚ ಇಳಿಕೆ – ಇಲ್ಲಿದೆ ನೋಡಿ ಬೆಲೆ

ಪ್ರಮುಖ ನಗರಗಳಲ್ಲಿನ Gold Rate
ಚೆನ್ನೈ, ಮುಂಬೈ, ದೆಹಲಿ, ಕೋಲ್ಕತಾ ಹಾಗೂ ಹೈದರಾಬಾದ್ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ ಪ್ರತಿ ಗ್ರಾಂಗೆ ₹14,600 ಮತ್ತು 24 ಕ್ಯಾರಟ್ ಚಿನ್ನದ ದರ ₹15,927ರಷ್ಟಿದೆ.
ಬೆಳ್ಳಿ ದರದಲ್ಲೂ ಏರಿಕೆ
ಚಿನ್ನದ ಜತೆಗೆ ಬೆಳ್ಳಿ ದರವೂ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ ಬೆಳ್ಳಿ ಪ್ರತಿ ಗ್ರಾಂಗೆ ₹255ಕ್ಕೆ ತಲುಪಿದ್ದು, ಹಿಂದಿನ ದಿನಕ್ಕೆ ಹೋಲಿಸಿದರೆ ₹10ರಷ್ಟು ಏರಿಕೆಯಾಗಿದೆ. 10 ಗ್ರಾಂ ಬೆಳ್ಳಿಗೆ ₹2,550 ಹಾಗೂ ಒಂದು ಕೆ.ಜಿ. ಬೆಳ್ಳಿಗೆ ₹2,55,000 ಪಾವತಿಸಬೇಕಾಗಿದೆ.

MUST WATCH : 27ಬಾರಿ ಇರಿದು ಪ್ರಿನ್ಸಿಪಾಲ್ ನ ಕೊಂ* – 10ನೇ ಕ್ಲಾಸ್ ವಿದ್ಯಾರ್ಥಿಗಳು




