
ಪ್ರಿನ್ಸಿಪಾಲ್ ನ ಕೊಂದ 10 ನೇ ಕ್ಲಾಸ್ ವಿದ್ಯಾರ್ಥಿಗಳು

ತೆಲಂಗಾಣದ ನಲಗೊಂಡ ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, ಶಾಲೆಯ ಪ್ರಿನ್ಸಿಪಾಲ್ರನ್ನೇ 10 ನೇ ತರಗತಿಯ ವಿದ್ಯಾರ್ಥಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಮೃತ ಪ್ರಿನ್ಸಿಪಾಲ್ರನ್ನು ರೂಪಾರೆಡ್ಡಿ ಎಂದು ಗುರುತಿಸಲಾಗಿದೆ.
ನಡೆದಿದ್ದೇನು..?
ಹಾಸ್ಟೆಲ್ನಲ್ಲಿ ಓರ್ವ ವಿದ್ಯಾರ್ಥಿ ಬ್ಯಾಗ್ನಲ್ಲಿ ಮೊಬೈಲ್ ಪೋನ್ ಪತ್ತೆಯಾಗಿದ್ದು, ಪ್ರಿನ್ಸಿಪಾಲ್ ಹಾಸ್ಟೆಲ್ನಿಂದ ವಿದ್ಯಾರ್ಥಿಯನ್ನ ಹೊರಹಾಕಿದ್ದರು. ಇದೇ ದ್ವೇಷಕ್ಕೆ ಪ್ರಿನ್ಸಿಪಾಲ್ ರೂಪಾರೆಡ್ಡಿಯನ್ನು 10 ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಬರ್ಬರ ಕೊಲೆ ಮಾಡಿದ್ದಾರೆ.
READ THIS : ಹೆತ್ತ ತಂದೆಯನ್ನೇ ಕೊಲೆಗೈದ ಭೀಮಾತೀರದ ಹಂತಕಿ!

27 ಬಾರಿ ಇರಿದು ಪ್ರಿನ್ಸಿಪಾಲ್ ಕೊಲೆ
ಇನ್ನು ಪ್ರಿನ್ಸಿಪಾಲ್ನ 27 ಬಾರಿ ಇರಿದು ಕೊಲೆಗೈದ ಆರೋಪಿಗಳು ಅವರ ಬಳಿಯಿದ್ದ ₹2 ಲಕ್ಷ ಹಣವನ್ನು ದೋಚಿಕೊಂಡಿದ್ದಾರೆ ಎನ್ನಲಾಗಿದೆ.
ಮೃತ ಪ್ರಾಂಶುಪಾಲೆ ರೂಪಾ ರೆಡ್ಡಿ ಅವರು ನಲ್ಗೊಂಡ ಜಿಲ್ಲೆಯ ಕೊಂಡಮಲ್ಲೆಪಲ್ಲಿ ತಾಲೂಕು ಕೇಂದ್ರದ ಜೆಬಿ ಕಾಲೋನಿಯಲ್ಲಿರುವ ಖಾಸಗಿ ಶಾಲೆಯ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದರು. ಅವರು ತಮ್ಮ ಪತಿ ರಾಜೇಂದರ್ ರೆಡ್ಡಿ ಅವರೊಂದಿಗೆ ಜೆಬಿ ಕಾಲೋನಿಯಲ್ಲಿ ವಾಸಿಸುತ್ತಿದ್ದರು. ರೂಪಾ ರೆಡ್ಡಿ ಅವರ ಕುಟುಂಬವು ಹೈದರಾಬಾದ್ನಲ್ಲಿ ಸ್ವಂತ ಮನೆಯನ್ನು ಹೊಂದಿದೆ. ಪುತ್ರ ಅಭಿನವ್ ರೆಡ್ಡಿ ಹೈದರಾಬಾದ್ನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ.

MUST WATCH : ಮಾಜಿ ಸಚಿವ ಬಿ.ಸಿ. ನಾಗೇಶ್ ನಿಧನ – ಅಂತಿಮ ದರ್ಶನ ಪಡೆದ ಡಿಸಿಎಂ ಪರಂ




